ಕೆಸರು ಗದ್ದೆಯಾದ ಜವಳಿಪೇಟೆ ರಸ್ತೆ…!

ಗುಬ್ಬಿ

     ಪಟ್ಟಣದ ಬಿ.ಹೆಚ್.ರಸ್ತೆಯಿಂದ ಜವಳಿಪೇಟೆಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿದ್ದು ಸಾರ್ವಜನಿಕರು ಪ್ರತಿ ನಿತ್ಯ ಹಿಡಿ ಶಾಪ ಹಾಕಿಕೊಂಡು ಓಡಾಡುತ್ತಿದ್ದಾರೆ. ಈ ರಸ್ತೆ ಮೂಲಕ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯ, ಗ್ರಾಮದೇವತೆ ದೇವಾಲಯ ಮತ್ತು ಮಹಾವೀರ ದೇವಾಲಯಗಳಿಗೆ ಸಾರ್ವಜನಿಕರು ಓಡಾಡುತ್ತಿದ್ದಾರೆ.

      ಅಲ್ಲದೆ ರಸ್ತೆಯ ಎರಡೂ ಬದಿಗಳಲ್ಲಿ ಸಾಕಷ್ಟು ಅಂಗಡಿ ಮಳಿಗೆಗಳಿದ್ದು ವಾಸದ ಮನೆಗಳು ಸಹ ಇವೆ. ಮಳೆ ಬಂತೆಂದರೆ ಈ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗುತ್ತಿದ್ದು ಈರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಕೆಸರಿನಲ್ಲಿ ಬಿದ್ದು ಬಟ್ಟೆಗಳನ್ನೆಲ್ಲ ಕೆಸರು ಮಾಡಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

      ಪ್ರತಿ ನಿತ್ಯ ನೂರಾರು ಜನ ಸಂಚರಿಸುವ ಈ ರಸ್ತೆಯು ಕಳೆದ ಹಲವು ವರ್ಷಗಳಿಂದಲೂ ಇದೇ ಸ್ಥಿತಿಯಲ್ಲಿದೆ ಆದರೆ ಈವರೆಗೆ ಸಂಬಂಧಿಸಿದ ಯಾವುದೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಗಳಾಗಲಿ ರಸ್ತೆ ದುರಸ್ಥಿ ಮಾಡುವ ಗೋಜಿಗೆ ಹೋಗದಿರುವುದು ಈ ಭಾಗದ ಸಾರ್ವಜನಿಕರಿಗೆ ಬೇಸರ ತಂದಿದೆ ಕೂಡಲೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಕೆಸರು ಗದ್ದೆಯಾಗಿರುವ ರಸ್ತೆಯನ್ನು ತ್ವರಿತವಾಗಿ ದುರಸ್ಥಿ ಮಾಡುವಂತೆ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ವಾಸದ ಮನೆಗಳವರು ಒತ್ತಾಯಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link