ಕಲಿಕೆ ಸದಾ ನಿರಂತರವಾಗಿರಬೇಕು;ಶಿಮೂಶ

ಚಿತ್ರದುರ್ಗ :
       ಕಲಿಕೆ ಸದಾ ನಿರಂತರವಾಗಿರಬೇಕು. ತಮ್ಮ ಕ್ಷೇತ್ರದಲ್ಲಿ ಆಗುವ ಪೂರಕ ಬದಲಾವಣೆಗಳನ್ನು ಬೆಳವಣಿಗೆಗಳನ್ನು ಗಮನಿಸುತ್ತಾ ಅನುಸರಿಸುತ್ತಾ ತಮ್ಮನ್ನು ತಾವು ಆಧುನೀಕರಿಸಿಕೊಳ್ಳಬೇಕು ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.
       ಇಂಡಿಯನ್ ಅಸೋಸಿಯೇಷನ್ ಆಫ್ ಮೆಡಿಕಲ್ ಮೈಕ್ರೋಬಯೊಲಾಜಿಸ್ಟ್ ಕರ್ನಾಟಕ ಚಾಪ್ಟರ್ ಮತ್ತು ಮೈಕ್ರೊಬಯೊಲಜಿ ವಿಭಾಗ, ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಚಿತ್ರದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ನಿರಂತರ ವೈದ್ಯಕೀಯ ಅಧ್ಯಯನ ಕುರಿತ ಮೊದಲ ತ್ರೈಮಾಸಿಕ ರಾಜ್ಯಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಶರಣರು ಮಾತನಾಡಿದರು
        ಪ್ರತಿದಿನವು ಒಂದಲ್ಲೊಂದು ಕಡೆ ತಮ್ಮ ಕ್ಷೇತ್ರದಲ್ಲಿ ಆಗುವ ಸಂಶೋಧನೆಗಳಿಂದ ಹೊಸಹೊಸ ವಿಚಾರಗಳು ಬೆಳಕಿಗೆ ಬರುತ್ತವೆ. ನೀವೂ ಅವುಗಳನ್ನು ತಿಳಿದುಕೊಳ್ಳುವುದರ ಮುಖಾಂತರ ಉತ್ತಮ ವ್ಯಕ್ತಿಗಳಾಗಬೇಕು ಎಂದು ಶರಣರು ಹೇಳಿದರು.
       ಈ ಸಂದರ್ಭದಲ್ಲಿ ಡಾ. ಕೆ. ಅನುರಾಧ, ಬಸವೇಶ್ವರ ವೈದ್ಯಕೀಯ ಕಾಲೇಜು ಪ್ರಾಚಾರ್ಯರಾದ ಡಾ|| ಜಿ. ಪ್ರಶಾಂತ್, ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ|| ಮಂಜುನಾಥ್ ಎಸ್.ಎಂ., ಧಾರವಾಡದ ಎಸ್‍ಡಿಎಂ ವೈದ್ಯಕೀಯ ವಿಜ್ಞಾನಗಳ ಕಾಲೇಜಿನ ಪ್ರಾಧ್ಯಾಪಕರಾದ ಡಾ|| ರಾಘವೇಂದ್ರ ಡಿ. ಕುಲಕರ್ಣಿ, ಮಣಿಪಾಲ್ ಕಸ್ತೂರಿಬಾ ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ|| ವಿ. ಶಶಿಧರ್, ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಡಾ|| ಎ. ರಂಜಿತ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕರಾದ ಡಾ. ಈ. ಚಿತ್ರಶೇಖರ್, ಡಾ. ಜಿ.ಎನ್. ಮಲ್ಲಿಕಾರ್ಜುನಪ್ಪ ಮತ್ತಿತರರು ಇದ್ದರು.ಡಾ|| ಡಿ.ಎಸ್. ಶುಭಾ ಸ್ವಾಗತಿಸಿದರು. ಡಾ|| ಸುಧೀಂದ್ರ ಎಲ್ಲರನ್ನು ವಂದಿಸಿದರು.

 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap