ಬಳ್ಳಾರಿ
ಬಳ್ಳಾರಿಯ ಜನರು ಯಾಕೆ ಈ ರೀತಿಯ ತೀರ್ಪನ್ನು ಕೊಟ್ಟಿದ್ದರೋ ನನಗೆ ಗೊತ್ತಿಲ್ಲ, ಆದರೆ ನನ್ನ ಜೀವನದ ಉದ್ದಗಲಕ್ಕೂ ಕ್ಷೇತ್ರದ ಅಭಿವೃದ್ಧಿಗೆ ಸೋತರು ಶ್ರಮಿಸುತ್ತೇನೆ. ಎಂದು ಉಗ್ರಪ್ಪ ಸೋಲಿನ ಬೀತಿಯಿಂದ ಹೊರಬಂದು ಮಾಧ್ಯಮಕ್ಕೆ ಹೇಳಿಕೆ ಉತ್ತರ ನೀಡಿದ ಪರಿಯಿದು,ಅದರ ಜೊತೆಗೆ ಮತದಾರರು ನೀಡಿದ ತೀರ್ಪು ಒಪ್ಪಿಕೊಂಡರು.
ನಾನು ಐದು ತಿಂಗಳು ಸಂಸದನಾಗಿ ಕೆಲಸವನ್ನು ಕ್ಷೇತ್ರದ ಮತ್ತು ಜಿಲ್ಲೆಯ ಜನರ ಪರವಾಗಿ ಕೇಂದ್ರದ ಸಂಸತ್ತಿನಲ್ಲಿ ಧ್ವನಿಯ ಮೂಲಕ ಗಮನ ಸೆಳೆದಿದ್ದೇನೆ ಮುಂದಿನ ದಿನಗಳಲ್ಲಿ ನನಗೆ ಮತ ನೀಡಿದ ಪ್ರಭುಗಳಿಗೆ ಇಲ್ಲೆ ಇದ್ದು ಅವರ ಕಷ್ಟದ ಕೆಲಸಗಳಿಗಾಗಿ ದುಡಿದ ಪಾಲುದಾರನಾಗುತ್ತೇನೆ ಎಂದರು.
ಮಾದ್ಯಮ ಮಿತ್ರರು ಒಗ್ಗಟ್ಟಿನ ಕೊರತೆ ಮತ್ತು ಶಾಸಕರು ನಿಮ್ಮನ್ನು ಒಂಟಿಯಾಗಿ ಮಾಡಿದರು. ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಶಾಸಕರು ಸಚಿವರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಹೇಳುವ ಪ್ರವೃತ್ತಿ ನನ್ನದಲ್ಲ ಪಕ್ಷ ಎಂದರೆ ತಾಯಿ ಇದ್ದ ಹಾಗೆ ತಾಯಿಗೆ ಯಾರಾದರೂ ದ್ರೋಹ ಮಾಡಿದ್ದರೆ ಅದರ ಅರಿವು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಿ ಅವರಿಗೆ ಗೊತ್ತಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು. ಪಕ್ಷದ ಅಂತರಿಕ ಕಲೆಗಳಿಂದ ನಾನು ಸೋತಿದ್ದೇನೆ ಎಂಬುದು ಗೊತ್ತಿದ್ದರೂ ಅದನ್ನು ತೊರ್ಪಡಿಸದೆ ಮಾಧ್ಯಮಕ್ಕೆ ಬಹಳ ಶಾಂತಿಯಿಂದ ಧೃತಿಗೆಡದೆ ಉತ್ತರ ನೀಡಿದರು.
ಇವಿಎಂ ಮಿಷನ್ ಬಗ್ಗೆ ನಾನು ಏನು ಹೇಳುವುದಿಲ್ಲ ಏಕೆಂದರೆ ಸೋತ ಸಂದರ್ಭದಲ್ಲಿ ಈ ರೀತಿಯ ಒಂದು ಹೇಳಿಕೆ ನೀಡಿದರೆ ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಅದರ ಬಗ್ಗೆ ಮಾತನಾಡಲು ವರಿಷ್ಠರು ಮತ್ತು ಪಕ್ಷದ ನಾಯಕರುಗಳು ತೀರ್ಮಾನಿಸುತ್ತಾರೆ.ಎಣಿಕೆ ಆರಂಭದಿಂದಲೂ ಹಿನ್ನಡೆಯನ್ನು ಕಾಣುತ್ತಲೇ ಮುಂದೆ ಸಾಗಿ ಏಳನೇ ಸುತ್ತಿನಲ್ಲಿ ಮಾತ್ರ 746 ಮುನ್ನಡೆ ಸಾಧಿಸಿದ್ದು ಬಿಟ್ಟರೆ ಕೊನೆಯ ಸುತ್ತಿನವರೆಗೆ ಮುನ್ನಡೆ ಕಾಯ್ದುಕೊಳ್ಳಲು ಬಿಜೆಪಿಯ ದೇವೇಂದ್ರಪ್ಪ ಅವಕಾಶ ನೀಡಲಿಲ್ಲ ಅದಕ್ಕೆ ಮತದಾರ ಪ್ರಭುಗಳು ಕಾರಣ ಎಂಬುದು ತಿಳಿದುಬಂದಿದೆ.ತನ್ನ ಎದುರಾಳಿ ದೇವೇಂದ್ರಪ್ಪ ನ ಎದುರು 560681 ಮತಗಳು ಪಡೆದು ಸೋಲು ಕಂಡರು.ಒಟ್ಟು
ಚಲಾವಣೆ ಯಾದ ಮತಗಳು 1221926 ಇದರಲ್ಲಿ ಕೆ ಗೂಳಪ್ಪ ಬಹುಜನ ಸಮಾಜ ಪಾರ್ಟಿ 9961 ಮತಗಳು ಲಭಿಸಿವೆ ಬಿ.ಈಶ್ವರಪ್ಪ ಶಿವಸೇನೆ 6919 ಮತಗಳು ಪಡೆದುಕೊಂಡರು.ಎ.ದೇವದಾಸ್ ಕಮೂನಿಸ್ಟ್ ಪಕ್ಷ 3833 ಮತಗಳು ನವೀನ್ ಕುಮಾರ್ ಭಾರತ ಪ್ರಭಾತ್ ಪಾರ್ಟಿ1402 ಮತಗಳು ನಾಯಕರ ರಾಮಪ್ಪ ಇಂಡಿಯನ್ ಲೇಬರ್ ಪಾರ್ಟಿ 1840 ಮತಗಳು ಬಿ.ರಘು ಪಿರಮಿಡ್ ಪಾರ್ಟಿ ಆಫ್ ಇಂಡಿಯಾ 2658 ಮತಗಳು ಪಿ ಡಿ ರಾಮ ನಾಯಕ್ ಆರ್ ಪಿ ಐ 2727 ಮತಗಳು ಟಿ ವೀರೇಶ ಸಮಾಜವಾದಿ ಫಾರ್ವರ್ಡ್ ಬ್ಲಾಕ್ 3397 ಮತಗಳು ಕಂಡಕ್ಟರ್ ಪಂಪಾಪತಿ ಪಕ್ಷೇತರ 3101 ಮತಗಳು ಒಟ್ಟು 35833 ಪಕ್ಷೇತರರು ಪಡೆದ ಮತಗಳು ಇನ್ನೂ ನೋಟಾ 9024 ಮತಗಳು ಚಲಾವಣೆ ಗೊಂಡಿವೆ