ಅತಿಯಾದ ಮಾತ್ರೆ ಸೇವಿಸಿ ಪತ್ರಿಕೋದ್ಯಮದ ವಿದ್ಯಾರ್ಥಿನಿ ಸಾವು

ಬೆಂಗಳೂರು

          ಒಂಟಿತನಕ್ಕೆ ಬೇಸತ್ತು ಅತಿಯಾದ ಮಾತ್ರೆ ಸೇವಿಸಿ ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬರು ಅನುಮಾನಾಸ್ಪದವಾಗಿ ಆತ್ಮಹತ್ಯೆ ಮಾಡಿಕೊಂಢಿರುವ ಪಟ್ಟಿರುವ ದುರ್ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

         ಮುಂಬೈ ಮೂಲದ ಸೋಫಿಯಾ ದಮನಿ(20)ಎಂದು ಅನುಮಾನಾಸ್ಪದವಾಗಿ ಮೃತಪಟ್ಟ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ. ಕೆ.ನಾರಾಯಣಪುರದ ಕ್ರಿಸ್ತಜಯಂತಿ ಕಾಲೇಜಿನಲ್ಲಿ ಬಿಎ ಪತ್ರಿಕೋದ್ಯಮದ 4ನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿನಿ ಸೋಫಿಯಾ ಮೃತದೇಹ ಹಾಸ್ಟೆಲ್‍ನ ಕೋಣೆಯ ಹಾಸಿಗೆಯ ಮೇಲೆ ಬುಧವಾರ ಸಂಜೆ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.

         ವಿದ್ಯಾಭ್ಯಾಸಕ್ಕಾಗಿ ಕಳೆದ ಎರಡು ವರ್ಷಗಳ ಹಿಂದೆ ಮುಂಬೈಯಿಂದ ನಗರಕ್ಕೆ ಬಂದಿದ್ದ ಸೋಫಿಯಾ ಕ್ರಿಸ್ತಜಯಂತಿ ಕಾಲೇಜಿಗೆ ಸೇರಿದ್ದು ಕಾಲೇಜು ಬಳಿಯ ಹಾಸ್ಟೆಲ್‍ನಲ್ಲಿದ್ದರು. ಇತ್ತೀಚಿಗೆ ಅನಾರೋಗ್ಯದಿಂದ ಬಳಲುತ್ತಿದ್ದ ಆಕೆಯು ಮಾನಸಿಕ ಅಸ್ವಸ್ಥತೆಗೊಳಗಾಗಿದ್ದರು ಎಂದು ತಿಳಿದುಬಂದಿದೆ.

          ಸಹಪಾಠಿಗಳ ಜೊತೆ ಬುಧವಾರ ಬೆಳಿಗ್ಗೆ ಮಾತಾಡಿದ್ದ ಸೋಫಿಯಾ ಈ ನೀವು ಕಾಲೇಜಿಗೆ ಹೋಗಿ ನಾನು ಬರುವುದಿಲ್ಲ ಎಂದು ತಿಳಿಸಿದ್ದಾಳೆ. ಬಳಿಕ ಸಂಜೆ ಸಹಪಾಠಿಗಳು ಹಾಸ್ಟೆಲ್‍ಗೆ ವಾಪಸಾದಾಗ ಶವವಾಗಿ ಪತ್ತೆಯಾಗಿದ್ದಾರೆ.

         ಸೋಫಿಯಾ ಅತಿಯಾದ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಮರಣೋತ್ತರ ಪರೀಕ್ಷೆಗಾಗಿ ಸೋಫಿಯಾ ಮೃತದೇಹವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಅನುಮಾನಾಸ್ಪದವಾಗಿ ಸೋಫಿಯಾ ಮೃತಪಟ್ಟ ಹಿನ್ನೆಲೆಯಲ್ಲಿ ದೂರು ನೀಡಲಾಗಿದ್ದು, ಕೊತ್ತನೂರು ಪೆÇಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 74(ಅಸಹಜ ಸಾವು) ಅಡಿ ಪ್ರಕರಣ ದಾಖಲಾಗಿದೆ.

ಒಂಟಿತನಕ್ಕೆ ಬೇಸತ್ತು ಸಾವು

          ಆತ್ಮಹತ್ಯೆಗೂ ಮುನ್ನ ಸೋಫಿಯಾ ಬರೆದಿರುವ ಡೆತ್‍ನೋಟ್‍ನಲ್ಲಿ ಆತ್ಮಹತ್ಯೆಗೆ ಒಂಟಿತನ ಕಾರಣ. ನನ್ನ ತಂದೆ- ತಾಯಿ ದುಬೈನಲ್ಲಿ ವಾಸಿಸುತ್ತಿದ್ದಾರೆ. ನನಗೆ ಹಣ ಕಳುಹಿಸುತ್ತಿದ್ದ ಅಪ್ಪ- ಅಮ್ಮ ಇದೂವರೆಗೂ ನೀನು ಹೇಗಿದ್ದೀಯಾ ಎಂದು ನನ್ನನ್ನು ವಿಚಾರಿಸುತ್ತಿರಲಿಲ್ಲ. ನನಗೆ ಅಪ್ಪ-ಅಮ್ಮನ ಪ್ರೀತಿ ಇಲ್ಲದಂತಾಗಿದೆ. ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link