ಪುಂಡಪೋಕರಿಗಳ ಅಡ್ಡೆಯಾದ ಕಲ್ಪತರು ಕ್ರೀಡಾಂಗಣ..!

ತಿಪಟೂರು
    ಕ್ರೀಡಾಪಟುಗಳಿಗೆ ಆಶ್ರಯತಾಣವಾಗಿ ಅವರ ಕನಸುಗಳಿಗೆ ನೀರಿರೆಯಬೇಕಾಗಿದ್ದ ತಾಲ್ಲೂಕು ಕಲ್ಪತರು ಕ್ರೀಡಾಂಗಣ ಇಂದು ಪುಂಡ ಪೋಕರಿಗಳ, ಗುತ್ತಿಗೆದಾರರು ತಮ್ಮ ಸರಕು ಸರಂಜಾಮುಗಳನ್ನು ತುಂಬಿಕೊಳ್ಳಲು ಡಂಪಿಂಗ್ ಯಾರ್ಡ್ ಆಗಿ ಮಾರ್ಪಡಿಸಿಕೊಂಡಿದ್ದಾರೆ.
   
     ನಗರದಲ್ಲಿ ಕ್ರೀಡಾಪಟುಗಳಿಗಾಗಿ ಇರುವ ಒಂದೇ ಒಂದು ಆಶ್ರಯ ತಾಣವೆಂದರೆ ಅದುವೆ ಕಲ್ಪತರು ಕ್ರೀಡಾಂಗಣ. ಆದರೆ, ಇದೇ ಕ್ರೀಡಾಂಗಣವೀಗ ಪಕ್ಕದ ಹೌಸಿಂಗ್ ಬೋರ್ಡ್‍ನಲ್ಲಿ ರಸ್ತೆ ಕಾಮಗಾರಿ ಮಾಡುತ್ತಿರುವವರ ಗುತ್ತಿಗೆದಾರರಿಗೆ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗುವುದಲ್ಲದೆ, ಸುತ್ತಮುತ್ತಲಿನ ಸಾರ್ವಜನಿಕರು ಸಹ ತಮ್ಮ ಮನೆ ಕಸಗಳನ್ನು ಇಲ್ಲಿಯೇ ಹಾಕುವ ಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ.
ಕ್ರೀಡಾಂಗಣಕ್ಕೆ ಕಾಲಿಟ್ಟ ಪೆಟ್ಟಿಗೆ ಅಂಗಡಿ :
     ಇನ್ನು ಶಾಲಾ ಆವರಣದ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ಬೀಡಿ/ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟಮಾಡುವ ಹಾಗಿಲ್ಲ ಎಂಬ ಕಾನೂನು ಮತ್ತು ಫಲಕಗಳನ್ನು ಹಾಕಿಕೊಂಡು ಬಂದ ಬಂದವರಿಗೆಲ್ಲಾ ಮಾರಾಟ ಮಾಡುತ್ತಾರೆ. ಇದು ಇಷ್ಟು ದಿನ ನಗರದ ತುಂಬೆಲ್ಲಾ ಇತ್ತು. ಆದರೆ ಈಗ ಕ್ರೀಡಾಂಗಣಕ್ಕೆ ಬರುವ ಜನರು ಮತ್ತು ವಿದ್ಯಾರ್ಥಿಗಳನ್ನೇ ಗಮನದಲ್ಲಿಟ್ಟುಕೊಂಡು ಕ್ರೀಡಾಂಗಣದಲ್ಲಿ ಹೌಸಿಂಗ್ ಬೋರ್ಡ್ ಕಡೆಗೆ ಮುಖಮಾಡಿ ಚರಂಡಿಯ ಮೇಲೆ ಪಟ್ಟಿಗೆ ಅಂಗಡಿಯನ್ನಿಟ್ಟುಕೊಂಡು ಹಿಂದೆ ಸಿಗರೇಟ್ ಸೇದಲು ಜಾಗವನ್ನು ಮಾಡಿಕೊಟ್ಟಿದ್ದಾರೆ.
ಸುತ್ತಮುತ್ತಲ ಬೇಡದ ತ್ಯಾಜ್ಯವೆಲ್ಲಾ ಕ್ರೀಡಾಂಗಣದೊಳಗೆ :
 
     ಇನ್ನು ಸರ್ಕಾರಿ ಮತ್ತು ಕಲ್ಲು ಚಪ್ಪಡಿಗಳು, ಕಾಡುಗಲ್ಲುಗಳು, ಮಣ್ಣನ್ನು ಇಲ್ಲಿಯೇ ತಂದು ಸುರಿಯುತ್ತಿದ್ದು ಇದರ ಮೇಲೆ ಬೆಳೆದಿರುವ ಗಿಡಗಳು ಮರಗಳಾದರು ಕ್ರೀಡಾಂಗಣದವರ ಬೇಜವಾಬ್ದಾರಿಯಿಂದ ಮೂತ್ರವಿಸರ್ಜನೆ ತಾಣಗಳಾಗಿ ಮಾರ್ಪಟ್ಟಿವೆ.
ಅನೈತಿಕ ಚಟುವಟಿಕೆಗಳ ತಾಣ :
     ನಗರದಲ್ಲಿ ಮಟ್ಕಾ, ಮಾದಕ ವಸ್ತುಗಳ ಮಾರಾಟ, ಬೆಟ್ಟಿಂಗ್ ಪ್ರಕರಣಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿಯೇ ಎಲ್ಲರಿಗೂ ಆಶ್ರಯ ತಾಣವಾಗಿ ಕ್ರೀಡಾಂಗಣದ ಗಿಡಗೆಂಟೆಗಳು ಕೂಗಿ ಕರೆಯುತ್ತಿವೆ. ಇದಲ್ಲದೆ ಕಾಲೇಜಿಗೆ ಚಕ್ಕರ್ ಹೊಡೆಯುವ ವಿದ್ಯಾರ್ಥಿಗಳು ಮೊಬೈಲ್ ಹಿಡಿದು ಗಿಡಗಳ ಕೆಳಗೆ ಕುಳಿತುಕೊಂಡು ಕಾಲಕಳೆಯುವುದಲ್ಲೇ ವಿದ್ಯಾರ್ಥಿಗಳ ಭವಿಷ್ಯವಾಗಬೇಕಾಗಿದ್ದ ಕ್ರೀಡಾಂಗಣವೇ ವಿದ್ಯಾರ್ಥಿಗಳಿಗೆ ಮಾರಕವಾಗಿ ಪರಿಣಮಿಸುತ್ತಿರುವುದು ಕ್ರೀಡಾಪಟುಗಳ ದುರ್ದೈವ.
ನಗರ ಸಭೆಯವರು ಒಂದು ಹೆಜ್ಜೆ ಮುಂದೆ :
     ಇನ್ನೂ ಕ್ರೀಡಾಂಗಣದ ಒಳಗಿನಿಂದ ಹೌಸಿಂಗ್ ಬೋರ್ಡ್‍ಗೆ ಇಲ್ಲದ ರಸ್ತೆಯನ್ನು ಕಲ್ಪಿಸಲು ಹೋಗಿ ಒಂದು ಸೇತುವೆಯನ್ನು ನಿರ್ಮಿಸಿದ್ದಾರೆ. ಕ್ರೀಡಾಂಗಣದ ಉಸ್ತುವಾರಿಯಾದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರುದ್ರಪ್ಪ ತಿಳಿಸುವಂತೆ ಇಲ್ಲಿ ರಸ್ತೆಯನ್ನು ನಿರ್ಮಿಸಿರುವುದು ಅಕ್ರಮ ಮತ್ತು ಈಗ ಕ್ರೀಡಾಂಗಣ ಸುತ್ತಲೂ ಕಾಂಪೌಂಡ್ ನಿರ್ಮಿಸಲಾಗುವುದೆಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link