ಜನಪರ ಹೋರಾಟದಿಂದ ಹಿಂದೆ ಸರಿಯಲ್ಲ:ಎಡ ಪಕ್ಷಗಳ ಸ್ಪಷನೆ

ತುಮಕೂರು

      ನಮ್ಮದೆ ಆದ ತತ್ವ ಸಿದ್ದಾಂತಗಳನ್ನು ಇಟ್ಟುಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದ ಎಡ ಪಕ್ಷಗಳು ಸೋತಿರಬಹುದು.ಆದರೆ ಹೋರಾಟದಿಂದ ಹಿಂದೆ ಸರಿದಿಲ್ಲ.ಇಂದಿಗೂ, ಮುಂದೆಯೂ ನಮ್ಮ ಹೋರಾಟ ಜನಗಳ ಪರವಾಗಿ ಇದ್ದೇಯೇ ಇರುತ್ತದೆ ಎಂದು ಸಿಪಿಐ ಮತ್ತು ಸಿಪಿಐ(ಎಂ) ಮುಖಂಡರು ತಿಳಿಸಿದ್ದಾರೆ.

        ಮಾಜಿ ಪ್ರಧಾನಿಯೊಬ್ಬರ ಸ್ಪರ್ಧೆಯಿಂದ ಅತ್ಯಂತ ಪ್ರತಿಷ್ಠೆಯ ಕಣವಾಗಿದ್ದ ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ, 17,227 ಮತಗಳನ್ನು ಪಡೆದು,ಮೂರನೇ ಸ್ಥಾನದಲ್ಲಿರುವ ಸಿಪಿಐ ಅಭ್ಯರ್ಥಿ ಎನ್.ಶಿವಣ್ಣ,ಸಿಪಿಐ(ಎಂ)ನ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಮುಖಂಡರಾದ ಗಿರೀಶ್, ಕಂಬೇಗೌಡ,ಅಶ್ವಥನಾರಾಯಣ, ಶಶಿಧರ್, ಕಾಂತರಾಜು ಸುದ್ದಿಗೋಷ್ಠಿ ನಡೆಸಿ, ಈ ವಿಚಾರವನ್ನು ಸ್ಪಷ್ಟಪಡಿಸಿದರು.

       ಇಂದು ದೇಶದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ, ಕಾಂಗ್ರೆಸ್‍ಗೆ ಪರ್ಯಾಯವೆಂದರೆ ಅದು ಎಡಪಕ್ಷಗಳು,ಕಾರ್ಮಿಕರು, ರೈತರು, ಈ ದೇಶದ ಶೋಷಿತ ಸಮುದಾಯಗಳ ಪರ ಹೋರಾಟ ನಡೆಸುತ್ತಾ ಬಂದಿರುವ ಎಡಪಕ್ಷಗಳು ಚುನಾವಣೆಯಲ್ಲಿ ಸೋತಾಗ ಕುಗ್ಗುವುದು,ಅಧಿಕಾರದಲ್ಲಿರುವಾಗ ಹಿಗ್ಗುವ ಪ್ರಶ್ನೇಯೇ ಇಲ್ಲ.ರಾಷ್ಟ್ರದ ವಿಚಾರದಲ್ಲಿ ನಮ್ಮ ಹೋರಾಟ ನಿರಂತರ ಎಂದರು.

        ಕಳೆದ ಬಾರಿಗೆ ಎಂದರೆ 2014ರ ಲೋಕಸಭಾ ಚುನಾವಣೆಗೆ ಹೊಲಿಕೆ ಮಾಡಿದರೆ ಈ ಬಾರಿ ತುಮಕೂರು ಕ್ಷೇತ್ರದ ಜನತೆ 7 ಸಾವಿರಕ್ಕೂ ಅಧಿಕ ಮತಗಳನ್ನು ಎಡಪಕ್ಷಗಳಿಗೆ ಹೆಚ್ಚಾಗಿಯೇ ನೀಡುವ ಮೂಲಕ ತಮ್ಮ ಅಸ್ಥಿತ್ವವೇನು ಎಂಬುದನ್ನು ತೋರಿಸಿದ್ದಾರೆ.ಕ್ಷೇತ್ರದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಮಗೆ ಈ ಹಿಂದೆ ಚುನಾವಣೆಗಿಂತ ಹೆಚ್ಚಿನ ಮತಗಳು ಬಂದಿವೆ.ಇದಕ್ಕಾಗಿ ನಾನು ಮತದಾರರಿಗೆ, ಪಕ್ಷದ ಮುಖಂಡರಿಗೆ, ಪ್ರತ್ಯೇಕ್ಷವಾಗಿ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಎನ್.ಶಿವಣ್ಣ ತಿಳಿಸಿದರು.

       ತುಮಕೂರು ಜಿಲ್ಲೆಯ ನೀರಾವರಿ ಹೋರಾಟದ ಬಗ್ಗೆ ಈ ಹಿಂದೆಯೂ ಎಡ ಪಕ್ಷಗಳು ಹೋರಾಟ ನಡೆಸಿವೆ. ಮುಂದೆಯೂ ನಡೆಸಲಿವೆ.ಇದು ಯಾರಿಂದಲೂ ಹೇಳಿಸಿಕೊಂಡು ಮಾಡುವ ಪ್ರತಿಭಟನೆಯಲ್ಲ. ಜಿಲ್ಲೆಯ ನಿಗಧಿಯಾಗಿರುವ ನೀರು ಹರಿಯಬೇಕೆಂಬುದರಲ್ಲಿ ಎರಡು ಮಾತ್ತಿಲ್ಲ. ಈ ಹಿನ್ನೆಲೆಯಲ್ಲಿ ಒಬ್ಬಂಟಿಯಾಗಿ, ಇಲ್ಲವೇ ಎಲ್ಲಾ ಪಕ್ಷಗಳ ಜೊತೆ ಸೇರಿ ಹೋರಾಟಕ್ಕೆ ಸಿದ್ದವಾಗಿದೆ.ಸದಾ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆಯ ಜನ, ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವು ಒದಗಿಸುವ ನಿಟ್ಟಿನಲ್ಲಿ ಸದ್ಯದಲ್ಲಿಯೆ ಹೋರಾಟ ರೂಪಿಸಲಾಗುವುದು ಎಂದು ಎಡ ಪಕ್ಷಗಳ ಮುಖಂಡರು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link