ತಿಪಟೂರು:
ಲೋಕಸಭೆ ಚುನಾವಣೆ ಸಂದರ್ಭ ಕ್ಷೇತ್ರದ ಜೆ.ಡಿ.ಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ನಗರ ಮತ್ತು ಹೊನ್ನವಳ್ಳಿ ಮತಗಟ್ಟೆಗಳ ಬಳಿ ಸಂಚರಿಸಿ ಮತದಾರರ ಒಲವು ಗಳಿಸಲು ಕಡೆ ಕ್ಷಣದಲ್ಲಿ ಪ್ರಯತ್ನಿಸಿದರು.
ಮಧ್ಯಾಹ್ನ ನಗರಕ್ಕೆ ದಿಢೀರ್ ಭೇಟಿ ನೀಡಿದ ದೇವೇಗೌಡ ಗೊರಗೊಂಡನಹಳ್ಳಿ, ಗಾಂಧಿನಗರದ ಹಲವು ಬೂತ್‍ಗಳ ಬಳಿ ಸಂಚರಿಸಿ ಕೈ ಬೀಸಿದರು. ಬೆಂಬಲಿಗರು ಮತ್ತು ಅಭಿಮಾನಿಗಳು ಅವರ ನಡಿಗೆಗೆ ಸಾತ್ ಕೊಟ್ಟರು. ನಂತರ ಅವರು ಹೊನ್ನವಳ್ಳಿಯ ಬೂತ್‍ಗೆ ಬೇಟಿನೀಡಿ ನಾನು ನಾನು ನೀರು ಬಿಟ್ಟ ನಂತರವೇ ಇಲ್ಲಿಗೆ ಬರುತ್ತೇನೆ ಎಂದರು.
ಪತ್ರಕರ್ತರು ತುಮಕೂರಿನಲ್ಲಿ ಮನೆಮಾಡುತ್ತೀರ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು, ಮನೆಯನ್ನು ಮಾಡುತ್ತೇನೆ, ಅಭಿವೃದ್ಧಿಯನ್ನು ಮಾಡಿ ನೀರನ್ನು ಸಮರ್ಪಕವಾಗಿ ನೀಡುವ ಗುರಿಯಿದ್ದು ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು ಮಾತನಾಡುತ್ತಾ ತುಮಕೂರಿನಲ್ಲಿ ಮೊದಲ ಬಾರಿ ಸ್ಪರ್ಧಿಸಿರುವುದರಿಂದ ತಿಪಟೂರಿನ ಜನರ ಮತದಾನ ಉತ್ಸಾಹ ನೋಡಬೇಕೆಂಬ ಆಸೆ ಇತ್ತು, ಹಾಗಾಗಿ ಇಲ್ಲಿಗೆ ಬಂದೆ.
ಹೊನ್ನವಳ್ಳಿ ಜನರು ಶಾಶ್ವತ ನೀರಾವರಿಗೆ ಒತ್ತಾಯಿಸುತ್ತಿರುವುದು ತಮ್ಮ ಗಮನಕ್ಕಿದೆ. ಲೋಕಸಭೆಗೆ ಆಯ್ಕೆಯಾದರೆ ಈ ತಾಲ್ಲೂಕಿನ ನೀರಾವರಿ ಮತ್ತು ಕುಡಿವ ನೀರಿನ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದರು.ಜೆ.ಡಿ.ಎಸ್ ಮುಖಂಡ ಲೋಕೇಶ್ವರ, ಜೆ.ಡಿ.ಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಸೊಪ್ಪು ಗಣೇಶ್, ಕಾರ್ಯಾಧ್ಯಕ್ಷ ಶಿವಸ್ವಾಮಿ ಜತೆಯಲ್ಲಿದ್ದರು.