ಚಿತ್ರದುರ್ಗ
ಜಗತ್ತಿನಲ್ಲಿರುವ ಒಟ್ಟು7.4 ಶತಕೋಟಿ ಜನಸಂಖ್ಯೆಯಲ್ಲಿ ಶೇ 17.5 ರಷ್ಟು ಜನಸಂಖ್ಯೆ ನಮ್ಮ ಭಾರತದಲ್ಲಿದೆ. ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಇದೇ ರೀತಿ ಜನಸಂಖ್ಯೆ ಬೆಳೆಯುತಿದ್ದರೆ ಇನ್ನು ಒಂದೆರಡು ವರ್ಷಗಳಲ್ಲಿ ಮೊದಲ ಸ್ಥಾನಕ್ಕೆ ಏರುವ ಎಲ್ಲಾ ಸಾಧ್ಯತೆಗಳಿವೆ ಎಂದು ಪತಂಜಲಿ ಯೋಗ ಪೀಠದ ಯೋಗ ಗುರು ರವಿ ಕೆ.ಅಂಬೇಕರ್ ಆತಂಕ ವ್ಯಕ್ತಪಡಿಸಿದರು.
ನಗರದ ಮೆಜೆಸ್ಟಿಕ್ ವೃತ್ತದಲ್ಲಿರುವ ಮದಕರಿನಾಯಕ ಪ್ರತಿಮೆ ಎದುರು ಇಂದು ಪತಂಜಲಿ ಯೋಗ ಸಮಿತಿಯು , ಸರ್ಕಾರಿ ಕೋಟೆ ಪ್ರೌಢಶಾಲೆಯ ಮಕ್ಕಳ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಶ್ವ ಜನಸಂಖ್ಯೆ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
” ಭಾರತದಲ್ಲಿ ಅತಿ ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ತರಡೆಯಲು ಕೆಲವೊಂದು ಕಠಿಣ ಕಾನೂನುಗಳನ್ನು ತರಬೇಕಾಗಿದೆ ಒಂದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರುವ ಕುಟುಂಬದ ಪಡಿತರ ಕಾರ್ಡ್, ಗ್ಯಾಸ್ ಸೌಲಭ್ಯ ಸರ್ಕಾರಿ ಹುದ್ದೆ ಇವನ್ನೆಲ್ಲಾ ರದ್ದುಗೊಳಿಸುವಂತ ಕಾನೂನನ್ನು ಜಾರಿಮಾಡಬೇಕು ಆಗ ಮಾತ್ರ ಜನಸಂಖ್ಯೆಯನ್ನು ತಡೆಯಲು ಸಾಧ್ಯವಾಗುವುದು” ಎಂದು ಹೇಳಿದರು.
ಯೋಗ ಶಿಕ್ಷಕಿ ಶ್ರೀಮತಿ ಲಲಿತಾ ಬೇದ್ರೆ ಮಾತನಾಡಿ ” ಭಾರತದಲ್ಲಿ ಶೇಕಡ 47 ರಷ್ಟು ಯುವತಿಯರು 18 ವರ್ಷ ತುಂಬುವ ಮೊದಲೇ ಮದುವೆಯಾಗುತ್ತಿದ್ದಾರೆ ಇದು ಸಹ ನಮ್ಮ ದೇಶದ ಜನಸಂಖ್ಯೆ ಹೆಚ್ಚಲು ಕಾರಣವಾಗಿದೆ, ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವುದರಿಂದ ಜಗತ್ತಿನ 800 ಗರ್ಭಿಣಿಯರು ಸಾಯುತ್ತಿದ್ದಾರೆ, ಅವರಲ್ಲಿ ಶೇ 20 ರಷ್ಟು ಗರ್ಭಿಣಿಯರು ಭಾರತೀಯರಾಗಿದ್ದಾರೆ.ಎಂದು ಖೇದ ವ್ಯಕ್ತಪಡಿಸಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರೊ. ಕೆ.ಕೆ. ಕಮಾನಿ ಮಾತನಾಡಿ ” ಕೃಷಿ ಪ್ರಧಾನ ಉದ್ಯೋಗ, ಸಾಮಾಜಿಕ ಮೌಲ್ಯಗಳು, ಸ್ತ್ರೀಯರ ಸ್ಥಾನಮಾನ, ಅನಕ್ಷರತೆ, ಜನನ-ಮರಣ ಪ್ರಮಾಣದಲ್ಲಿಯ ಅಂತರ, ವೈವಾಹಿಕ ಸಂಪ್ರದಾಯ ಅಂತರ, ವಿವಾಹಿತ ಸ್ತ್ರೀಯರ ಫಲವತ್ತತೆ, ಸಂತಾನೋತ್ಪತ್ತಿ ಅವಧಿ, ಧಾರ್ಮಿಕ ಪ್ರಭಾವ, ಪುತ್ರ ವ್ಯಾಮೋಹ ಹಾಗೂ ಕುಟುಂಬ ಯೋಜನೆಯ ವೈಫಲ್ಯಕ್ಕೆ ” ಕಾರಣವಾಗಿದೆ ಎಂದು ಭಾರತದ ಜನಸಂಖ್ಯೆ ಬೆಳವಣಿಗೆಗೆ ಕಾರಣ ನೀಡಿದರು.
ಸುಮಾರು ಐದುನೂರಕ್ಕೂ ಹಚ್ಚು ಮಕ್ಕಳು ಕೋಟೆ ಶಾಲೆಯ ಆವರಣದಿಂದ ಮೆಜೆಸ್ಟಿಕ್ ವೃತ್ತದವರೆಗೆ ಜಾಥದ ಮೂಲಕ ಮದಕರಿ ನಾಯಕ ಪ್ರತಿಮೆಯ ಮುಂದೆ ಜನಸಂಖ್ಯೆ ನಿಯಂತ್ರಣ ಘೋಷಣೆಗಳನ್ನು ಕೂಗಿದರು. ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಸಮಿತಿಯ ಸಹಕಾರ್ಯದರ್ಶಿ ಎಲ್.ಎಸ್ ಬಸವರಾಜ್, ಹಿರಿಯ ಯೋಗ ಶಿಕ್ಷಕ ಹೊರಕೇರಪ್ಪ, ಕೋಟೆ ಶಾಲೆಯ ಮುಖ್ಯೋಪಾಧ್ಯಾಯರಾದ ಜಗದೀಶ್ , ಸಹಶಿಕ್ಷಕರಾದ ಧನಂಜಯ ಮುಂತಾದವರು ಭಾಗವಹಿಸಿದ್ದರು.