ಜನತಾ ಕಫ್ರ್ಯೂಗೆ ತಿಪಟೂರು ಸ್ತಬ್ಧ

ತಿಪಟೂರು
    ಜಗದಗಲ ತನ್ನ ಕಬಂದ ಬಾಹುವನ್ನು ಚಾಚಿ ಸಿಕ್ಕಸಿಕ್ಕವರನ್ನೆಲ್ಲ ಅಪ್ಪಿಕೊಳ್ಳುತ್ತಿರುವ ಮಹಾಮಾರಿ ಕರೋನ ವೈರಸ್ ಹರಡುವುದನ್ನು ತಪ್ಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕಫ್ರ್ಯೂವಿಗೆ ತಿಪಟೂರಿನಲ್ಲಿ ಸಾರ್ವಜನಿಕರು ಉತ್ತವಾಗಿ ಸ್ಪಂದಿಸಿದರು.
       ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕಫ್ರ್ಯೂಗೆ ಕಲ್ಪತರು ನಾಡಿನ ಜನತೆ ವ್ಯಾಪಕ ಬೆಂಬಲ ಸೂಚಿಸಿ ಪೆಟ್ರೋಲ್ ಬಂಕ್, ಹೋಟೆಲ್, ಬೀದಿ ಬದಿ ವ್ಯಾಪಾರ, ಆಟೋ, ಖಾಸಗಿ ಹಾಗೂ ಕೆ.ಎಸ್.ಆರ್.ಟಿ.ಸಿ ಬಸ್‍ಗಳ ಸಂಚಾರ ಬಂದ್ ಮಾಡಲಾಗಿತ್ತು. ಇಂದು ನಗರಕ್ಕೆ ಬೆಳಂಬೆಳಗ್ಗೆಯೇ ಬೇರೆ ಬೇರೆ ಭಾಗದಿಂದ ಬಂದವರು ಬಸ್ ಇಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಸಿಕ್ಕ ಸಿಕ್ಕ  ಆಟೋ, ಲಾರಿ, ಟೆಂಪೆÇ ಹತ್ತಿ ಜನರು ಮನೆಗೆ ಪಯಣಿಸುತ್ತಿರುವ ದೃಶ್ಯ ಕಂಡುಬಂದಿತು.
    ಇಂದು ಬೆಳಿಗಿನಿಂದಲೂ ಪಟ್ಟಣದ ಯಾವುದೇ ಅಂಗಡಿಗಳು ತೆರೆದಿಲ್ಲ, ಜನರು ಮನೆಗಳಿಂದ ಹೊರಗಡೆ ಬರದೇ ಜನತಾ ಕಫ್ರ್ಯೂಗೆ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದ್ದಾರೆ. ಜನತಾ ಕಫ್ರ್ಯೂಗೆ ಆಟೋ ಚಾಲಕರ ಸಂಘ, ಬಸ್ ಮಾಲೀಕರ ಸಂಘ, ಬೀದಿ ಬದಿ ವ್ಯಾಪಾರಿಗಳು, ವರ್ತಕರ ಸಂಘ, ಬೆಂಬಲ ವ್ಯಕ್ತ ಪಡಿಸಿದ್ದು ಜನತಾ ಕಫ್ರ್ಯೂ ಯಶಸ್ವಿಯಾಗಲು ಸಹಕರಿಸಿದರು.
ಹಾಲಿಗೆ ಡಿಮ್ಯಾಂಡ್
     ಇಂದು ಭಾನುವಾರ ವಾದ್ದರಿಂದ ನಿದಾನವಾಗಿ ಎದ್ದು ತಮ್ಮ ಕೆಲಸ ಮಾಡಿಕೊಂಡರಾಯಿತು ಎಂದು ಎದ್ದ ಸೋಂಬೇರಿಗಳಿಗೆ ಇಂದು ಹಾಲುಸಿಗಲಿಲ್ಲ. ಹಾಲು ಮಾರುವವರು ಜನತಾ ಕಫ್ರ್ಯೂಗೆ ಬೆಂಬಲ ಸೂಚಿಸಲು ತಾವು ಸಹ 7 ಗಂಟೆಗೆ ಬಾಗಿಲು ಹಾಕಿದರು.ಸದಾ ಜನರಿಂದ ಗಿಜಿಗುಡುತ್ತಿದ್ದ ಸಂತೆಪೇಟೆ, ಎಲೆ ಆಸರ, ಕೋಳಿ ಮತ್ತು ಮಾಂಸದ ಮಾರುಕಟ್ಟೆ, ತರಕಾರಿ ಮಾರುಕಟ್ಟೆಯಲ್ಲಿ ಜನರೇ ಇರಲಿಲ್ಲ. ಪಾನ್‍ಬೀಡ ಮತ್ತು ಸಿಗರೇಟ್ ಪ್ರಿಯರು ಎಲ್ಲಿ ಅಂಗಡಿ ತೆಗೆದಿದೆಯೋ ಎಂದು ಊರು ಸುತ್ತುವಂತಾಗಿತ್ತು. 
    ಸಂಜೆ 5 ಕ್ಕೆ ಸರಿಯಾಗಿ ನಗರದ ತುಂಬಾ ತಮ್ಮ ಪ್ರಾಣವನ್ನು ಮುಡಿಪಾಗಿಟ್ಟು ನಮ್ಮ ಆರೋಗ್ಯವನ್ನು ಕಾಪಾಡುತ್ತಿರುವ ಆರೋಗ್ಯ ಸೈನಿಕರಾದ ಡಾಕ್ಟರ್, ದಾದಿಯರು, ಸುಶುೃಕರು ಗಳಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಗಂಟೆ, ಜಾಗಟೆ, ತಟ್ಟೆಗಳನ್ನು ಬಾರಿಸಿ ಶಂಕವನ್ನು ಊದಿ ಗೌರವ ಸಲ್ಲಿಸಿದರು..
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link