ದಾವಣಗೆರೆ:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷ ಬಿಟ್ಟುಹೋದರೆ, ಯಾವುದೇ ನಷ್ಟವಿಲ್ಲ. ಬಿಜೆಪಿಯವರಿಂದ ಅಡ್ವಾನ್ಸ್ ತೆಗೆದುಕೊಂಡಿದ್ದರೆ ಹೋಗುತ್ತಾರೆ ಎಂದು ಮಾಜಿ ಸಚಿವ, ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.
ನಗರದ ಎಂಸಿಸಿ ಬಿ ಬ್ಲಾಕ್‍ನ ಐಎಂಎ ಹಾಲ್‍ನಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿ ಮಾತನಾಡಿದ ಅವರು, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಕ್ಷ ಬಿಟ್ಟು ಹೋದರೆ ಸಮಸ್ಯೆ ಇಲ್ಲ. ಬಿಜೆಪಿಯವರಿಂದ ಅಡ್ವಾನ್ಸ್ ತೆಗೆದುಕೊಂಡರೆ ಹೋಗುತ್ತಾರೆ. ಅದರಿಂದ ಸರ್ಕಾರಕ್ಕೆ ಸಮಸ್ಯೆ ಇಲ್ಲ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಬಿಜೆಪಿಗೆ ಹೋಗುವುದು ಮೊದಲೇ ಗೊತ್ತಿತ್ತು. ಆತ ಯಾವಾಗಲೋ ಹೋಗೋ ಗಿರಾಕಿ ಅಂತ. ಅವರ ಜೊತೆ ಅಡ್ವಾನ್ಸ್ ಪಡೆದವರೂ ಇದ್ದಾರೆ. ಬಿಜೆಪಿಯವರ ಬಳಿ ದುಡ್ಡಿದೆ ದುಡ್ಡು ಕೊಟ್ಟಿದ್ದಾರೆ ಅಷ್ಟೇ ಎಂದ ಅವರು, ಸಿದ್ದರಾಮಯ್ಯ ಸಿಎಂ ಆಗುವ ವಿಚಾರದ ಕುರಿತು ಮಾತನಾಡಿದ ಅವರು, ನಾನು ಸಹ ಸಿಎಂ ಆಗುತ್ತೇನೆ. ಎಲ್ಲರಿಗೂ ಸಿಎಂ ಆಗುವ ಹಕ್ಕಿದೆ. ಅದಕ್ಕೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
