ಕಲ್ಪತರು ನಾಡಿನ ಮತದಾರರ ಚಿತ್ತ ಯಾರತ್ತ?

ತಿಪಟೂರು :

ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ

       ವಿಶ್ವದಲ್ಲೆ ಭಾರತದ ಚುನಾವಣೆಯತ್ತ ದೃಷ್ಠಿ ನೆಟ್ಟಿರುವ ಸಂದರ್ಭ, ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ತುಮಕೂರು ಲೋಕಸಭಾ ಕ್ಷೇತ್ರ ರಾಷ್ಟ್ರದ ಗಮನಸೆಳೆಯುತಿದೆ. ಆದರೆ ಕಲ್ಪತರು ನಾಡು ತಿಪಟೂರು ಮಾತ್ರ ಬಿರು ಬೇಸಿಗೆಯಲ್ಲಿ ಉಷ್ಣಾಂಶ 36ರ ಅಂಚಿನಿಲ್ಲಿದ್ದರು ಚುನಾವಣೆಯ ಕಾವು ಮಾತ್ರ ಏರುತ್ತಿಲ್ಲ.

        ಕಳೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ 3 ಪಕ್ಷಗಳಾದ ಬಿ.ಜೆ.ಪಿ ಜೆ.ಡಿಎಸ್ ಹಾಗೂ ಕಾಂಗ್ರೇಸ್ ನೇರಹಣಾಹಣಿಯಲ್ಲಿ ಕಾಂಗ್ರೇಸ್ ಜಯಭೇರಿ ಬಾರಿಸಿ ಎಸ್.ಪಿ.ಮುದ್ದಹನುಮೇಗೌಡ ಸಂಸದರಾಗಿ ಆಯ್ಕೆಯಾದರು. ತಾಲ್ಲೂಕಿನ ಒಟ್ಟು ಮತಗಳ ಪೈಕಿ ಚಲಾವಣೆಗೊಂಡು 1.75 ಲಕ್ಷ ಮತಗಳಪೈಕಿ ಬಿ.ಜೆ.ಪಿಯ ಜಿ.ಎಸ್.ಬಸವರಾಜು ತಾಲ್ಲೂಕಿನಲ್ಲಿ 58,261 (44.93%) ಮೊದಲನೇ ಸ್ಥಾನದಲ್ಲಿದ್ದು, ಎಸ್.ಪಿ ಮುದ್ದಹನುಮೇಗೌಡ 43,502(33.55%) ಸಾವಿರ ಮತ್ತು ಜೆ.ಡಿ.ಎಸ್.ನ ಎ.ಕೃಷ್ಣಪ್ಪ 23,567(18.18%) ಮತಗಳನ್ನು ತಾಲ್ಲೂಕಿನಲ್ಲಿ ಪಡೆದಿದ್ದರು.

       ಆದರೆ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೆಗೌಡರು ಕಾಂಗ್ರೇಸ್ ಮತ್ತು ಜೆ.ಡಿ.ಎಸ್‍ನ ಕಳೆದ ಬಾರಿಯ 43,502+23,567 = 67,069 ಜೊತೆಯಾದರೆ ಗೌಡರ ಗೆಲುವು ಸುಲಭವಾಗಬಹುದು ಮತ್ತು ಕಾಂಗ್ರೇಸ್ ನಿಂದ ಬಂಡಾಯವೆದ್ದಿದ್ದ ಮಾಜಿ ಸಂಸದರಾದ ಮುದ್ದಹನುಮೇಗೌಡರು ಪ್ರಚಾರಕ್ಕೆ ಬಂದರೆ ಇನ್ನು ಹೆಚ್ಚಿನ ಮತಗಳನ್ನು ಪಡೆಯಬುದು.

        ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಬಿ.ಸಿ.ನಾಗೇಶ್ 61,383 ಮತಗಳನ್ನು ಪಡೆದು ಶಾಸಕರಾಗಿದರೆ ಉಳಿದ ಅಭ್ಯರ್ಥಿಗಳಾದ ಕಾಂಗ್ರೇಸ್‍ನ ಕೆ.ಷಡಕ್ಷರಿ 35,820, ಜೆ.ಡಿ.ಎಸ್.ನ ಲೋಕೇಶ್ವರ 16,927, ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ 13,506 ಮತಗಳನ್ನು ಪಡೆದಿದ್ದರು ಇದರಲ್ಲಿ ಮುಖ್ಯವಾಗಿ 856 ಮತಗಳನ್ನು ನೋಟಾಗೆ ಮತದಾರ ಪ್ರಭುಗಳು ನೀಡಿದ್ದರು.

       ಈ ಬಾರಿಯ ಚುನಾವಣೆಯಲ್ಲಿ ಸುಮಾರು ಲಿಂಗಾಯತ 60 ಸಾವಿರ, ಎಸ್.ಸಿ. 25 ಸಾವಿರ, ಕುರುಬರು 23 ಸಾವಿರ, ಒಕ್ಕಲಿಗರು 18000, ಮುಸ್ಲಿಂ 13 ಸಾವಿರ, ಯಾದವರು 12 ಸಾವಿರ, ಎಸ್.ಟಿ 10 ಸಾವಿರ ಇತರೆ 25 ಸಾವಿರ ಓಟುಗಳಿರಬಹುದೆಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

       ತುಮಕೂರು ಪವಾಡ : ತುಮಕೂರಿನಲ್ಲಿ ಯಾವ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೋ ಆ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮಾತಿನಂತೆ, ಈ ಬಾರಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ಗೆಲ್ಲಿಸಿ ಕೇಂದ್ರದಲ್ಲಿ ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಹೆಚ್ಚು ಜನರು ಜೆ.ಡಿ.ಎಸ್‍ಗೆ ಮತಹಾಕಲು ಮತದಾರರು ತಯಾರಾಗುತ್ತಿದ್ದಾರೆಯೇ?

      ಈ ವೇಳೆಯಲ್ಲಿ ಕಾಂಗ್ರೇಸ್‍ನ ಶಾಸಕ ಕೆ.ಷಡಕ್ಷರಿ ಶಾಸಕರಾಗಿದ್ದು, ಬಿ.ಸಿ.ನಾಗೇಶ್ ಮಾಜಿಶಾಸಕರಾಗಿದ್ದರು ಆದರೆ ಈ ಬಾರಿ ಬಿ.ಸಿ.ನಾಗೇಶ್ ಶಾಸಕರಾಗಿದ್ದು ಬಿ.ಜೆ.ಪಿಗೆ ಇನ್ನು ಹೆಚ್ಚಿನ ಮತ ತರುವಲ್ಲಿ ಶ್ರಮಿಸುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದು ಚುನಾವಣೆಯಲ್ಲೂ ಮೂತ್ರಿಮಾಡಿಕೊಂಡು ಕಾಂಗ್ರೇಸ್-ಜೆ.ಡಿ.ಎಸ್ ಒಟ್ಟಾಗಿ ಶ್ರಮಿಸಿದರೆ ದೇವೇಗೌಡರಿಗೆ 2 ಪಕ್ಷದ ಕಾರ್ಯಕರ್ತರು ಒಟ್ಟಾಗಿ ಮತದಾನ ಮಾಡಿದರೆ ದೇವೆಗೌಡರಿಗೆ ಗೆಲುವುಸಾಧ್ಯವಾಗುತ್ತದೆಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಬಿ.ಜೆ.ಪಿ :

        ಮಾಜಿ ಸಂಸದ ಜಿ.ಎಸ್.ಬಸವರಾಜು ತಾಲ್ಲೂಕಿನ ಅಳಿಯನಾಗಿದ್ದು ಹೆಚ್ಚಿನ ವೀರಶೈವಮತಗಳನ್ನು ಗಳಿಸಬಹುದು ಮತ್ತು ಮೊದಿಯ ಅಲೆಯಲ್ಲೇ ಮತ್ತು ಅವರ ಸಾಧನೆಯನ್ನೇ ಪ್ರಧಾನವಾಗಿಟ್ಟುಕೊಂಡು ಪ್ರಚಾರಮಾಡುತ್ತಿರುವುದರಿಂದ ಯುವ ಜನತೆಯು ಹೆಚ್ಚಾಗಿ ಮೋದಿಯ ಸರ್ಕಾರವೇ ಉತ್ತಮವೆಂದು ಮೋದಿಯ ಪರವಾಗಿದ್ದಾರೆ.

ಕಾಂಗ್ರೇಸ್-ಜೆ.ಡಿ.ಎಸ್ :

        ಮೋದಿಯ ಅಲೆಯನ್ನೇ ನಂಬಿರುವ ಬಿ.ಜೆ.ಪಿಗೆ ಇಲ್ಲಿನ ಸಂಸದರು ಜಿಲ್ಲೆಗೇನು ಮಾಡಿದ್ದಾರೆ ಎಂಬ ಪ್ರಶ್ನೆಯನ್ನು ಕೇಳುತ್ತಾ ಹಿಂದಿನ ಸಂಸದರಾದ ಮುದ್ದಹನುಮೇಗೌಡರ ಸಾಧನೆಗಳು ಜನ ಸಾಮಾನ್ಯರ ಹೃನ್ಮನಗಳಲ್ಲಿ ಅಚ್ಚಳಿಯದೇ ಕುಳಿತಿವೇ ಕೇವಲ ಒಂದು ಜಾತಿಗೆ ಸೀಮಿತವಾಗದೇ ಎಲ್ಲಾ ಧರ್ಮೀಯರನ್ನು ಒಳಗೊಂಡತೆ ಅಭಿಮಾನಿಗಳಿದ್ದು ಇವುಗಳ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಜನಪರ ಕಾರ್ಯಕ್ರಮಗಳು ಇವುಗಳೊಂದಿಗೆ ಮಣ್ಣಿನ ಮಗ, ಅಭಿವೃದ್ಧಿಯ ಹರಿಕಾರ ಎಂದು ಹೆಸರಾಗಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ತಾಲ್ಲೂಕಿನಲ್ಲಿಯೇ ಹೆಚ್ಚಿನ ಅಭಿಮಾನಿಗಳಿದ್ದು ಇವರನ್ನ ಗೆಲ್ಲಿಸಲೇಬೇಕಂಬ ಪಣತೊಟ್ಟಂತಿದ್ದು ಯಾರು ಬರದೇ ಇದ್ದರೂ ಅವರವರೇ ಪ್ರಚಾರವನ್ನು ಮಾಡುತ್ತಿದ್ದಾರೆ. ಈಗಾಗಲೇ ಜೆ.ಡಿ.ಎಸ್. ಗೆಲ್ಲುತ್ತದೆ ಎಂದು 1ಕ್ಕೆ 2 ಪಟ್ಟು ಹಣವನ್ನು ಕಟ್ಟುತ್ತಿದ್ದಾರೆಂಬ ಗುಮಾನಿಯೂ ಇದೆ.

       ಅಂತಿಮವಾಗಿ ಮತದಾರರ ಚಿತ್ತ ಯಾರತ್ತ ಎಂಬುದು ಏಪ್ರಿಲ್ 18ರ ಚುನಾವಣೆಯಲ್ಲಿ ತಿಳಿಯಲಿದೇ ಏನೇ ಆದರೂ ಒಟ್ಟು ದೇವೆಗೌಡರ ಗೆಲುವಿನತ್ತ ನೋಡುತ್ತಿರುವುದಕ್ಕೆ ಒಂದೇ ಒಂದು ಆಸೆಎಂದರೆ ಗೌಡರು ಗೆದ್ದರೆ ತಾಲ್ಲೂಕಿಗೆ ಸಮಗ್ರ ನೀರಾವರಿ ಯೋಜನೆಯನ್ನು ತರುತ್ತಾರೆಂಬ ಆಶಾಭಾವನೆಯನ್ನು ತಾಲ್ಲೂಕಿನ ರೈತರಿಗೆ ಭರವಸೆಯಂತೆ ಕಾಣುತ್ತಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link