ಬೆಂಗಳೂರು
ವಿಧಾನಮಂಡಲ ಕಲಾಪದ ಚಿತ್ರೀಕರಣದಿಂದ ಮಾಧ್ಯಮಗಳ ಕ್ಯಾಮೆರಾವನ್ನು ದೂರ ಇಟ್ಟಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಈಗ ಮಾಧ್ಯಮಗಳ ಮೇಲೆ ಮತ್ತೊಂದು ನಿರ್ಬಂಧ ಹೇರಿದ್ದು ಶಾಸಕರ ಭವನಕ್ಕೆ ದೃಶ್ಯ ಹಾಗೂ ಅಚ್ಚು ಮಾಧ್ಯಮಗಖ ಪತ್ರಕರ್ತರಿಗೆ ಪ್ರವೇಶ ನಿರಾಕರಿಸಿದ್ದಾರೆ..
ಮೊದಲು ಶಾಸಕರ ಭವನಕ್ಕೆ ಪತ್ರಕರ್ತರಿಗೆ ಮುಕ್ತ ಪ್ರವೇಶ ಇತ್ತು.ಈಗ ಶಾಸಕರ ಖಾಸಗಿತನಕ್ಕೆ ತೊಂದರೆಯಾಗುತ್ತದೆ ಎಂದು ನೆಪ ಹೇಳಿ ಮಾಧ್ಯಮಪ್ರತಿನಿಧಿಗಳ ಪ್ರವೇಶ ನಿರಾಕರಿಸಿ ಆದೇಶಿಸಿದ್ದಾರೆ.ಶಾಸಕರು ಸಂದರ್ಶನಕ್ಕೆ ಒಪ್ಪಿಗೆ ಕೊಟ್ಟರೆ ಮಾತ್ರ ಶಾಸಕರ ಭವನ ಪ್ರವೇಶಿಸಬಹುದ ಎಂದಿದ್ದಾರೆ.
ಈ ಮೊದಲು ಶಾಸಕರ ಭವನದಲ್ಲಿನ ಅವ್ಯವಸ್ಥೆ, ಶಾಸಕರ ಬೆಂಬಲಿಗರ ಪುಂಡಾಟ, ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದವು.ಹೀಗಾಗಿ ಶಾಸಕರು, ಶಾಸಕರ ಬೆಂಬಲಿಗರ ಚಲನವಲನಗಳು ಮೀಡಿಯಾ ಕಣ್ಣಿಗೆ ಬೀಳಬಾರದು? ಎಂಬ ಉದ್ದೇಶ ಸ್ಪೀಕರ್ ಆದೇಶದ ಹಿಂದಿದೆಯೇ?ಎನ್ನಲಾಗಿದೆ.
