ಚಳ್ಳಕೆರೆ
ಈ ತಿಂಗಳ 15ರಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚಿತ್ರದುರ್ಗ ಜಿಲ್ಲೆ ಕಡೇ ಸ್ಥಾನ ಗಳಿಸಿದ್ದು, ಈ ಬಗ್ಗೆ ಫಲಿತಾಂಶ ಕಳಪೆಯಾದ ಹಿನ್ನೆಲೆಯಲ್ಲಿ ಅನೇಕ ಶಿಕ್ಷಣ ತಜ್ಞರು ದ್ವಿತೀಯ ಪಿಯುಸಿ ಫಲಿತಾಂಶದ ಬಗ್ಗೆ ವ್ಯಾಪಕ ಅಸಮದಾನ ವ್ಯಕ್ತ ಪಡಿಸಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲೂ ಸಹ ಪ್ರಸ್ತುತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶ ಬೇಸರ ತರಿಸಿದೆ.
ಚಳ್ಳಕೆರೆ ನಗರದ ವಾಸವಿ ಪದವಿ ಪೂರ್ವ ಕಾಲೇಜು ಪ್ರಸ್ತುತ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಉತ್ತಮ ಬಂದಿದೆ ಎಂದು ಸುಳ್ಳು ಮಾಹಿತಿ ಪತ್ರಿಕೆ ಹೇಳಿಕೆ ನೀಡಿರುವ ಕಾಲೇಜು. ಶೇ. 92.04 ಫಲಿತಾಂಶ ಪಡೆದಿರುವುದಾಗಿ ಕಾಲೇಜಿನ ಪ್ರಾಂಶುಪಾಲ ಡಿ.ವೆಂಕಟಶಿವಾರೆಡ್ಡಿ ಪತ್ರಿಕಾ ಹೇಳಿಕೆ ನೀಡಿದ್ದು, ವಾಸ್ತವಾಗಿ ಪ್ರಸ್ತುತ ವರ್ಷದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ವಾಸವಿ ಕಾಲೇಜು ಪಿಸಿಎಂಬಿ ವಿಭಾಗದಲ್ಲಿ ಶೇ. 65.89 ಫಲಿತಾಂಶ ಪಡೆದಿದ್ದು ಶೇ.92.04 ಎಂದು ಪತ್ರಿಕೆಗೆ ಸುಳ್ಳು ಹೇಳಿಕೆ ನೀಡಿದ್ಧಾರೆಂದು ಜಿಲ್ಲಾ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಜಿ.ಬಾಲರೆಡ್ಡಿ ತಮ್ಮ ಅಸಮದಾನ ವ್ಯಕ್ತ ಪಡಿಸಿದ್ಧಾರೆ.
ಫಲಿತಾಂಶದ ಬಗ್ಗೆ ನಿಖರವಾದ ಮಾಹಿತಿಯನ್ನು ಸಾರ್ವಜನಿಕವಾಗಿ ನೀಡುವಾಗ ಕಾಲೇಜಿನ ಪ್ರಾಂಶುಪಾಲರು ಹೆಚ್ಚು ಜಾಗ್ರತೆ ವಹಿಸಬೇಕಿತ್ತು. ಇಲಾಖೆಯ ಮಾರ್ಗದರ್ಶನದಡಿ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವ ಸಂದರ್ಭದಲ್ಲಿ ನಿಖರವಾದ ಅಂಕಿ ಅಂಶಗಳೊಂದಿಗೆ ನೀಡಬೇಕು. ಆದರೆ, ಯಾವುದೇ ರೀತಿಯ ನಿಖರ ಮಾಹಿತಿಯನ್ನು ನೀಡದೇ ಕೇವಲ ಉತ್ತಮ ಫಲಿತಾಂಶ ಬಂದಿದೆ ಎಂದು ಸುಳ್ಳು ಪ್ರಚಾರ ಪಡೆಯುವುದು ಒಳ್ಳೆಯ ಲಕ್ಷಣವಲ್ಲ. ಈಗಾಗಲೇ ದ್ವಿತೀಯ ಪಿಯು ಫಲಿತಾಂಶದಲ್ಲಿ ಜಿಲ್ಲೆಯ ಸಾಧನೆಯೇ ಕುಸಿತ ಕಂಡಾಗ ಕೇವಲ ಪ್ರಚಾರ ಮತ್ತು ದಾಖಲಾತಿಗಳ ಹೆಚ್ಚಳಕ್ಕಾಗಿ ಕಾಲೇಜು ಪ್ರಾಂಶುಪಾಲರು ಸುಳ್ಳು ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ಹಾಗೂ ಇಲಾಖೆಯನ್ನು ತಪ್ಪು ದಾರಿಗೆ ಎಳೆದಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ್ಧಾರೆ.
ಪಿಯು ಮಂಡಳಿ ನೀಡಿದ ಫಲಿತಾಂಶ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿದಾಗ ಪ್ರಸ್ತುತ ಕಾಲೇಜು ಪಿಸಿಎಂಬಿ ವಿಭಾಗದಲ್ಲಿ 65.89 ಫಲಿತಾಂಶ ಪಡೆದಿದ್ದು, ಕಾಲೇಜಿನ ಒಟ್ಟಾರೆ ಫಲಿತಾಂಶ 67.04 ಆಗಿದ್ದು, ಫಲಿತಾಂಶದ ಒಟ್ಟಾರೆ ನೈಜ್ಯ ಅಂಶವನ್ನು ಪತ್ರಿಕೆಗಳಿಗೆ ನೀಡಬೇಕಿತ್ತು. ಆದರೆ, ಇಲಾಖೆಯ ಎಲ್ಲಾ ನಿಯಮಗಳನ್ನು ಅಲಕ್ಷಿಸಿ ಕೇವಲ ಪ್ರಚಾರ ಪಡೆಲು ಹೆಚ್ಚು ಫಲಿತಾಂಶ ¯ಭ್ಯವಾಗಿದೆ ಎಂದು ಪ್ರಕಟಿಸುವುದು ಸರಿಯಲ್ಲ. ಪ್ರಸ್ತುತ ಸ್ಥಿತಿಯಲ್ಲಿ ಸರ್ಕಾರಿ ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜುಗಳಲ್ಲಿ ಎಲ್ಲಾ ವಿದ್ಯಾರ್ಥಿಗಳ ಪರಿಶ್ರಮದಿಂದ ಅಭ್ಯಾಸ ಮಾಡಿ ತಮ್ಮ ಶ್ರಮಕ್ಕೆ ತಕ್ಕಂತೆ ವಿವಿಧ ವಿಷಯಗಳಲ್ಲಿ ಅಂಕಗಳನ್ನು ಪಡೆದಿರುತ್ತಾರೆ. ಆದರೆ, ಅನಗತ್ಯವಾಗಿ ಸುಳ್ಳು, ಅಪಪ್ರಚಾರ ಪಡೆದು ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಸರಿಯಲ್ಲ. ಶಿಕ್ಷಣ ಇಲಾಖೆಯ ಗೌರವವನ್ನು ಉಳಿಸುವಲ್ಲಿ ಎಲ್ಲರೂ ಗಮನಹರಿಸಬೇಕಾಗಿದೆ.