ಜಿಲ್ಲೆಗೆ ನೀರು ಬಿಡಬಾರದೆಂಬ ಹಠ- ಇಂದೂ ಬೇಕಾಗಿದೆ ನಮ್ಮವರ ಮತ : ಬಸವರಾಜು

ಮಧುಗಿರಿ:

         ಕಾಲದ ಕೈ ಕೆಳಗೆ ಎಲ್ಲಾರೂ ಗೊಂಬೆಗಳಿದ್ದಂತೆ ಅದು ಮಾಜಿ ಪ್ರಧಾನಿಯಾದರೂ ಸರಿ ಸಾಮಾನ್ಯ ವ್ಯಕ್ತಿಯಾದರು ಸರಿ ಇದಕ್ಕೆ ಉದಾಹರಣೆ ದೇವೆಗೌಡರು ಇಂದೂ ನಮ್ಮ ಜಿಲ್ಲೆಯವರ ಮತಭಿಕ್ಷೆ ಬೇಡುತ್ತಿರುವುದೇ ಸಾಕ್ಷಿ ಯಾಗಿದೆ ಎಂದು. ಮಾಜಿ ಸಂಸದ ಜಿ.ಎಸ್.ಬಸವರಾಜು ವ್ಯಂಗ್ಯವಾಡಿದರು.

        ತಾಲ್ಲೂಕಿನ ಐಡಿಹಳ್ಳಿ, ದೊಡ್ಡೇರಿ ಹಾಗೂ ಮಿಡಿಗೇಶಿ ಹೋಬಳಿಯ ಹೊಸಕೆರೆ ಗ್ರಾಮದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ರೋಡ್ ಷೋ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದೂ ಜಿಲ್ಲೆಯ ಕೆರೆಗಳೆಲ್ಲಾ ಬರಿದಾಗಿರಲು ದೇವೆಗೌಡ ಹಾಗೂ ಅವರ ಪುತ್ರೆರೆ ಅವರ ಸ್ವಾರ್ಥಕ್ಕಾಗಿ ಬರಗಾಲದಿಂದ ತ್ತರಿಸುತ್ತಿದ್ದ ತುಮಕೂರು ಜಿಲ್ಲೆಗೆ ಯಾವುದೇ ಕಾರಣಕ್ಕೂ ನೀರ ಹರಿಸ ಬಾರದೆಂದು ಹಗಲಿರುಳೆನ್ನದೆ ಧರಣಿ ಸತ್ಯಾಗ್ರಹಗಳನ್ನು ನಡೆಸಿ ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಮ್ಮ ಜಿಲ್ಲೆ ಸದಾ ಬರಗಾಲಕ್ಕೆ ತುತ್ತಾಗುವಂತೆ ಮಾಡಿದ ಪುಣ್ಯತ್ಮ .

       ಇಂದೂ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಡಿಸಿ ಸದಾ ಕಾಲ ಹರಿಸಿ ಇಲ್ಲಿನ ಭೂಮಿಯನ್ನು ಹಚ್ಚಾ ಹಸಿರಾಗಿರುವಂತೆ ಮಾಡುವೇ ಎಂದು ಬಂದಿದ್ದು ಕಾಲಕ್ಕೆ ತಕ್ಕಂತೆ ರಾಜಕಾರಣ ಮಾಡುತ್ತಿರುವ ಹೇಮಾವತಿ ನದಿಯ ನೀರಿನ ಕಾಲುವೆಗಳನ್ನು ಹೊಡೆದು ಹಾಕಿಸಿ ತಾರತಮ್ಯ ಎಸಗಿದ್ದಾರೆ. ಇಂತಹವರಿಗೆ ಜಿಲ್ಲಾ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.

        ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ ಈ ಚುನಾವಣೆ ದೇವೆಗೌಡರು ಹಾಗೂ ಜಿ ಎಸ್ ಬಸವರಾಜು ರವರುಗಳ ನಡುವಿನ ಚುನಾವಣೆಯಲ್ಲಾ ಹಾಲಿ ಪ್ರಧಾನ ಮಂತ್ರಿ ವಿರುದ್ಧ ಮಾಜಿ ಪ್ರಧಾನಿಯವರ ಚುನಾವಣೆಯಾಗಿದೆ. ನಮ್ಮ ವಕ್ಕಲಿಗ ಸಮೂದಾಯದವರು ಇರುವಲ್ಲಿನ ಕೆರೆ ಕಟ್ಟೆಗಳನ್ನು ನೋಡಿದರೆ ತಿಳಿಯುತ್ತದೆ ದೇವೆಗೌಡರ ರಾಜಕೀಯ ಮರ್ಮ.

       ಇವರ ಸ್ವಾರ್ಥ ಹಾಗೂ ಕುಟುಂಬ ರಾಜಕಾರಣವನ್ನು ಜಿಲ್ಲಾ ಮತದಾರರು ಧಿಕ್ಕರಿಸ ಬೇಕಾಗಿದೆ. ಜಿಲ್ಲೆಗೆ ಹೇಮಾವತಿ ನೀರು ಹರಿಸುವ ಬದಲು ಜನತೆಗೆ ವಿಷ ಉಣಿಸಿದ್ದಾರೆ. ಮಧುಗಿರಿಯಲ್ಲಿ ಶಾಸಕರಾಗಿದ್ದ ಪರಮೇಶ್ವರ್, ಅನಿತಾ ಕುಮಾರಸ್ವಾಮಿ ತಾಲ್ಲೂಕನ್ನು ಅಭಿವೃದ್ಧಿ ಪಡಿಸಿಲ್ಲ. ಹಾಲಿ ಶಾಸಕ ವೀರಭದ್ರಯ್ಯ ತ್ರೀರ್ವ ಬರಗಾಲಕ್ಕೆ ತುತ್ತಾಗಿರುವ ತಾಲ್ಲೂಕಿನ ಬಗ್ಗೆ ಹಾಗೂ ನೀರು ಹರಿಸಲು ಕಿಂಚಿತ್ತಾದರು ಚಿಂತನೆ ನಡೆಸಿದ್ದಾರೆಯೇ.

      ಸಾವಿರಾರು ಕೋಟಿ ಅನುದಾನವನ್ನು ತಾಲ್ಲೂಕಿಗೆ ತಂದಹ ಕೆ.ಎನ್.ರಾಜಣ್ಣ ಅಂತಹವರನ್ನೇ ನೀವು ಮನೆಗೆ ಕಳುಹಿಸಿದ್ದೀರಾ. ಇನ್ನೂ ಬೆಂಗಳೂರಿನ ಪದ್ಮನಾಭ ನಗರದಲ್ಲಿಯೇ ಕುಳಿತು ತಾಲ್ಲೂಕನ್ನು ಅಭಿವೃದ್ಧಿ ಮಾಡಲು ಸಾಧ್ಯವೆ ಇದೂ ಮಾಜಿ ಪ್ರಧಾನಿಗಳ ಕಾರ್ಯಾ ವೈಖರಿ ಜಿಲ್ಲೆಯಲ್ಲಿ ಕಾಂಗ್ರೆಸ್ ನಂಟು ಬಸವರಾಜುರವರಿಗೆ ಸಾಕಷ್ಟಿದೆ ಅವರ ಬೆಂಬಲದಿಂದಲೆ ಈ ಬಾರಿ ಬಿಜೆಪಿ ಪಕ್ಷ ಜಯಬೇರಿ ಬಾರಿಸಲಿದೆ ಎಂದರು.

       ಮಾಜಿ ಶಾಸಕ ಗಂಗಹನುಮಯ್ಯ, ತಾಲ್ಲೂಕು ಭಾಜಪ ಮಂಡಲಾಧ್ಯಕ್ಷ ಎಸ್.ಇ.ರಮೇಶ್‍ರೆಡ್ಡಿ, ರಾಜ್ಯ ರೈತ ಮೋರ್ಚದ ಉಪಾಧ್ಯಕ್ಷ ಶಿವಪ್ರಸಾದ್, ಮುಖಂಡರುಗಳಾದ ಪಾಂಡರಂಗಾರೆಡ್ಡಿ, ನಾಗರಾಜು, ಮೂಡ್ಲಿಗೀರೀಶ್, ಹೊನ್ನಪ್ಪ, ಮನು, ತಿಪ್ಪೇಶ್, ರಂಗನಾಥ್ ಹಾಗೂ ಕಾರ್ಯಕರ್ತರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap