ಜಪಾನ್:
ಭಾರತದ ಮಿತ್ರ ರಾಷ್ಟ್ರಗಳಲ್ಲಿ ಪ್ರಮುಖವಾದಂತಹ ಜಪಾನ್ ಎರಡನೇ ವಿಶ್ವಯುದ್ಧದ ನಂತರ ಪ್ರಪ್ರಥಮ ವಿಮಾನವಾಹಕ ನೌಕೆಯನ್ನು ಪಡೆದುಕೊಳ್ಳಲ್ಲಿದೆ ಎಂದು ಜಪಾನ್ ಪ್ರಧಾನಿ ತಿಳಿಸಿದ್ದಾರೆ ಈ ಹಡಗಿನಿಂದ ಪೆಸಿಫಿಕ್ ಮಹಾಸಮುದ್ರದಲ್ಲಿ ನಡೆಯುತ್ತಿರುವಂತಹ ಚೀನಾದ ಕಡಲ ಗಡಿ ವಿಸ್ತರಣೆ ಕಾರ್ಯವನ್ನು ಸಮರ್ಥವಾಗಿ ಎದುರಿಸಲು ಪ್ರಯೋಗಿಸುವಂತಹ ನಿರೀಕ್ಷೆಯಿದೆ.
ಜಪಾನ್ ಸರ್ಕಾರ ಈಗಿರುವ ತನ್ನ ಎರಡು ಇಜುಮೋ ವರ್ಗದ ಹೆಲಿಕಾಪ್ಟರ್ ವಾಹಕಗಳನ್ನು ನವೀಕರಿಸಲಿದೆ ಮತ್ತು ಈ ಅಭಿವೃದ್ಧಿಪಡಿಸುವಿಕೆಯಿಂದಾಗಿ ಯುದ್ಧ ವಿಮಾನಗಳನ್ನು ಸಾಗಿಸಲು ಬೇಕಾದ ಶಕ್ತಿ ಸಿಕ್ಕಿದಂತಾಗುತ್ತದೇ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಮುಂದಿನ ತಿಂಗಳು ಬಿಡುಗಡೆಗೊಳ್ಳುವ ಹೊಸ ರಕ್ಷಣಾ ಮಾರ್ಗಸೂಚಿಗಳಲ್ಲಿ ಯೋಜನೆಗಳನ್ನು ಸೇರಿಸಲಾಗುತ್ತದೆ ಎಂಬ ನಿರೀಕ್ಷೆ ಇದೆ.
ಅಮೇರಿಕಾದಿಂದ ಸುಮಾರು 100 ಎಫ್ -35 ಸ್ಟೆಲ್ತ್ ವಿಮಾನಗಳನ್ನು ಖರೀದಿಸಲು 8.8 ಬಿಲಿಯನ್ ಡಾಲರ್ ಹಣ ವ್ಯಯವಾಗುತ್ತಿದೆ , ಡೊನಾಲ್ಡ್ ಟ್ರಂಪ್ ಅವರು ಜಪಾನ್ ಗೆ ಅಮೇರಿಕ ನಿರ್ಮಿತ ಮಿಲಿಟರಿ ಉಪಕರಣಗಳನ್ನು ಖರೀದಿಸಲು ಕಳೆದ ವರ್ಷದ ಅಹ್ವಾನಿಸಿತ್ತು ಎಂದು ಜಪಾನ್ ಪ್ರಧಾನಿ ತಿಳಿಸಿದ್ದಾರೆ ಮತ್ತು ಮುಂದಿನ ದಿನಮಾನಗಳಲ್ಲಿ ನಮ್ಮ ಜಪಾನ್ ತನ್ನ ಮಿಲಿಟರಿ ಶಕ್ತಿಯನ್ನು ದ್ವಿಗುಣ ಮಾಡಿಕೊಳ್ಳುವ ನಿರೀಕ್ಷೆ ಇವೆ ಎಂದು ಮಾಧ್ಯಮ ಮೂಲಗಳು ತಿಳಿಸಿವೆ .
ಜಪಾನ ಈಗಿರುವ ಪರಿಸ್ಥಿತಿಯಲ್ಲಿ ತನ್ನ ಮಿಲಿಟರಿ ಶಕ್ತಿ ಹೆಚ್ಚಿಸಿಕೊಳ್ಳವ ಮೂಲಕ ಜಾಗತಿಕವಾಗಿ ತನ್ನ ಮಿತ್ರ ರಾಷ್ಟ್ರಗಳ ಬೆಂಬಲಕ್ಕೂ ನಿಲ್ಲಬಹುದು ಎಂಬ ಆಶಯ ಮನೆಮಾಡಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








