ಪಾವಗಡ
ತಾಲ್ಲೂಕಿನ ಕೆ.ಟೆ. ಹಳ್ಳಿಯ ಬಳಿಯ ರೊಪ್ಪದಲ್ಲಿ ಸುಮಾರು ನೂರೈವತ್ತಕ್ಕೂ ಹೆಚ್ಚಿನ ಗೋವುಗಳು ಅನೇಕ ದಿನಗಳಿಂದ ಸರಿಯಾದ ಮೇವಿಲ್ಲದೆ ಸೊರಗಿ, ನಿತ್ರಾಣವಾಗಿ ಪರಿತಪಿಸುವ ಸುದ್ದಿಯನ್ನು ಕೇಳಿದಾಕ್ಷಣ ಪೂಜ್ಯ ಸ್ವಾಮಿ ಜಪಾನಂದಜಿರವರು ಒಂದು ಲೋಡ್ ಮೇವಿನೊಂದಿಗೆ ತಾವೇ ಸ್ವತಃ ಪರಿಸ್ಥಿತಿಯನ್ನು ಅವಲೋಕಿಸಲು ಭೇಟಿ ನೀಡಿ ಗೋವುಗಳಿಗೆ ಸ್ವತಃ ಮೇವನ್ನು ನೀಡಿದ ದೃಶ್ಯ ಎಂತಹವರಿಗೂ ಮನಕಲಕುವಂತಿತ್ತು.
ಈ ರಾಜಕೀಯ ಕೆಸರಾಟದಲ್ಲಿ ಭೀಕರ ಬರಗಾಲದ ಪರಿಹಾರ ಯೋಜನೆ ಸರಿ ಸುಮಾರು ಆರು ತಿಂಗಳಿನಿಂದ ನಡೆಸುತ್ತಿರುವ ಶ್ರೀ ರಾಮಕೃಷ್ಣ ಸೇವಾಶ್ರಮದ ಕಾರ್ಯವೈಖರಿಯನ್ನು ಇಡೀ ರೈತ ಸಮುದಾಯ, ಗೋಪಾಲಕರ ಸಮುದಾಯ ಹಾಗೂ ನಾಗರಿಕರು ಹೃದಯತುಂಬಿ ಮೆಚ್ಚಿದ್ದಾರೆ. ಆದರೆ ಅಧಿಕಾರಿವರ್ಗದವರು, ನಮ್ಮನ್ನಾಳುವ ನಾಯಕರು ಅಪ್ಪಿತಪ್ಪಿ ಒಂದು ಬಾರಿಯಾದರು ಸೇವಾಶ್ರಮದೆಡೆಗೆ ಭೇಟಿ ನೀಡುವುದಾಗಲಿ ಅಥವಾ ವಿಚಾರಿಸುವುದಾಗಲಿ ಈ ಗೊಡವೆಗೆ ಹೋಗಲಿಲ್ಲ. ನಿಜಕ್ಕೂ ಇದು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.
ಸ್ವಾಮಿ ಜಪಾನಂದಜಿ ಮಾತ್ರ ತಮ್ಮ ಸೇವಾಕಾರ್ಯವನ್ನು ನಿರಂತರವಾಗಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಕುಡಿಯುವ ನೀರು, ಮೇವು, ಪಶುಗಳಿಗೆ, ಪಕ್ಷಿಗಳಿಗೆ ಕಾಳು ಇತ್ಯಾದಿಯನ್ನು ಹಂಚುತ್ತಲೇ ಇದ್ದಾರೆ. ಆದರೆ ಜವಾಬ್ದಾರಿಯಿಂದ ಕೆಲಸ ಮಾಡುವವರು ಜಾಣ್ಮೆಯಿಂದ ನುಣುಚಿಕೊಳ್ಳುತ್ತಿದ್ದಾರೆ.!
ಈ ಹಸುಗಳು ಜುಂಜಪ್ಪನ ಹೆಸರಿನಲ್ಲಿರುವ ದೇವರ ಹಸುಗಳು ಎಂದು ತಿಳಿದು ಬಂದಿದೆ. ಬರಗಾಲದ ಬವಣೆಯಿಂದ ಮೇವನ್ನು ಹುಡುಕಿಕೊಂಡು ಸುಮಾರು ನೂರೈವತ್ತುಕ್ಕೂ ಹೆಚ್ಚಿನ ಗೋವುಗಳಿಗೆ ಮೇವನ್ನು ನೀಡಿ ಅವುಗಳಿಗೆ ಪುನರ್ಜನ್ಮ ನೀಡಿದಂತಾಯಿತು. ಸ್ವಾಮಿ ಜಪಾನಂದಜಿರವರ ಈ ಗೋಸೇವೆ ಹೀಗೆಯೆ ಇನ್ನೂ ಮುಂದುವರಿಯಲಿ ಎಂಬುದೇ ಗೋಪಾಲಕರ ಮನದಾಸೆ. ಈ ಹಸುಗಳು ಗಂಧಕಲ್ಲ ಹಟ್ಟಿ, ಆಂಧ್ರಪದೇಶದಿಂದ ನೀರು ಮತ್ತು ಮೇವನ್ನು ಹುಡುಕಿಕೊಂಡು ಬಂದಿವೆ. ಯತ್ಪತ್ ಸ್ವ್ವಾಮಿ, ಹಾವಿನಗೂಡು ಸ್ಥಳದ ಹಸುಗಳು ಎಂಬುದಾಗಿ ತಿಳಿದುಬಂದಿದೆ.