ಶಿರಾದಲ್ಲಿ ಜನತಾ ಕಫ್ರ್ಯೂ ಯಶಸ್ವಿ

ಶಿರಾ:

        ಕೋವಿಡ್-19 ಹಿನ್ನೆಲೆಯಲ್ಲಿ ಕರೆ ನೀಡಲಾಗಿದ್ದ ಭಾನುವಾರದ ಜನತಾ ಕಫ್ರ್ಯು ಸಂಪೂರ್ಣವಾಗಿ ಯಶಸ್ವಿಗೊಂಡಿತು.
ಶನಿವಾರ ರಾತ್ರಿಯಿಂದಲೂ ಬಹುತೇಕ ಅಂಗಡಿ-ಮುಗ್ಗಟ್ಟು ಮುಚ್ಚಲ್ಪಟ್ಟವಲ್ಲದೆ ಭಾನುವಾರ ಬೆಳಿಗ್ಗೆ ದಿನಸಿ ಅಂಗಡಿ ಹಾಗೂ ಔಷಧಿ ಅಂಗಡಿಗಳಿಗೆ ಮಾತ್ರಾ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 10 ಗಂಟೆಯವರೆಗೆ ಕೋಳಿ-ಮಾಂಸದಂಗಡಿಗಳಲ್ಲಿ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಸಿಲಾಗಿತ್ತು. ಹೊರಭಾಗದಿಂದ ಬರುವವರನ್ನು ಬುಕ್ಕಾಪಟ್ಟಣ ರಸ್ತೆ, ಶಿರಾ ಧರ್ಗಾ ವೃತ್ತ, ಪ್ರವಾಸಿ ಮಂದಿರದ ವೃತ್ತ ಹಾಗೂ ಓಜುಗುಂಟೆ ಸಮೀಪದ ಚೆಕ್‍ಪೋಸ್ಟ್‍ಗಳಲ್ಲಿ ನಿರ್ಬಂಧ ಹೇರಲಾಗಿತ್ತು.

       ಇಡೀ ಶಿರಾ ನಗರ ಒಂದು ದಿನದ ಜನತಾ ಕಫ್ರ್ಯೂನಿಂದ ಸಂಪೂರ್ಣ ಬಂದ್‍ನಂತೆ ಕಂಡು ಬಂದಿದ್ದು ಆರಕ್ಷಕ ಅಧಿಕಾರಿಗಳು ಹಾಗೂ ಸಿಬ್ಬಂಧಿಯ ಬಿಗಿ ಕಾವಲು ಜನತಾ ಕಫ್ರ್ಯೂ ಯಶಶ್ವಿಗೊಳ್ಳಲು ಕಾರಣವಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap