ತಿಪಟೂರು
ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿ, ಹಿಂಡಿಸ್ಕೆರೆ ಗ್ರಾಮ ಪಂಚಾಯತಿಯಲ್ಲಿ ಸುಮಾರು 7,80,929 ರೂ.ಗಳ ಅವ್ಯವಹಾರ ಬೆಳಕಿಗೆ ಬಂದಿದ್ದು, ಇನ್ನೂ ಹಲವಾರು ಹಗರಣದ ಆರೋಪಗಳೂ ಕೇಳಿ ಬರುತ್ತಿವೆ.
ಈ ಗ್ರಾಮ ಪಂಚಾಯಿತಿಯಲ್ಲಿ 2019-20ನೆ ಸಾಲಿನಲ್ಲಿ ನರೇಗಾ ಯೋಜನೆಯಡಿಯಲ್ಲಿ ಯಗಚಿಕಟ್ಟೆ, ಕಾಮಗೊಂಡನ ಹಳ್ಳಿಯ ಅಗಸರಕಟ್ಟೆ ಹಾಗೂ ಕುರಿಕಟ್ಟೆಯ ಹೂಳೆತ್ತಿ ನವೀಕರಣ ಮಾಡಲು ಕ್ರಮವಾಗಿ 1,81,521 ರೂ., 2,99,704 ರೂ. ಮತ್ತು 2,99,704 ರೂ.ಗಳನ್ನು ಸಂಬಂಧಿಸಿದ ಕಾಮಗಾರಿಗಳಿಗೆ ತಕ್ಕಂತೆ ಬಿಲ್ ಮಾಡಿದ್ದಾರೆ. ಆದರೆ ಈ ಕಟ್ಟೆಗಳು ಚೆನ್ನಾಗಿದ್ದರೂ ಸಹ ಕಾಮಗಾರಿಗೆ ಹಣವನ್ನು ಹಾಕಿಕೊಂಡು ಯಾವುದೇ ಕಾಮಗಾರಿಯನ್ನು ಮಾಡದೇ ಹಣ ದೋಚಿರುವುದು ಕಂಡುಬಂದಿದೆ.
ಮುಖ್ಯವಾಗಿ ನರೇಗಾ ಯೋಜನೆ ಇರುವುದು ಹಸಿವು ಮತ್ತು ನಿರುದ್ಯೋಗ ಮುಕ್ತಮಾಡಲು ಇದೆ. ಆದರೆ ಈ ಯೋಜನೆಯನ್ನೇ ಗ್ರಾಮಪಂಚಾಯಿತಿಯವರು ನಕಲಿ ಉದ್ಯೋಗಚೀಟಿ ಸೃಷ್ಠಿಸಿ ಕೂಲಿಕಾರ್ಮಿಕರ ಹೊಟ್ಟೆಯಮೇಲೆ ಹೊಡೆದು ಅವರಿಂದ ಮಾನವ ದಿನಗಳನ್ನು ಕಿತ್ತುಕೊಳ್ಳಲಾಗಿದೆ.
2005ರ ಮಹಾತ್ಮ ಗಾಂಧಿ ಉದ್ಯೋಗ ಯೋಜನೆಯ ಪ್ರಕಾರ ಖಡ್ಡಾಯವಾಗಿ ಯಂತ್ರಗಳನ್ನು ಬಳಸಿ ಕಾಮಗಾರಿಗಳನ್ನು ಮಾಡಬಾರದೆಂದು ನಿಯಮವಿದೆ. ಆದರೆ ಈ ಗ್ರಾಮ ಪಂಚಾಯಿತಿಯಲ್ಲಿ ಜೆ.ಸಿ.ಬಿ ಮೂಲಕ ಯಂತ್ರಗಳನ್ನು ಬಳಸಿಕೊಂಡೇ ಕೆಲಸನಿರ್ವಹಿಸಿರುವುದು ಕಂಡು ಬರುತ್ತದೆ.
ಉದ್ಯಾನವನ ಮಾಡಲು ಜೆ.ಸಿ.ಬಿ ಬಳಕೆ : ಇನ್ನು ನಾಳೆ ಉದ್ಘಾಟನೆಗೊಳ್ಳುತ್ತಿರುವ ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿಯ ಮುಂದಿನ ಉದ್ಯಾನವನವನ್ನು ನಿರ್ಮಿಸಲು ಜೆ.ಸಿ.ಬಿಯನ್ನು ಬಳಸಿಕೊಂಡಿದ್ದಾರೆ. ಇದರ ಕಾಮಗಾರಿ ಅಂದಾಜು ಮೊತ್ತ 4,99,772 ಆಗಿದ್ದು ಇದುವರೆಗೂ ಈ ಕಾಮಗಾರಿಗಾಗಿ ಖರ್ಚಾಗಿರುವ ಕೂಲಿ ಹಣ 2,51,743 ರೂ ಆಗಿದೆ. ಆದರೆ ಈ ಕಾಮಗಾರಿಗಾಗಿ ಜೆ.ಸಿ.ಬಿಯನ್ನು ಬಳಸಿಕೊಂಡಿರುವುದು ಸ್ಪಷ್ಠವಾಗಿದೆ.
ಮಳೆನೀರು ಕೊಯ್ಲು ತೊಟ್ಟಿ : ಗ್ರಾಮ ಪಂಚಾಯಿತಿ ಆವರಣದಲ್ಲಿ ಮಳೆನೀರು ಕೊಯ್ಲು ತೊಟ್ಟಿ ನಿಮಾರ್ಣಮಾಡಲು ಅಂದಾಜು ಮೊತ್ತ 1,04,000 ರೂ ಪ್ರಸ್ತುತದ ವರೆಗೆ ಖರ್ಚಾಗಿರುವ ಕೂಲಿ ಮೊತ್ತ ಮಾತ್ರ 90,920ರೂ ಖರ್ಚಾಗಿದೆ.
ಇದುವರೆಗೂ ಪಂಚಾಯಿತಿಯಲ್ಲಿ ಸೂಕ್ತವಾದ ಕ್ರಿಯಾಯೋಜನೆಯನ್ನು ತಯಾರಿಸಿದೆ ಹಾಗೂ ಗ್ರಾಮ ಸಭೆಯ ಅನುಮೋಧನೆ ಪಡೆಯದೆ, ಸಾಮಾಜಿಕ ಲೆಕ್ಕ ಪರಿಶೋಧನೆ ನಡೆಯದೇ ಯಾವುದೇ ಗ್ರಾಮೀಣ ಮಟ್ಟದ ನರೇಗಾ ಹೋಜನೆಯ ಅರಿವಿದನ ಕಾರ್ಯಕ್ರಮವನ್ನು ಆಯೋಜಿಸಿರುವುದಿಲ್ಲ ಈ ರೀತಿ ಆದರೆ ಗ್ರಾಮ ಸವರಾಜ್ಯ ಎಲ್ಲಿ, ಮತ್ತು ಗ್ರಾಮಗಳ ಉದ್ದಾರವಾಗುವುದು ಯಾವಾಗ ಎಂದುಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ