ಜೆಡಿಎಸ್ ಮುಖಂಡರಿಂದ ಜೆಡಿಎಸ್ ಕಾರ್ಯಕರ್ತರ ಮನವೊಲಿಕೆ ಯತ್ನ ವಿಫಲ

ಕುಣಿಗಲ್

       ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ಸೂಚಿಸುವ ವಿಚಾರವಾಗಿ ಕರೆದಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಶಾಸಕ ಡಾ.ರಂಗನಾಥ್, ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ನೀಡುತ್ತಿದ್ದಾರೆ, ಮೈತ್ರಿಧರ್ಮ ಏಕೆ ಪಾಲನೆ ಮಾಡಬೇಕೆಂದು ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಸಭೆಯಲ್ಲಿ ಕೂಗಾಟ, ಕಿರುಚಾಟ ನಡೆದು ಯಾವುದೆ ಒಮ್ಮತ ಮೂಡದ ಘಟನೆ ನಡೆಯಿತು.

       ತಾಲ್ಲೂಕು ಜೆಡಿಎಸ್ ಪಕ್ಷದವರು ದಿವ್ಯಾ ಕನ್ವೆನ್‍ಷನ್ ಹಾಲ್‍ನಲ್ಲಿ ಮಾಜಿ ಸಚಿವ ಡಿ.ನಾಗÀರಾಜಯ್ಯ ನೇತೃತ್ವದಲ್ಲಿ ಕರೆಯಲಾದ ಜೆಡಿಎಸ್ ಸಭೆಯಲ್ಲಿ ಪರಸ್ಪರ ಕಾರ್ಯಕರ್ತರು ಮತ್ತು ಮುಖಂಡರ ನಡುವೆ ಗೊಂದಲ ಉಂಟಾಗಿ ನಿಮ್ಮ ರಾಜಕೀಯ ಲಾಭಕ್ಕಾಗಿ ರಾಜ್ಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದೀರಾ, ಜೆಡಿಎಸ್ ಕಾರ್ಯಕರ್ತರಿಗೆ, ಗುತ್ತಿಗೆದಾರರಿಗೆ ನಿತ್ಯ ಕಿರುಕುಳ ನೀಡಿ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣಗಳನ್ನ ದಾಖಲು ಮಾಡುತ್ತಾರೆ. ಇದರಿಂದ ನಾವು ಯಾವ ರೀತಿ ಕಾಂಗ್ರ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಕೇಳೋಣ ಎಂಬುದು ಕಾರ್ಯಕರ್ತರ ಅಳಲಾಗಿತ್ತು.

       ಮಾಜಿ ಸಚಿವ ಡಿ.ನಾಗರಾಜಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಚುನಾವಣೆಯಲ್ಲಿ ನೇರ ಹಣಾಹಣಿ ಇದ್ದು, ಎರಡು ಪಕ್ಷಗಳ ಕಾರ್ಯಕರ್ತರು ಯಾವುದೇ ದ್ವೇಷ ಭಾವನೆ ಇಲ್ಲದೆ ಸಹೋದರರ ರೀತಿ ನಡೆದುಕೊಳ್ಳುತ್ತಿದ್ದರು. ಆದರೆ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಆಯ್ಕೆಯಾದ ನಂತರ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಸಿ.ಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರ ಗಮನಕ್ಕೆ ತಂದಿದ್ದೇನೆ.

         ಸಮಸ್ಯೆ ಬಗೆಹರಿಸುವುದಾಗಿ ಈ ನಾಯಕರು ತಿಳಿಸಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕೋಮುವಾದಿ ಬಿಜೆಪಿಯನ್ನ ಹೊರ ಇಡುವ ನಿಟ್ಟಿನಲ್ಲಿ ಜಾತ್ಯತೀತ ಪಕ್ಷಗಳು ಒಂದಾಗಿದ್ದು, ಅದರಂತೆ ಕಾಂಗ್ರೆಸ್ , ಜೆಡಿಎಸ್ ಪಕ್ಷಗಳು ರಾಜ್ಯದಲ್ಲಿ ಒಂದಾಗಿ ಅಧಿಕಾರ ಮಾಡುತ್ತಿದ್ದೇವೆ. ಈಗಾಗಲೇ ಮೈತ್ರಿ ಧರ್ಮದ ಪಾಲನೆಯಂತೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸುವುದರಿಂದ ಡಿ.ಕೆ.ಸುರೇಶ್ ರವರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

        ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿ, ಕಾಂಗ್ರೆಸ್, ಜೆಡಿಎಸ್ ನಡುವೆ ಜಿದ್ದಾಜಿದ್ದಿ ಇದ್ದಿದ್ದು ನಿಜ, ಈ ಹಿಂದೆ ದೇವೇಗೌಡರ ಕುಟುಂಬ ಹಾಗೂ ಡಿ.ಕೆ.ಶಿವಕುಮಾರ್ ಕುಟುಂಬಗಳು ರಾಜಕೀಯ ಬದ್ಧ ವೈರಿಗಳಾಗಿ ಚುನಾವಣೆಗಳನ್ನ ಎದುರಿಸುತ್ತಿದ್ದರು. ಈಗ ಮೈತ್ರಿ ಧರ್ಮದ ಅಂಗವಾಗಿ ಸರ್ಕಾರ ಕೆಲಸ ಮಾಡಲು ಡಿ.ಕೆ.ಶಿವಕುಮಾರ್‍ರವರ ಕೊಡುಗೆ ಅಪಾರವಾಗಿದ್ದು, ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಪರವಾಗಿ ಕೆಲಸ ಮಾಡುವಂತೆ ಕೋರಿದರು.

       ಸಭೆಮುಗಿದ ಬಳಿಕ ಡಿ.ನಾಗರಾಜಯ್ಯ ಮಾತನಾಡಿ, ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಮೈತ್ರಿ ಅಭ್ಯರ್ಥಿ ಪರವಾಗಿ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

         ಸಭೆಗೆ ತಾ.ಪಂ.ಅಧ್ಯಕ್ಷ ಹರೀಶ್‍ನಾಯ್ಕ್, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷೆ ಕೆಂಪರಾಜ, ಜಿ.ಪಂ.ಸದಸ್ಯ ಮಂಜುಳಾ ಶೇಷಗಿರಿ ಸೇರಿದಂತೆ ಮುಖಂಡರು ಗೈರು ಹಾಜರಾಗಿದ್ದರು.ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಮಾಜಿ ಜಿ.ಪಂ.ಅಧ್ಯಕ್ಷ ಡಾ.ರವಿ, ದಲಿತ ಮುಖಂಡ ವರದರಾಜು, ಮಾಜಿ ಸದಸ್ಯರಾದ ಅಣ್ಣಯ್ಯ, ಬೋಜಯ್ಯ, ಜೆಡಿಎಸ್ ಕೆ.ಎಲ್.ಹರೀಶ್,ಪ್ರಧಾನ ಕಾರ್ಯದರ್ಶಿಬಿ.ಎನ್.ಜಗದೀಶ್, ತಾ.ಪಂ.ಸದಸ್ಯರಾದ ಕೃಷ್ಣ, ಜಿಯಾವುಲ್ಲಾ, ಯು.ಕೆ.ಕುಮಾರ್, ಹೊನಮಾಚನಹಳ್ಳಿ ತಮ್ಮಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link