ತುಮಕೂರು
ಸ್ಮಾರ್ಟ್ ಸಿಟಿ ಮತ್ತು ತುಮಕೂರು ಮಹಾನಗರ ಪಾಲಿಕೆ ಗಡಿ ವ್ಯಾಪ್ತಿಯ 10 ಕಿ.ಮೀ ಸುತ್ತ-ಮುತ್ತಲ ವ್ಯಾಪ್ತಿಯ ಸರ್ಕಾರಿ ಜಮೀನುಗಳನ್ನು ಆಯಾ ಗ್ರಾಮವಾರು ಇತಿಹಾಸ ಸಹಿತ ಅಂದರೆ ಭೂಮಿ ಖಾಲಿ ಇದೆಯಾ? ಯಾರಾದರೂ ಅನುಭವದಲ್ಲಿದ್ದಾರಾ? ಬೆಳೆ ಯಾವುದು ಇದೆ? ಮನೆ ನಿರ್ಮಾಣವಾಗಿದೆಯಾ? ಅವರಿಗೆ ಮಂಜೂರು ಮಾಡಲು ಕಾನೂನಿನಲ್ಲಿ ಅವಕಾಶವಿದೆಯಾ? ಸರ್ಕಾರಿ ಜಮೀನು ಮಂಜೂರಾತಿಗಾಗಿ ಯಾವುದಾದರೂ ಅರ್ಜಿ ಹಾಕಿದ್ದಾರೆಯೇ? ಯಾವುದಾದರೂ ನ್ಯಾಯಾಲಯದಲ್ಲಿ ವಿವಾದ ಇದೆಯಾ? ಜಮೀನಿನ ವಿಧ? ವಿಸ್ತೀರ್ಣ ಎಷ್ಟು? ಹೀಗೆ ವಿವರವಾದ ಮಾಹಿತಿಯೊಂದಿಗೆ ಜಿಐಎಸ್ ಆಧಾರಿತ ಲೇಯರ್ ಮಾಡಲು ತುಮಕೂರು ನಗರ ವಿಧಾನಸಭಾ ಸದಸ್ಯರಾದ ಶ್ರೀ ಜಿ.ಬಿ.ಜ್ಯೋತಿಗಣೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಹೌಸಿಂಗ್ ಫಾರ್ಆಲ್ -2022 ಯೋಜನೆಗೆ ಸರ್ಕಾರಿ ಜಮೀನು ಅಥವಾ ರೈತರ ಜಮೀನು ಕೊಂಡುಕೊಳ್ಳುವ ಸಾದ್ಯತೆಗಳ ಬಗ್ಗೆ ತುಮಕೂರು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ದಿನಾಂಕ:11.10.2018 ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಸೂಚಿಸಿದರು.
ಪ್ರತಿಗ್ರಾಮದ ಗ್ರಾಮಲೆಕ್ಕಿಗರು ಕರಾರುವಕ್ಕಾದ ಮಾಹಿತಿಯೊಂದಿಗೆ ವಿವರಗಳನ್ನು ಸಂಗ್ರಹಿಸಬೇಕು. ಸರ್ವೆಯರ್ಗಳು ಡಿಜಿಟಲ್ ಗ್ರಾಮನಕ್ಷೆಯಲ್ಲಿ ನಮೂದು ಮಾಡಬೇಕು, ಜಮೀನು ಸಮತಟ್ಟು ಮಾಡಲು, ಫೆನ್ಸ್ ಹಾಕಲು, ಅಳತೆ ಮಾಡಲು ಆರ್ಥಿಕ ನೆರವಿನ ಅಗತ್ಯವಿದ್ದಲ್ಲಿ ನಿಯಮ ಪ್ರಕಾರ ನೀಡಲು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
ಸರ್ಕಾರಿ ಜಮೀನನಲ್ಲಿ ಅನಧಿಕೃತವಾಗಿ ಅನುಭವದಲ್ಲಿರುವವರಿಗೆ ಮತ್ತು ಅದನ್ನು ನೋಡಿಕೊಂಡು ಸುಮ್ಮನಿರುವ ಅಧಿಕಾರಿಗಳಿಗೆ ನಿಯಮ ಪ್ರಕಾರ ಇರುವ ಶಿಕ್ಷೆ ಬಗ್ಗೆ ಹಾಗೂ ಯಾವ ಜಮೀನನ್ನು ಯಾರಿಗೆ ಮಂಜೂರು ಮಾಡಬಹುದು ಎಂಬ ನಿಯಮದ ಬಗ್ಗೆ ಕರಪತ್ರ ಮತ್ತು ಬೀದಿ ನಾಟಕಗಳ ಮೂಲಕ ಸಾರ್ವಜನಿಕರ ಗಮನಸೆಳೆಯುವ ಮೂಲಕ ಕಾನೂನು ಮತ್ತು ನಿಯಮಗಳನ್ನು ಮನವರಿಕೆ ಮಾಡಲು ಸೂಚಿಸಿದರು.
ಅರ್ಹರಿಗೆ ಜಮೀನು ನೀಡುವುದು ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಸಮೋರಾಪಾದಿಯಲ್ಲಿ ಕೈಗೊಳ್ಳಲು ಸೂಚಿಸಿದರು.
ಸರ್ಕಾರಿ ಜಮೀನು ಅನುಭವದಲ್ಲಿರುವವರಿಗೆ ಗುಬ್ಬಿಯ ಬಿದರೆಹಳ್ಳಕಾವಲ್ ಮಾದರಿಯಲ್ಲಿ ಬದಲಿ ಸರ್ಕಾರಿ ಜಮೀನು ಅಥವಾ ಪರಿಹಾರ ನೀಡಲು ಚಿಂತನೆ ನಡೆಸಿ ಸರ್ಕಾರದ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಲು ಸಹ ಸೂಚಿಸಿದರು. ತುಮಕೂರು ನಗರ ಮತ್ತು 10 ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲಾ ವಸತಿ ರಹಿತರಿಗೆ ಹೌಸಿಂಗ್ ಫಾರ್ಆಲ್ -2022 ಯೋಜನೆಯಡಿ ವಸತಿ ಮತ್ತು ನಿರುದ್ಯೋಗಿಗಳು ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಇರುವವರೆಗೆ ಲಿವಿಂಗ್ಕಮ್ ವಕ್ರ್ಸ್ಶೆಡ್ ನಿರ್ಮಿಸಿ ಕೊಡುವ ಯೋಜನೆಗೆ ಮತ್ತು ಸರ್ಕಾರಿ ಕಟ್ಟಡಗಳಿಗೆ ಜಮೀನಿನ ಅಗತ್ಯವಿದೆ ಆದ್ದರಿಂದ ಒಂದು ತಿಂಗಳಲ್ಲಿ ಸರ್ಕಾರಿ ಜಮೀನು ಪಟ್ಟಿ ಮಾಡಲು ಸೂಚಿಸಿದರು, ಹೋರಾಟಗಾರರ ಬಳಿ ಸರ್ಕಾರಿ ಜಮೀನು ಮಾಹಿತಿಗಳಿವೆ ಅವರೆಲ್ಲಾ ಖಾಸಗಿ ಡಿಟೆಕ್ವೀವ್ ಆಗಿದ್ದಾರೆ. ನನಗೆ ನೀಡಿರುವ ಮನವಿ ಪ್ರಕಾರ ಸಾಕಷ್ಟು ಜಮೀನು ದೊರೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
