ಬಳ್ಳಾರಿ
ರಾಜ್ಯದಲ್ಲಿ ಈ ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿಯವರಾಗಿದ್ದಾಗ ನಡೆಸಿದ ಜಾತಿವಾರು ಗಣತಿ ಮಾಹಿತಿ ಮುದ್ರಣ ಪ್ರಕ್ರಿಯೆ ನಡೆದಿದ್ದು ಚುನಾವಣೆ ನಂತರ ಪ್ರಕಟಿಸಲಿದೆಂದು ಸಚಿವ ಸಿ.ಪುಟ್ಟರಂಗ ಶೆಟ್ಟಿ ಹೇಳಿದ್ದಾರೆ.
ಅವರಿಂದು ಬಳ್ಳಾರಿ ನಗರದಲ್ಲಿಂದು ಸುದ್ಧಿಗೋಷ್ಟಿ ನಡೆಸಿ ಈ ಮಾಹಿತಿ ನೀಡಿದರು. ಜಾತಿವಾರು ಗಣತಿಯಿಂದ ಸರ್ಕಾರದ ಯೋಜನೆಗಳನ್ನು ಜಾತಿಯ ಸಂಖ್ಯೆಗನುಗುಣವಾಗಿ ಅನುದಾನ ನೀಡಲು ಸಹಕಾರಿಯಾಗಲಿದೆ. ಅಲ್ಲದೆ ಆಯಾ ಜಾತಿಯಲ್ಲಿ ಶಿಕ್ಷಣ ಉದ್ಯೋಗ ಮೊದಲಾದವುಗಳ ಸ್ಥಿತಿಗತಿ ಅರಿಯಲು ಸಹಕಾರಿ ಎಂದರು.
ಸಮಿಶ್ರ ಸಕಾ9ರದಲ್ಲಿ ಕಾಂಗ್ರೆಸ್ ಪಕ್ಷವು ಬಡವರಿಗೆ ಬಹಳ ಅಭಿವೃದ್ಧಿಯ ಕಾರ್ಯಗಳನ್ನು ಮಾಡುತಿದೆ ಆದ್ದರಿಂದ ಬಳ್ಳಾರಿ ಅಭ್ಯಥಿ9 ವಿಎಸ್.ಉಗ್ರಪ್ಪ ನವರಿಗೆ ನಮ್ಮ ಬೆಂಬಲವಿದೆ ಎಂದು ಹಿಂದುಳಿದ ವಗದ ಕಲ್ಯಾಣ ಸಚಿವ ಪುಟ್ಟರಂಗ ಶೆಟ್ಟಿ ಹೇಳಿದರು.ಎಲ್ಲರೂ ಸಮಪಾಲು-ಸಮಬಾಳು ಎನ್ನುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬಂಗಾರಪ್ಪ, ವೀರಪ್ಪಮೊಯ್ಲಿ ಮಂತ್ರಿ ಸ್ಥಾನಗಳು ಹಿಂದುಳಿದವರಿಗೆ ನೀಡಿದೆ. ಅದರೆ ಬಿಜೆಪಿ ಪಕ್ಷವು ಒಂದೇ ಒಂದು ಹಿಂದುಳಿದವರಿಗೆ ಸ್ಥಾನ ನೀಡಿಲ್ಲ.ಪ್ರಧಾನ ಮಂತ್ರಿಗಳು ಬಿಜೆಪಿ ಅಧಿಕಾರಕ್ಕೆ ಬಂದರೆ 82 ಸಾವಿರ ಕೋಟಿ ರೈತರಿಗೆ ಸಾಲ ಮನ್ನಾ ಮಾಡಿ ಬಡವರಿಗೆ ಅಭಿವೃದ್ಧಿಯ ಕಾರ್ಯ ದಲ್ಲಿ ಕೆಲಸ ಮಾಡುತ್ತೇವೆ ಎಂದರು ಯಾವುದೇ ಕಾರ್ಯ ಮಾಡಿಲ್ಲ. ಬಿಜೆಪಿ ಪಕ್ಷವು ಕೋಮುವಾದ ಪಕ್ಷವಾಗಿದೆ ಎಂಬುವುದು ಜನತೆ ಮರೆಯಬಾರದು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ಗೆಲ್ಲಿಸಿ ಇನ್ನೂ ಅಭಿವೃದ್ಧಿ ಕಾರ್ಯಗಳು ಮಾಡಿಸಿಕಳ್ಳ ಬೇಕು ಎಂದರು.