ಬಳ್ಳಾರಿ
ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ 80 ಆರೋಪಿಗಳನ್ನು ಗಡಿನಾಡು ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.ಗುಪ್ತವಾಗಿ ಮಾಹಿತಿ ಸೋರಿಕೆ ಆಗದಂತೆ ಜೈಲಾಧಿಕಾರಿಗಳಿಗೂ ವಿಷಯ ತಿಳಸದೇ ಪೊಲೀಸರು ಆರೋಪಿಗಳನ್ನು ರಾತ್ರೋರಾತ್ರಿ ಬಳ್ಳಾರಿಗೆ ಕರೆದೊಯ್ಯದಿದ್ದಾರೆ.ಅಧಿಕಾರಿಗಳಿಗೆ ಮಾಹಿತಿ ಇಲ್ಲದ ಹಿನ್ನಲೆಯಲ್ಲಿ ಈಗ ಜೈಲಿನಲ್ಲಿ ಸಿಬ್ಬಂದಿ ಗಳು ಬ್ಯಾರಕ್ ಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಸದ್ಯ ಸ್ಥಳಾಂತರಗೊಂಡ 80 ಆರೋಪಿಗಳಿಗೂ ಪ್ರತ್ಯೇಕ ಬ್ಯಾರಕ್ ನಲ್ಲಿರಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಪೋಸ್ಟ್ ಮಾಡಿದ್ದ ಆರೋಪಿ ನವೀನ್, ತಾನೇ ಪೋಸ್ಟ್ ಮಾಡಿ ಒಂದು ಗಂಟೆಯೊಳಗೆ ಡಿಲೀಟ್ ಮಾಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ