ಪಾವಗಡ
ನವೆಂಬರ್ 17 ರಂದು ಮ್ಯಾಂಚೆಸ್ಟರ್‍ನಲ್ಲಿ ಹಿಂದೂ ಟೆಂಪಲ್ ಅಸೋಸಿಯೇಷನ್‍ರವರು ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮವನ್ನು ಪೂಜ್ಯ ಸ್ವಾಮಿ ಜಪಾನಂದಜಿ ನಡೆಸಿಕೊಟ್ಟರು. ಮೊದಲಿಗೆ ಅಲ್ಲಿಯ ಮಂದಿರದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಅಲ್ಲಿಯ ಸಭಾಂಗಣದಲ್ಲಿ ನೆರೆದ ಭಕ್ತ ಸಮೂಹದ ಉಪಸ್ಥಿತಿಯಲ್ಲಿ ಸ್ವಾಮಿ ಜಪಾನಂದಜಿ ತಮ್ಮ ಸುಶ್ರಾವ್ಯ ಕಂಠದಿಂದ ಅನೇಕ ಭಾಷೆಗಳಲ್ಲಿ ಭಕ್ತಿ ಗೀತೆಗಳನ್ನು ಹಾಡಿದರು.
ತದನಂತರ ಇಂಗ್ಲೀಷಿನಲ್ಲಿ “ಭಗವದ್ಗೀತೆಯ ಸಂದೇಶ’’ ಎಂಬ ವಿಷಯದ ಮೇಲೆ ಉಪನ್ಯಾಸ ನಡೆಸಿ ಕೊಟ್ಟರು. ತಮ್ಮ ಅಮೋಘವಾದ ವಾಗ್ಝರಿಯಿಂದ ನೆರೆದ ಸಭಿಕರನ್ನು ಮಂತ್ರಮುಗ್ದರನ್ನಾಗಿಸಿದರು. ಸ್ವಾಮೀಜಿರವರು ಅತ್ಯಂತ ಪರಿಣಾಮಕಾರಿ ಹಾಗೂ ಸುಂದರ ಉದಾಹರಣೆಗಳ ಮೂಲಕ ಗೀತೆಯ ಸಂದೇಶವನ್ನು ಸಾರಿದರು.
ದೂರದ ಇಂಗ್ಲೆಂಡಿನಲ್ಲಿ ಭಾರತದ ಸಂಸ್ಕೃತಿಯ ಝರಿ ಹರಿದು ಭಾರತೀಯತೆಯ ಹಾಗೂ ಸನಾತನ ಧರ್ಮದ ಪರಂಪರೆಯ ಸೊಬಗು ಪರಿಚಯಿಸುತ್ತಿರುವ ಸ್ವಾಮಿ ಜಪಾನಂದಜಿ ವರುಷದಿಂದ ವರುಷಕ್ಕೆ ಇಲ್ಲಿಯ ಅನಿವಾಸಿ ಭಾರತೀಯರ ಮನಸ್ಸನ್ನು ಗೆದ್ದಿದ್ದಾರೆ ಎನ್ನಬಹುದು. ಸ್ವಾಮಿ ವಿವೇಕಾನಂದರ ಸಂದೇಶಗಳನ್ನೊಳಗೊಡ ವಿಚಾರಗಳ ಹಿನ್ನೆಲೆಯಲ್ಲಿ ಉಪನ್ಯಾಸಗಳನ್ನು ಸ್ವಾಮಿ ಜಪಾನಂದಜಿ ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಶ್ರೀ ಗುರುದೇವನ ಕೃಪೆ ಎಂದು ಪೂಜ್ಯರು ನಮ್ರತೆಯಿಂದ ನುಡಿದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ