ಚಿತ್ರದುರ್ಗ;
ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿಗಾಗಿ ದಾವಣಗೆರೆಯ ಆನಂದ್ ಹಾಗು ಬಿಜಾಪುರ ಸಿದ್ದಪ್ಪ ಇವರ ಮಧ್ಯೆ ನಡೆದ ಅಂತಿವi ಪಂದ್ಯದಲ್ಲಿ ಸಮಬಲದ ಹೋರಾಟ ನಡೆಸಿ ಚಿನ್ಮೂಲಾದ್ರಿ ಕೇಸರಿ ಪ್ರಶಸ್ತಿಯನ್ನು ಜಂಟೀ ವಿಜೇತರನ್ನಾಗಿ ಘೋಷಿಸಿಲಾಯಿತು. ಬಹುಮಾನ ಮೊತ್ತವಾಗಿ ನಗದು ರೂ.15000 ಸಾವಿರಗಳನ್ನು ಸಮನಾಗಿ ಹಂಚಿ ಪ್ರಶಸ್ತಿ ಪತ್ರ ನೀಡಲಾಯಿತು.
ಈ ಪಂದ್ಯಾವಳಿಯಲ್ಲಿ 63 ಜೋಡಿ ಕುಸ್ತಿ ಪಟುಗಳು ಭಾಗವಹಿಸಿದ್ದರು. ಅದರಲ್ಲಿ 20 ಜೋಡಿ 15 ವರ್ಷ ವಯೋಮಾನದ ಮಕ್ಕಳು ಭಾಗವಹಿಸಿದ್ದು ವಿಶೇಷ.
ಕೋಟೆ ಪೋಲೀಸ್ ಠಾಣೆಯ ಉಪನಿರೀಕ್ಷಕ ಬಸವರಾಜ್ ಪ್ರಶಸ್ತಿ ವಿತರಿಸಿದರು. ಈ ಸಂಧರ್ಭದಲ್ಲಿ ಸಂಚಾಲಕ ಪ್ರೊ.ಕೆ.ಎನ್.ವಿಶ್ವನಾಥ್, ವೀರೇಶ್, ದೈಹಿಕ ನಿದೇರ್ಶಕರುಗಳಾದ ಮಕ್ಸೂದ್ ಅಹಮದ್, ಅಭಯ್ ಪ್ರಕಾಶ್, ಶ್ರೀನಿವಾಸ್, ಕುಮಾರಸ್ವಾಮಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ