ಚಳ್ಳಕೆರೆ
ನಮ್ಮ ಸಂಸ್ಕತಿಯ ವಿಶೇಷ ಕೊಡುಗೆಯಾದ ಜಾನಪದ ಕಲೆಯನ್ನು ರಕ್ಷಣೆ ಮಾಡುವಲ್ಲಿ ಗ್ರಾಮೀಣ ಭಾಗದ ಕಲಾವಿದರ ಪಾತ್ರ ಮಹತ್ವ ಪೂರ್ಣವಾಗಿದ್ದು, ಈ ಕಲೆಯನ್ನು ಇಂದಿಗೂ ಜೀವತವಾಗಿ ಕಾಣಲು ಸಾಧ್ಯವಾಗಿರುವುದು ನಮ್ಮ ಕಲಾವಿದರ ಪರಿಶ್ರಮದಿಂದ. ಇಂತಹ ಕಲೆಯನ್ನು ನಾಡಿನಲ್ಲಿ ಸಂರಕ್ಷಿಸಿದ ಕಲಾವಿದರಿಗೆ ಮಾಶಾಸನ ಹೆಚ್ಚಿಸುವಂತೆ ಸರ್ಕಾರವನ್ನು ಒತ್ತಾಯ ಪಡಿಸುವುದಾಗಿ ಶಾಸಕ ಟಿ.ರಘುಮೂರ್ತಿ ಭರವಸೆ ನೀಡಿದರು.
ಅವರು, ಭಾನುವಾರ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾನಪದ ಸಾಂಸ್ಕತಿಕ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮದ ದ್ಯಾಮಲಾಂಭ ಸೋಬಾನೆ, ಸಾಂಸ್ಕತಿಕ ಸಂಘ, ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರ ಗ್ರಾಮೀಣಭಾಗದ ಜಾನಪದ ಕಲೆಯ ಉಳಿವಿಗಾಗಿ ನಿಗಮವನ್ನೇ ರಚಿಸಿದ್ದು, ನಿಗದ ರಾಜ್ಯದೆಲ್ಲೆಡೆ ಸಂಚರಿಸಿ ಈ ಕಲೆಗೆ ಸಂಬಂಧಪಟ್ಟ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ನೀಡಲಿದ್ದು, ಮುಂದಿನ ದಿನಗಳಲ್ಲಿ ಈ ಕಲೆಯ ಕಲಾವಿದರಿಗೆ ಉತ್ತಮ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಸರ್ಕಾರವನ್ನು ವಿನಂತಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ, ಜಾನಪದ ಕಲೆ ಜನ್ಮತಾಳಿದ್ದೇ ಮುಗ್ಧ ಗ್ರಾಮೀಣ ಜನರಲ್ಲಿ. ಅಕ್ಷರ ಜ್ಞಾನವಿಲ್ಲದಿದ್ದರೂ ಸಹ ಭಾವನೆಗಳನ್ನು ತುಂಬುವ ಕಲೆ ಇದಾಗಿದೆ. ಜಾನಪದ ಕಲೆ ಈ ನಾಡಿನ ವೈಶಿಷ್ಟತೆಗಳನ್ನು ಸದಾಕಾಲ ಹಸಿರಾಗುವಂತೆ ಮಾಡಿದೆ. ಜಾನಪದ ಕಲಾವಿದರು ಕಲೆಯ ಭಾಗವಾಗಿದ್ದು, ಇವರ ಸಂರಕ್ಷಣೆಗೆ ಸರ್ಕಾರ ಮುಂದಾಗಬೇಕಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿದ್ಯ ವಹಿಸಿದ್ದ ಹಿರಿಯೂರು ಆದಿಜಾಂಭವ ಸಂಸ್ಥಾನದ ಶ್ರೀಷಡಾಕ್ಷರಿಮುನಿ ಸ್ವಾಮೀಜಿ, ಕಲೆ ಎಂಬುವುದು ಎಲ್ಲರಲ್ಲೂ ಇರುವ ವಿಶೇಷ ಆಕರ್ಷಣಿಯ ಶಕ್ತಿಯಾಗಿದೆ. ಕಲೆಗೆ ಎಂದೂ ಸಹ ಜಾತಿ ಲೇಪನವನ್ನು ಮಾಡಬಾರದು. ಕಲೆ ನಮ್ಮ ಈ ನಾಡಿನ ಅತಿಶ್ರೇಷ್ಠ ಕೊಡುಗೆ ಎಂದರೆ ತಪ್ಪಾಗಲಾರದು. ಜಾನಪದ ಕಲೆಗಳು ನಾಡಿನ ಜನರ ಭಾವನೆಗಳಿಗೆ ವಿಶೇಷ ಅರ್ಥವನ್ನು ತುಂಬಿದೆ. ನಮ್ಮ ಪೂರ್ವಜನರು ಜಾನಪದ ಕಲೆಯ ಸಹಕಾರದಿಂದಲೇ ಸಮಾಜದ ಪರಿವರ್ತನೆಗೆ ಪ್ರಾಮಾಣಿಕ ಪ್ರಂiÀiತ್ನ ನಡೆಸಿದವರು. ಇಂತಹ ಕಲೆಯು ನಶಿಸಿ ಹೋಗದಂತೆ ಎಲ್ಲರೂ ಜಾಗ್ರತೆ ವಹಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯಿತಿ ಅಧ್ಯಕ್ಷ ರಾಜಣ್ಣ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಪಿ.ಪ್ರಕಾಶ್‍ಮೂರ್ತಿ, ಟಿ.ಗಿರಿಯಪ್ಪ, ಎಸ್.ನಿಜಲಿಂಗಪ್ಪ, ಕಾಡೆಮೆ ಸದಸ್ಯ ಚಂದ್ರಪ್ಪ, ಆರ್.ಡಿ.ಮಂಜುನಾಥ, ರಾಧಮ್ಮ, ಸುರೇಶ್, ತಿಪ್ಪೇಸ್ವಾಮಿ, ಸುಮ್ಮಕ್ಕ, ಗೌರಮ್ಮ, ಕಲಾವತಿ, ಹನುಮಂತಪ್ಪ ಪೂಜಾರ್, ಎಸ್.ರುದ್ರಮುನಿಯಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
