ತುರುವೇಕೆರೆ
144 ಸೆಕ್ಸನ್ ಜಾರಿಯಾದ ಹಿನ್ನೆಲೆಯಲ್ಲಿ ಶಾಸಕರ ವಿರುದ್ದ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಜೆಡಿಎಸ್ ಪಕ್ಷ ಕೈಬಿಟ್ಟಿದೆ ಎಂದು ತಿಳಿದು ಬಂದಿದೆ.ಪ್ರತಿಭಟನೆ ಬದಲಾಗಿ ಬರಿ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಲು ನಿರ್ಧಾರಕ್ಕೆ ಬರಲಾಗಿದೆ ಎಂದು ಪಕ್ಷ ಎಂದು ತಿಳಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ ಕೊರೋನಾ ಕಾರಣದಿಂದಾಗಿ ವೈದ್ಯರ ಸಲಹೆ ಮೇರೆಗೆ ಜನರ ಸಂಪರ್ಕ ದಿಂದ ದೂರವಿದ್ದೆ ಇವತ್ತು ಅನಿವಾರ್ಯವಾಗಿ ತುರುವೇಕೆರೆಗೆ ಬಂದಿದ್ದೇನೆ ಇನ್ನೂ ನಾನು ನನ್ನ ಕ್ಷೇತ್ರಕ್ಕೂ ಹೋಗಲು ಆಗ್ತಿಲ್ಲ.ಇಂಥ ಸಂದರ್ಭದಲ್ಲಿ ತುರುವೇಕೆರೆಗೆ ಬಂದಿದ್ದೇನೆ ಅಂದರೆ ಇಲ್ಲಿಯ ಸಮಸ್ಯೆ ದೊಡ್ಡದಿದೆ ಎಂದರ್ಥ.
ಗುಡ್ಡೇನಹಳ್ಳಿ ರೈತರ ತೋಟವನ್ನು ನಾಶಪಡಿಸಿ ಒಕ್ಕಲೆಬ್ಬಿಸಿದ್ದಾರೆ ಇಲ್ಲಿಯ ಶಾಸಕರು ರೈತರ ನೆರವಿಗೆ ಬಂದಿಲ್ಲ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂಧಿಸಿಲ್ಲ ಎಂಬ ಆರೋಪ ಸಹ ಇದೆ .ಒಂದು ವೇಳೆ ಶಾಸಕರು ತಾಳ್ಮೆಯಿಂದ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದರೆ ಏನೂ ಆಗುತ್ತಿರಲಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ