ಉದ್ಯೋಗಮುಖಿ ಶಿಕ್ಷಣ ಅತ್ಯಗತ್ಯ : ಜಿ.ಪ್ರೇಮ್‍ಕುಮಾರ್

ಹಿರಿಯೂರು:

       ಪ್ರಸ್ತುತ ದಿನಗಳಲ್ಲಿರುವ ಪಠ್ಯಕ್ರಮ ಹಳೆಯದಾಗಿದ್ದು ಇದರಿಂದ ಯುವಜನರು ನಿರುದ್ಯೋಗಕ್ಕೆ ಒಳಗಾಗುತ್ತಾರೆ ಆದ ಕಾರಣ ಉದ್ಯೋಗಮುಖಿ ನೀಡುವಂತಹ ಪಠ್ಯಕ್ರಮವನ್ನು ಅಳವಡಿಸಿಕೊಳ್ಳುವ ಮೂಲಕ ನಿರುದ್ಯೋಗ ಸಮಸ್ಯೆಗೆ ನಾಂದಿ ಹಾಡಬೇಕು ಎಂಬುದಾಗಿ ನಗರಸಭೆ ಸದಸ್ಯರಾದ ಜಿ.ಪ್ರೇಮ್ ಕುಮಾರ್ ಹೇಳಿದರು.

         ನಗರದ ಗುರುಭವನದಲ್ಲಿ ನಡೆದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಾಂಸ್ಕøತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

           ಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೂ ಗುರಿ ಎನ್ನುವುದು ಇದ್ದರೆ ಜೀವನದ ಸಂಕಲ್ಪಗಳನ್ನು ನೆರವೇರಿಸಿಕೊಳ್ಳುವುದರಲ್ಲಿ ಗುರುವಿನ ಪಾತ್ರವೂ ತುಂಬಾ ಮುಖ್ಯವಾಗಿರುತ್ತದೆ. ಹಾಗಾಗಿ ಗುರಿಯನ್ನು ತಲುಪುವುದಕ್ಕೆ ಆಗದಿದ್ದರೂ ಸತತ ಪ್ರಯತ್ನ ಪಟ್ಟಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ ಎಂದರು.

           ನಮ್ಮ ತಾಲ್ಲೂಕಿನ ವಿಜ್ಞಾನ ವಿಭಾಗದ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಉಚಿತ ಸಿ.ಇ.ಟಿ ತರಬೇರಿ ಕಾರ್ಯಾಗಾರವನ್ನು ಆರಂಭಿಸಬೇಕೆಂಬ ವಿದ್ಯಾರ್ಥಿಗಳ ಒತ್ತಾಸೆಯನ್ನು ನಮ್ಮ ತಾಲ್ಲೂಕಿನ ಜನಪ್ರಿಯ ಶಾಸಕರಾದಂತಹ ಪೂರ್ಣಿಮಾಶ್ರೀನಿವಾಸ್‍ರವರು ನೆರವೇರಿಸಿದ್ದಾರೆ.

          ಈ ಕಾರ್ಯಾಗಾರಕ್ಕೆ ಅನೇಕ ಊರುಗಳಿಂದ ಅನುಭವಿ ಸಿ.ಇ.ಟಿ. ಉಪನ್ಯಾಸಕರನ್ನು ಕರೆಯಿಸಿ ತರಬೇತಿಯನ್ನು ನೀಡಲು ನಾನು ಮತ್ತು ಶಾಸಕರು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಂಡಿದ್ದೇವೆ ಇದರ ಸದುಪಯೋಗವನ್ನು ಪಡೆದುಕೊಂಡು ವಿದ್ಯಾರ್ಥಿಗಳು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಿ ಎಂದು ಹೇಳಿದರು.

         ಕಾಲೇಜಿನ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ಮೊದಲನೇ ಹೆಚ್ಚು ಅಂಕ ಪಡೆದವರಿಗೆ ಮತ್ತು ದ್ವಿತೀಯ ಹೆಚ್ಚು ಅಂಕ ಪಡೆದವರಿಗೆ ಶಾಸಕರಾದ ಪೂರ್ಣಿಮಾ ಶ್ರೀನಿವಾಸ್ ರವರ ಪರವಾಗಿ ತಲಾ ಐದು ಸಾವಿರಗಳಂತೆ (ಮೊದಲನೇ ಬಹುಮಾನ) ಹಾಗೂ ತಲಾ ಮೂರು ಸಾವಿರದಂತೆ (ಎರಡನೇ ಬಹುಮಾನ ) ವಿತರಿಸಿದರು.

         ಈ ಕಾರ್ಯಕ್ರಮದಲ್ಲಿ ಶಾರದಾ ಆಶ್ರಮದ ಮಾತಾಜಿ ಚೈತನ್ಯಮಯಿ, ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಎಸ್. ಶಾಂತರಾಜಯ್ಯ ನಿವೃತ್ತ ಪ್ರಾಂಶುಪಾಲರಾದ ಬಿ.ಚಿಕ್ಕಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ವಿ.ನಟರಾಜ್, ಉಪನ್ಯಾಸಕರಾದ ಎನ್.ರಂಗಪ್ಪ, ಶಾಂತಕುಮಾರಿ, ಪ್ರೇಮಕುಮಾರಿ, ಚಿನ್ಮಹೇಶ್, ಗುರುರಾಜ್, ಜಯಂತ್, ಕೆ.ಆರ್.ತಿಪ್ಪೇಸ್ವಾಮಿ, ರೇವಣಸಿದ್ದಪ್ಪ, ಹಾಗು ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು ಕಾರ್ಯಕ್ರಮದ ನಂತರ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

 

Recent Articles

spot_img

Related Stories

Share via
Copy link