ಹಿರಿಯೂರು:
ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಆಡಳಿತದ ಬಗ್ಗೆ ಯೋಜನೆಯ ಸದಸ್ಯರಿಗೆ ತಿಳುವಳಿಕೆ ನೀಡಲು ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿ.ವೈ.ಎಸ್.ಪಿ ವೆಂಕಟಪ್ಪ ನಾಯಕ ರವರು ಮಾತನಾಡಿ ಇಂದಿನ ಪ್ರಗತಿಪರ ಸಮಾಜದಲ್ಲಿ ಮಹಿಳೆಯರು ತಮ್ಮ ಆತ್ಮರಕ್ಷಣೆ ಬಗ್ಗೆ ಜಾಗರೂಕರಾಗಿರಬೇಕುಎಂಬ ಬಗ್ಗೆ ಮಾಹಿತಿ ನೀಡಿದರು.
ವೃತ್ತ ನಿರೀಕ್ಷಕರಾದ ಕೆ.ಟಿ ಗುರುರಾಜ್ ರವರು ಹಾಗೂ ಮಹಿಳಾ ಪೊಲೀಸ್ ಓಬವ್ವ ಪಡೆಯವರು ಆತ್ಮರಕ್ಷಣೆ ಕೌಶಲ್ಯದ ಬಗ್ಗೆ ಮಹಿಳೆಯರಿಗೆ ಸೂಕ್ತ ವಿಚಾರಗಳನ್ನು ತಿಳಿಸಿದರು. ಧರ್ಮಸ್ಥಳ ಯೋಜನೆಯ ಮುಖ್ಯಸ್ಥರಾದ ರಾಜು ಹಾಗೂ ಯೋಜನೆಯ ಅನೇಕ ಮಹಿಳೆಯರು ಮತ್ತು ಹರ್ತಿಕೋಟೆ ಮಹಾಸ್ವಾಮಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ