ಜನಸ್ಪಂದನ ಕಾರ್ಯಕ್ರಮ

ಜಗಳೂರು:

    ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು, ಜನಪ್ರತಿನಿದಿಗಳು ಹೆಚ್ಚು ಆಸಕ್ತಿ ವಹಿಸಿ ಅರ್ಹ ಫಲಾನುಭವಿಗಳ ಮನೆಬಾಗಿಲಿಗೆ ಸೌಲಭ್ಯಗಳನ್ನು ತಲುಪಿಸಿದರೆ ಜನರು ನೆಮ್ಮದಿಯಿಂದ ಇರುತ್ತಾರೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.
ತಾಲೂಕಿನ ಸೊಕ್ಕೆ ಗ್ರಾಮದ ಮಾರುತಿ ಗ್ರಾಮಾಂತರ ಪ್ರೌಢಶಾಲಾ ಆವರಣದಲ್ಲಿ ಶುಕ್ರವಾರ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯಿತಿ ಇವರ ಸಹಾಯೋಗದಲ್ಲಿ ಹಮ್ಮಿಕೊಂಡಿದ್ದ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

     ಸರ್ಕಾರದ ಸೌಲತ್ತುಗಳು ಜನರಿಗೆ ತಲುಪದೇ ಇದ್ದರೆ, ಸ್ಥಳಕ್ಕೆ ಹೋಗಿ ನೇರವಾಗಿ ಮಂಜೂರಾತಿ ಕೊಡಿಸುವ ಉದ್ದೇಶದಿಂದ ಜನಸ್ಪಂದನ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಇಲಾಖೆಯ ಎಲ್ಲಾ ಅಧಿಕಾರಿಗಳು ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸುವ ಮಹತ್ವದ ಕಾರ್ಯಕ್ರಮವಾಗಿದೆ.

     ಜಿಲ್ಲೆಯ 6 ತಾಲೂಕುಗಳು ಉತ್ತಮ ಮಳೆ ಇಲ್ಲದೇ ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ಜಗಳೂರಿನಲ್ಲಿ ಅಂತರ್ಜಲ ಕುಸಿತದಿಂದ ಸಾವಿರಾರು ಅಡಿ ಬೋರ್ ಕೊರೆದರು ನೀರು ಸಿಗುವುದಿಲ್ಲ. ಬಹುತೇಕ ಗ್ರಾಮಗಳಲ್ಲಿ ಟ್ಯಾಂಕರ್‍ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ದಾವಣಗೆರೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

     ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ಕೇಂದ್ರ ಸರ್ಕಾರದ ಅನುದಾನದಲ್ಲಿ ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು 25ಕೋಟಿ ವೆಚ್ಚದಲ್ಲಿ ಎಸ್ಟಿ ಸಮುದಾಯದ ಏಕಲವ್ಯ ಶಾಲೆಯನ್ನು ನಿರ್ಮಿಸಲಾಗುವುದು. ಜಗಳೂರು ಸುಮಾರು 76 ವರ್ಷಗಳ ಕಾಲ ಬರಗಾಲ ಕಂಡ ತಾಲೂಕಾಗಿದ್ದು ಯಾವುದೇ ನದಿ, ಜಲ ಮೂಲಗಳಿಲ್ಲದೆ ಕುಡಿಯುವ ನೀರಿಗೆ ಬರಬಂದಿದೆ. ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

       ಕೆಎಸ್‍ಆರ್‍ಟಿಸಿ ಬಸ್ ಡಿಪೋ ನಿರ್ಮಿಸಲು ಒಪ್ಪಿಗೆ ಸಿಕ್ಕಿದ್ದು ಜಿಲ್ಲಾಧಿಕಾರಿಗಳು ಹಾಗೂ ತಹಸೀಲ್ದಾರ್ ಪಟ್ಟಣದಲ್ಲಿ 5 ಎಕರೆ ಜಾಗವನ್ನು ನೀಡಿದರೆ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

      ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಮಾತನಾಡಿ, ಸರ್ಕಾರದ ವಿವಿಧ ಯೋಜನೆಗಳು ಕೆಲ ಲೋಪದೋಷಗಳಿಂದ ಫಲಾನುಭವಿಗಳಿಗೆ ತಲುಪದೇ ಇರಬಹುದು ಅಥವಾ ಅಲೆದಾಡಿ ಸಾಕಾಗಿರಬಹುವುದು ಅಂತ ಫಲಾನುಭವಿಗಳಿಗೆ ನಿಗಧಿತ ಸ್ಥಳದಲ್ಲಿ ಪರಿಹಾರ ನೀಡಿ ವಿಲಂಭವಾಗದಂತೆ ಕ್ರಮಕೈಗೊಳ್ಳಲಾಗುವುದು. ವೃದ್ದಾಪ್ಯ 25, ಸಂದ್ಯಾ ಸುರಕ್ಷಾ 30, ವಿಧವಾ ವೇತನ 16, ಅಂಗವಿಕಲ 8, ಬಗರ್‍ಹುಕ್ಕುಂ ಸಾಗುವಳಿಯ 12 ರೈತರಿಗೆ, ಕೃಷಿಭಾಗ್ಯ ಯೋಜನೆ 28, ಭಾಗ್ಯಲಕ್ಷ್ಮೀ 05, ಅಂತರ್ಜಾತಿ 4 ಜನರಿಗೆ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಗುವುದು ಮಾಹಿತಿ ನೀಡಿದರು.

         ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಚೌಡಮ್ಮ, ಜಿ.ಪಂ ಅಧ್ಯಕ್ಷ ಕೆ.ಆರ್ ಜಯಶೀಲ, ಉಪಾಧ್ಯಕ್ಷೆ ರಶ್ಮಿ ರಾಜಪ್ಪ, ಸಾಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸವಿತಾ ಕಲ್ಲೇಶಪ್ಪ, ತಾ.ಪಂ ಅಧ್ಯಕ್ಷೆ ಮಂಜುಳಾ ಶಿವಾನಂದಪ್ಪ, ಜಿ.ಪಂ ಸದಸ್ಯೆ ಉಮಾವೆಂಕಟೇಶ್, ಹರಪನಹಳ್ಳಿ ಉಪವಿಭಾಗಧಿಕಾರಿ ನಜ್ಮಾ, ತಹಸೀಲ್ದಾರ್ ಶ್ರೀಧರ್‍ಮೂರ್ತಿ, ತಾ.ಪಂ ಇಒ ಜಾನಕಿರಾಮ್, ಬಿಇಒ ಈಶ್ವರಚಂದ್ರ ಸೇರಿದಂತೆ ಮತ್ತಿತರಿದ್ದರು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link