ದಾವಣಗೆರೆ:
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೌಶಲ್ಯ ಅಭಿವೃದ್ಧಿ ಕೋಶ ಮತ್ತು ವೃತ್ತಿ ಮಾರ್ಗದರ್ಶನ ಕೋಶದಡಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಗಾರ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಾರ್ಪೊರೇಟ್ ತರಬೇತುದಾರ ಡಾ.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕಂಪನಿಗಳು ಬಯಸುವ ಉದ್ಯೋಗ ಕೌಶಲ್ಯಗಳ ಕೊರತೆಯಿದೆ. ಅವುಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ಡಾ ಮರುಳಸಿದ್ದಪ್ಪ, ಉದ್ಯೋಗ ಪಡೆಯಲು ಕೌಶಲ್ಯ ಮುಖ್ಯ ಕೌಶಲ್ಯ ಕಲಿಯಲು ವಿವಿಧ ಹಂತಗಳಿವೆ ಒಂದೊಂದಾಗಿ ಕಲಿತರೆ ಉದ್ಯೋಗ ಪಡೆಯಬಹುದೆಂದು ತಿಳಿಸಿದರು .
ಪ್ಲೇಸ್ಮೆಂಟ್ ಸೆಲ್ ಸಂಚಾಲಕರಾದ ವೆಂಕಟೇಶ್ ಬಾಬು ಅವರು ಅತಿಥಿಗಳನ್ನು ಪರಿಚಯಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಶಂಕರ್ ಆರ್ ಶಿಲಿ ವಹಿಸಿದ್ದರು. ಐಕ್ಯೂಎಸಿ ಸಂಚಾಲಕರುಗಳಾದ .ವೀರೇಶ್, ಡಾ ಮಂಜಣ್ಣ ಎಂ, ಪ್ರಾಧ್ಯಾಪಕರಾದ ಮಂಜುನಾಥ್ ಆರ್ ಸಿ, ನಾಗರಾಜ, ಎಸ್ ಆರ್ ಭಜಂತ್ರಿ ಮತ್ತಿತರರಿದ್ದರು.