ಎಂ ಎನ್ ಕೋಟೆ :
ಗುಬ್ಬಿ ತಾಲ್ಲೂಕಿನ ಇತಿಹಾಸ ಪ್ರಸಿದ್ದ ಹೊಸಕೆರೆ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ಭಾರಿ ಧನಗಳ ಜಾತ್ರಾ ಮಹೋತ್ಸವ ಏ.6ರಿಂದ 18ರ ವರೆಗೆ ನಡೆಯಲಿದೆ.ಏ.6ರಂದು ಅಂಕುರಾರ್ಪಣೆ ಹಾಗೂ ಧ್ವಜಾರೋಹಣ ನಡೆಯಲದೆ. ಏ.7ರಂದು ಗರುಡೋತ್ಸವ ನಡೆಯಲಿದೆ. ಏ.8ರಂದು ಸ್ವಾಮಿಯ ಹಗಲು ಉತ್ಸವ ರಾತ್ರಿ ಪ್ರಹ್ಲಾಲದೋತ್ಸವ ನಡೆಯಲಿದೆ. ಏ.9ರಂದು ಬೆಳಿಗ್ಗೆ ಹಗಲು ಉತ್ಸವ ಬ್ರಾಹ್ಮಣರ ಸಂತರ್ಪಣೆ ಹಾಗೂ ಸಂಜೆ ಗಜೇಂದ್ರ ಮೋಕ್ಷ ಹಾಗೂ ಕಲ್ಯಾಣೋತ್ಸವ ನಡೆಯಲಿದೆ.
ಏ.10ರಂದು ಬುಧವಾರ ಮಧ್ಯಾಹ್ನ 1.30ಗಂಟೆಗ ಶ್ರೀ ಲಕ್ಷ್ಮೀರಂಗನಾಥಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಏ.11ರಂದು ಬ್ರಾಹ್ಮಣರ ಸಂತರ್ಪಣೆ ಶಯನೋತ್ಸವ ನಡೆಯಲಿದೆ. ಏ.12ರಂದು ಸಂದಾನೋತ್ಸವ ಅವಭೃತ ಸ್ನಾನ, ಆನೆ ಉತ್ಸವ ನಡೆಯಲಿದೆ. ಏ.13ರಂದು ಹನುಮಂತ ಉತ್ಸವ ನಡೆಯಲಿದೆ.
ಏ.14ರಂದು ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ, ಏ.15ರಂದು ಶೇಷ ವಾಹನೋತ್ಸವ , ಮುತ್ತಿನ ಮಂಟೆಪೋತ್ಸವ ನಡೆಯಲಿದೆ. ಏ.16ರಂದು ಹಗಲು ಉತ್ಸವ ರಾತ್ರಿ ಮುತ್ತಿನ ಮಂಟಪ ಉತ್ಸವ ನಡೆಯಲಿದೆ. ಏ.17ರಂದು ಹಗಲು ಉತ್ಸವ ರಾತ್ರಿ ಹೂವಿನ ಉತ್ಸವ ನಡೆಯಲಿದೆ. ಏ.18ರಂದು ಅಲಂಕಾರೋತ್ಸವ ರಾತ್ರಿ ವಿದ್ಯುತ್ ದೀಪಾಲಂಕಾರ ನಡೆಯಲಿದೆ, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ದೇವಾಲಯ ಸಮಿತಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








