ಜನ ವಿರೋಧಿ ನೀತಿಯ ಆಡಳಿತದ ವಿರುದ್ಧ ಮತ ಚಲಾಯಿಸಿ

ದಾವಣಗೆರೆ:

         ಬೆಲೆಯೇರಿಕೆ ಮತ್ತು ಜನವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ತಮ್ಮ ಹಕ್ಕು ಚಲಾಯಿಸಬೇಕೆಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಡಾ|| ಶಾಮನೂರು ಶಿವಶಂಕರಪ್ಪ ಅವರು ಕರೆ ನೀಡಿದರು.

       ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶಗಳಾದ ಕೈದಾಳ್, ಕೈದಾಳ್ ಕ್ಯಾಂಪ್, ಗಿರಿಯಾಪುರ, ಕುಕ್ಕವಾಡ , ಹಳೇ ಕೊಳೇನಹಳ್ಳಿ ಮತ್ತು ಹೊಸ ಕೊಳೇನಹಳ್ಳಿ, ಜಡಗನಹಳ್ಳಿ , ಬಲ್ಲೂರು ಮತ್ತು ಬಲ್ಲೂರು ಮಟ್ಟಿ ಶಿರಗನಹಳ್ಳಿ, ನಾಗರಸನಹಳ್ಳಿ, ಕನಗೊಂಡನಹಳ್ಳಿ ಗ್ರಾಮಗಳಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀ ಹೆಚ್.ಬಿ.ಮಂಜಪ್ಪನವರ ಪರವಾಗಿ ಚುನಾವಣಾ ಪ್ರಚಾರ ಹಾಗೂ ರೋಡ್ ಷೋ ನಡೆಸಿ ಅವರು ಮಾತನಾಡಿದರು.
ದೇಶದಲ್ಲಿ ಕಡಿಮೆ ದರದಲ್ಲಿ ಸಿಗುತ್ತಿದ್ದ ಸಿಲಿಂಡರ್, ಪೆಟ್ರೋಲ್,ಡಿಸೇಲ್ ಬೆಲೆಗಳನ್ನು ಏರಿಸುವ ಮೂಲಕ ಜನ ಸಾಮಾನ್ಯರಿಗೆ ತೊಂದರೆ ಕೊಡುವ ಬಿಜೆಪಿ ಸರ್ಕಾರದ ವಿರುದ್ದ ಮತ ಚಲಾಯಿಸಲು ಗ್ರಾಮೀಣ ಭಾಗದವರು ಜಾತಿ-ಧರ್ಮ ನೋಡದೇ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದರು.

        ಅಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಮೋದಿ ಕೇವಲ ಭಾಷಣ ಮಾಡುತ್ತಾ ದೊಡ್ಡ ದೊಡ್ಡ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ ಹೊರತು ಜನಸಾಮಾನ್ಯರ, ರೈತರ ಸಂಕಷ್ಟಕ್ಕೆ ಎಂದಿಗೂ ಸಹ ಸ್ಪಂದಿಸಲಿಲ್ಲ ಎಂದ ಅವರು ರೈತರು ಖರೀದಿಸುವ ಬಿತ್ತನೆ ಬೀಜ, ಗೊಬ್ಬರಗಳಿಗೂ ಸಹ ತೆರಿಗೆ ಹಾಕುವ ಮೂಲಕ ರೈತ ಸಮುದಾಯವನ್ನು ಸಂಕಷ್ಟಕ್ಕೆ ದೂಡಿದ್ದಾರೆ ಎಂದು ಆರೋಪಿಸಿ ಇಂತಹ ರೈತ ವಿರೋಧಿ ಸರ್ಕಾರ ಬಂದರೆ ರೈತ ಸಮುದಾಯವನ್ನೆ ಇಲ್ಲದಂತೆ ಮಾಡಲಿದ್ದು., ರೈತರು ಜಾಗೃತರಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದರು.

        ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತುರ್ಚಘಟ್ಟದ ಬಸವರಾಜಪ್ಪ, ಹಾಲಿ ಸದಸ್ಯ ಕೆ.ಹೆಚ್.ಓಬಳೇಶಪ್ಪ, ಜಾಂಬು, ಕುಕ್ಕವಾಡ ಮಲ್ಲೇಶಪ್ಪ, ಮಹೇಶಣ್ಣ, ಮಹೇಂದ್ರ ಮತ್ತಿತರರು ಮಾತನಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಹಸ್ತದ ಗುರುತಿಗೆ ಮತ ಚಲಾಯಿಸಬೇಕೆಂದು ಗ್ರಾಮಸ್ಥರಲ್ಲಿ ಮನವಿ ಮಾಡಿದರು.

      ಈ ಚುನಾವಣಾ ಪ್ರಚಾರ ಹಾಗೂ ರೋಡ್ ಷೋನಲ್ಲಿ ಎಪಿಎಂಸಿ ಅಧ್ಯಕ್ಷ ಬಿಸಲೇರಿ ಈರಣ್ಣ, ಮಾಜಿ ಉಪಾಧ್ಯಕ್ಷ ಹದಡಿ ಹಾಲಪ್ಪ, ಮುದಹದಡಿ ದಿಳ್ಳೆಪ್ಪ, ನಂದಿಗೌಡ್ರು, ಶಿರಮಗೊಂಡನಹಳ್ಳಿ ರಾಘವೇಂದ್ರ, ತುರ್ಚಘಟ್ಟದ ರಿಯಾಜ್, ನಾಗರಸನಹಳ್ಳಿ ಸುರೇಶ್, ಅಂಜಿನಪ್ಪ, ಬಲ್ಲೂರು ಬಸವರಾಜ್, ಸ್ವಾಮಿ, ಶೇಖರಪ್ಪ, ಜಿಲ್ಲಾ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರುಗಳು, ತಾಲ್ಲೂಕು ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರುಗಳು, ಗ್ರಾಮ ಪಂಚಾಯಿತಿ ಹಾಲಿ ಮತ್ತು ಮಾಜಿ ಸದಸ್ಯರುಗಳು, ಗ್ರಾಮಾಂತರ ಪ್ರದೇಶಗಳ ಮುಖಂಡರುಗಳು ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಭಾಗವಹಿಸುವರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap