ಲಿ.ಶ್ರೀ ಶಿವಕುಮಾರಸ್ವಾಮಿಗಳಿಗೆ ಗುರುವಂದನೆ ಸಮರ್ಪಿಸಿದ ಶ್ರೀ ಜಪಾನಂದಸ್ವಾಮಿಗಳು

ತುಮಕೂರು:

         ತ್ರಿವಿಧ ದಾಸೋಹ ನಡೆಸಿ ಇಡೀ ವಿಶ್ವಕ್ಕೆ ಮಾದರಿಯಾದ ತ್ಯಾಗೀಶ್ವರರು ಮತ್ತು ಯೋಗೀಶ್ವರರು ಆದ ಶ್ರೀಶ್ರೀಶಿವಕುಮಾರ ಸ್ವಾಮೀಜಿ ರವರಿಗೆ ಗುರುವಂದನೆಯನ್ನು ಪೂಜ್ಯ ಸ್ವಾಮಿ ಜಪಾನಂದಜಿ ರವರು ನಡೆಸಿಕೊಟ್ಟರು. ಈ ಕಾರ್ಯಕ್ರಮ ಶ್ರೀಶ್ರೀಸಿದ್ಧಲಿಂಗಸ್ವಾಮಿಜಿ ರವರ ಸನ್ನಿಧಿಯಲ್ಲಿ ಪೂಜ್ಯಶ್ರೀಶ್ರೀರವರ ಪವಿತ್ರ ಗದ್ದುಗೆಯಲ್ಲಿ ನೆರವೇರಿತು.

      ಗದ್ದುಗೆಯಲ್ಲಿ ವಿಶೇಷ ಪೂಜೆಸಲ್ಲಿಸಿ ಸ್ವಾಮಿ ಜಪಾನಂದಜಿ ರವರು ತಮ್ಮ ವಚನನ ಪುಷ್ಪ ನಮನವನ್ನು ಸಲ್ಲಿಸಿದರು. ಕಾರ್ಯಕ್ರಮ ಸುಮಾರು ಒಂದೂವರೆ ಘಂಟೆ ನಡೆಯಿತು. ಸ್ವಾಮಿ ಜಪಾನಂದಾಜಿರವರು ತಮ್ಮಸುಮಧುರ ಕಂಠಸಿರಿ ಇಂದ ನೆರೆದ ನೂರಾರು ಭಕ್ತರನ್ನು ಮಂತ್ರಮುಗ್ದರಾಗಿಸಿತು. 

        ಈ ಕಾರ್ಯಕ್ರಮದ ವಿಶೇಷತೆ ಎಂದರೆ ಶ್ರೀಶ್ರೀಗಳವರ ಗದ್ದುಗೆಯ ಸಾನಿಧ್ಯದಲ್ಲಿಯೇ ಕಾರ್ಯಕ್ರಮಕ್ಕೆ ಅಪ್ಪಣೆನೀಡಿದ ಶ್ರೀಶ್ರೀಸಿದ್ದಲಿಂಗ ಸ್ವಾಮೀಜಿರವರು ಖುದ್ದಾಗಿ ಸ್ವಾಮಿ ಜಪಾನಂದಾಜಿರವರ ಪಕ್ಕದಲ್ಲಿಯೇ ನೆಲದಲ್ಲಿ ಆಸೀನರಾಗಿದ್ದು ಇಡೀ ಕಾರ್ಯಕ್ರಮಕ್ಕೆ ಆದ್ಯಾತ್ಮದ ಸಂಚಲನವನ್ನು ನೀಡಿದಂತೆಯೇ ಆಯಿತು. ತಮ್ಮಆಶೀರ್ವಚನದಲ್ಲಿ ಪೂಜ್ಯಶ್ರೀಶ್ರೀಶಿವಕುಮಾರಸ್ವಾಮಿಜಿ ರವರನ್ನು ನೆನೆಪಿಸಿಕೊಂಡು ಸ್ವಾಮಿ ಜಪಾನಂದಜಿ ರವರ ಹಾಗು ಶ್ರೀಶ್ರೀಗಳವರ ಪವಿತ್ರಸಂಭಂದವನ್ನು ವಿವರಿಸಿದರು.

         ಸ್ವಾಮೀಜಿ ರವರ ಸೇವಾಕಾರ್ಯವನ್ನು ತಮ್ಮಮುಕ್ತಕಂಠದಿಂದ ಕೊಂಡಾಡಿದರು. ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ| ಸಿ.ಸೋಮಶೇಖರ , ನಿವೃತ್ತ ಐ.ಎ.ಸ್ . ಅಧಿಕಾರಿಗಳು ಮಾತನಾಡಿ ಸ್ವಾಮಿ ಜಪಾನಂದಜಿ ರವರ ಸಂಗೀತ ಸೌರಭವನ್ನು ಹೃದಯತುಂಬಾ ಮೆಚ್ಚಿದರು. ಪೂಜ್ಯರು ಶ್ರೀಶ್ರೀಸಿದ್ಧಗಂಗಾಶ್ರೀ ಗಳವರು ತೂರಿದ ಸೇವಾ ಪಥದಲ್ಲಿಯೇ ನಡೆಯುತ್ತಾ ಸಮಾಜ ಮುಖಿ ಯೋಜನೆಗಳನ್ನು ಕೈಗೊಂಡು ಕಾಯಕವೇ ಕೈಲಾಸ ಎಂಬಂತೆ ತಮ್ಮ ತ್ಯಾಗ ಜೀವನವನ್ನು ನಡೆಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಎಂದು ಬಣ್ಣಿಸಿದರು. ಈ ಭಕ್ತಿಭರಿತ ಕಾರ್ಯಕ್ರಮಕ್ಕೆ ಶ್ರೀರಾಮಕೃಷ್ಣ ಸೇವಾಶ್ರಮದ ಬೆಂಗಳೂರು, ಪಾವಗಡ,ತುಮಕೂರು ಗಳಿಂದ ನೂರಾರು ಭಕ್ತರು ಭಾಗವಹಿಸಿದ್ದರು. ಒಟ್ಟಿನಲ್ಲಿ ಅತ್ಯಂತ ಅರ್ಥಭರಿತ ಹಾಗು ಭಕ್ತಿಭರಿತ ಗುರುವಂದನಾ ಕಾರ್ಯಕ್ರಮಕ್ಕೆ ಶ್ರೀಶ್ರೀಗಳವರ ಗದ್ದುಗೆ ಸಾಕ್ಷಿಯಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link