ಕನಕಗುರುಪೀಠಕ್ಕೆ ಸಚಿವ ಕೆ.ಎಸ್.ಈಶ್ವರಪ್ಪ ಭೇಟಿ

ಕೊರಟಗೆರೆ

   ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಕೊರಟಗೆರೆ ಶ್ರೀ ರೇವಣ್ಣಸಿದ್ದೇಶ್ವರ ಕನಕ ಗುರುಪೀಠ ಸಿದ್ದರಬೆಟ್ಟಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿಗಳ ಆಶೀರ್ವಾದ ಪಡೆದರು.

   ಶಿರಾ ಉಪ ಚುನಾವಣಾ ಪ್ರಚಾರಕ್ಕೆ ಹೋಗುವಾಗ ಮಾರ್ಗ ಮಧ್ಯೆ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮೀಜಿಗಳ ಅಶೀರ್ವಾದ ಪಡೆಯಲು ಸಿದ್ದರಬೆಟ್ಟದ ಶ್ರೀ ರೇವಣ್ಣ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ್ದರು. ಶ್ರೀ ಮಠದ ಪ್ರಾರಂಭೋತ್ಸವಕ್ಕೆ ಕಾರಣಾಂತರದಿಂದ ಬರಲು ಸಾಧ್ಯವಾಗಲಿಲ್ಲ. ಮಠದ ವಾತಾವರಣ ತುಂಬಾ ಚೆನ್ನಾಗಿದೆ. ಶ್ರೀ ಮಠದ ಅಭಿವೃದ್ದಿಗೆ ಸಹಕರಿಸಲಾಗುವುದು ಎಂದು ತಿಳಿಸಿದರು.

   ಶ್ರೀ ಮಠದಲ್ಲಿ ಸಚಿವರು ಬರುವ ಮಾಹಿತಿ ಅರಿತ ಮಠದ ನೂರಾರು ಸದ್ಭಕ್ತರು ಬೆಳಗ್ಗೆಯಿಂದಲೆ ಮಠದಲ್ಲಿ ಜಮಾವಣೆಗೊಂಡರು. ಜೊತೆಗೆ ಶ್ರೀ ಮಠಕ್ಕೆ ಹೆಚ್ಚಿನ ಅನುದಾನ ನೀಡಿ ಮಠದ ಶ್ರೇಯೋಭಿವೃದ್ದಿಗೆ ಸಹಕಾರ ಕೊಡುವಂತೆ ಸಚಿವರಿಗೆ ಮನವಿ ಮಾಡಿಕೊಂಡರು. ಅದಕ್ಕೆ ಸಚಿವರು ಸಹ ಸಕಾರಾತ್ಮಕವಾಗಿ ಸ್ಪಂದಿಸಿದರು.

   ಇದೇ ಸಂದರ್ಭದಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯನಾಯ್ಡು ಸ್ವಾಮೀಜಿಗಳಿಂದ ಆಶೀರ್ವಾದ ಪಡೆದರು. ಜೊತೆಗೆ ಹೊಸದುರ್ಗದ ಕುಂಚಿಟಿಗ ಮಠದ ಶ್ರೀ ಶಾಂತವೀರ ಮಹಾಸ್ವಾಮೀಜಿಗಳು ಉಪಸ್ಥಿತರಿದ್ದರು. ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರಾನಂದ ಪುರಿ ಮಹಾಸ್ವಾಮಿಗಳಿಗೆ ಕಟ್ಟಾ ಸುಬ್ರಮಣ್ಯನಾಯ್ಡು, ಸರ್ಕಾರದಲ್ಲಿ ನಿಮ್ಮ ಸಮಾಜದ ಬಹಳಷ್ಟು ಮಂತ್ರಿಗಳಿದ್ದಾರೆ, ಶ್ರೀ ಮಠದ ಅಭಿವೃದ್ದಿಗೆ ಸಹಕರಿಸಲು ಹೇಳಬೇಕು ಎಂದು ತಿಳಿಸಿದರು.

    ಇದೇ ಸಂದರ್ಭದಲ್ಲಿ ಈಶ್ವರಪ್ಪನವರು ಮಠಕ್ಕೆ ಸಂಬಂಧಿಸಿದಂತೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಸೇರಿದಂತೆ ಇನ್ನಿತರ ಅಭಿವೃದ್ಧಿ ಸಂಬಂಧಿ ಕಾಮಗಾರಿಗಳ ಪಟ್ಟಿ, ನೀಲಿ ನಕ್ಷೆ ಹಾಗೂ ಅಂದಾಜು ಮೊತ್ತವನ್ನು ತ್ವರಿತವಾಗಿ ತಲುಪಿಸುವಂತೆ ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರವೀಶ್ ಹಾಗೂ ಕೊರಟಗೆರೆ ಜಿಪಂನ ಎಇಇ ಮಂಜುನಾಥ್‍ಗೆ ಸಚಿವರು ಸೂಚನೆ ನೀಡಿದರು.

   ಈ ಸಂದರ್ಭದಲ್ಲಿ ಬಿಂದುಶೇಖರ್ ಒಡೆಯರ್, ಕುಮಾರ್‍ಗೌಡ, ಕೊರಟಗೆರೆ ತಾಲ್ಲೂಕು ಕುರುಬ ಸಂಘದ ಅಧ್ಯಕರ್ಷ ಮೈಲಾರಪ್ಪ, ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ನಿರ್ದೆಶಕ ನಾಗಭೂಷಣ್, ತಾಲ್ಲೂಕು ಕುರುಬ ಸಂಘದ ಉಪಾಧ್ಯಕ್ಷ ಕುರುಡುಗಾನಹಳ್ಳಿ ರಂಗಣ್ಣ, ಖಜಾಂಚಿ ಚಕ್ಕಹನುಮಯ್ಯ, ಷಫರ್ಡ್ ಇಂಟರ್ ನ್ಯಾಷನಲ್ ತಾಲ್ಲೂಕ್ ಅಧ್ಯಕ್ಷ ಗಂಗರಂಗಯ್ಯ, ಮುಖಂಡರಾದ ರಂಗಧಾಮಯ್ಯ, ಪ್ರಸನ್ನಕುಮಾರ್, ಲಕ್ಷ್ಮೀ ಕಾಂತ್, ಬಿಜೆಪಿ ಯುವ ಮೊರ್ಚಾ ಅಧ್ಯಕ್ಷ ಸ್ವಾಮಿ ಕೆ.ಎನ್., ಎಸ್.ರಂಗರಾಜು, ನಂಜುಡಯ್ಯ, ನಟರಾಜು, ನಾಗರಾಜಪ್ಪ, ರಂಗಸ್ವಾಮಯ್ಯ, ರಾಮಕೃಷ್ಣಪ್ಪ, ಗುರುಸಿದ್ದಪ್ಪ, ಶಿವರಾಜು, ಶಿವಣ್ಣ , ಪವನ್, ಕುಮಾರಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link