ಪ್ರಭಾವಿಗಳ ಹಿಡಿತಕ್ಕೆ ಒಳಪಟ್ಟು ಹಾಳಾಗುತ್ತಿರುವ ಕಲ್ಪತರು ಕ್ರೀಡಾಂಗಣ

ತಿಪಟೂರು :
 
    ನಗರದಲ್ಲಿ ಏಕೆ ತುಮಕೂರು ಜಿಲ್ಲೆಗೆ ಮಹಾತ್ಮಾ ಗಾಂಧಿ ಕ್ರೀಡಾಂಗಣವನ್ನು ಬಿಟ್ಟರೆ ಇರುವುದೊಂದೇ ಅದು ತಿಪಟೂರಿನ ಕಲ್ಪತರು ಕ್ರೀಡಾಂಗಣ ಆದರೆ ಈ ಕ್ರೀಡಾಂಗಣವಿಗ ಪ್ರಭಾವಶಾಲಿ ಹಿಡಿತಕ್ಕೆ ಒಳಪಟ್ಟು ತನ್ನ ಅಸ್ಥಿತ್ವವನ್ನೇ ಕಳೆದುಕೊಳ್ಳುವತ್ತ ಹೊರಟಿದೆ. 
    ಈ ಕ್ರೀಡಾಂಗಣದಲ್ಲಿ ಪ್ರಭಾವಿ ಗುತ್ತಿಗೆದಾರರು ತಮ್ಮ ಕಾಮಗಾರಿಗಳಿಗೆ ಬಳಸುವ ಜಲ್ಲಿ, ಮರಳು ಮುಂತಾದ ಕಚ್ಚಾಸಾಮಗ್ರಿಗಳನ್ನು ಹಾಕಿಕೊಂಡಾಗ ಇಲ್ಲಿಗೆ ಬಂದಿದ್ದ ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಇನ್ನೆರಡು ದಿನದಲ್ಲಿ ಸಾಮಗ್ರಿಗಳನ್ನು ತೆಗೆಯದೇ ಹೋದರೆ ಇಲ್ಲಿಹಾಕಿ ಮಟ್ಟಮಾಡುವುದಾಗಿ ತಿಳಿಸಿದ್ದರು. ಆದರೆ ಇಲ್ಲಿ ಸಾಮಗ್ರಿಗಳನ್ನು ಹಾಕಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಕ್ರಿಡಾಪಟುಗಳಿಗೆ ತೊಂದರೆಯು ಆಗುತ್ತಿದೆ ತೆಗೆಸುವ ವ್ಯಸ್ಥೆಯಾದೇ ಇನ್ನುಷ್ಟು ಸಾಮಗ್ರಿಗಳನ್ನು ಹಾಕುವುದಲ್ಲೆ ಇಲ್ಲಸಲ್ಲದ ಕಟ್ಟಡದ ತ್ಯಾಜವನ್ನು ಹಾಕುತ್ತಿದ್ದರೂ ಕಣ್ಮುಚ್ಚಿ ಕುಳಿತು ಕ್ರೀಡಾಂಗಣದ ಅವನತಿಗೆ ದಾರಿಮಾಡಿಕೊಡುತ್ತಿದ್ದಾರೆ.
    ಇನ್ನೂ ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮತ್ತು ಬಿ.ಸಿ.ಎಂ ವಿದ್ಯಾರ್ಥಿನಿಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಬಿ.ಇ.ಓ ಕಛೇರಿ, ಜಿ.ಎಂ.ಹೆಚ್.ಪಿ.ಎಸ್ ಮತ್ತು ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ಖಾಲಿ ಜಾಗದಲ್ಲಿ ಮುಳ್ಳು ಗಂಟಿಗಳು, ಕಾಡುಗಿಡಗಳು ಬೆಳದು ಹಲವಾರು ಅನೈತಿಕ ಚಟುವಟಿಕೆಗೆ ದಾರಿಮಾಡಿ ಕೊಡುವುದಲ್ಲದೇ ಮೊನ್ನೆತಾನೆ ಅನಾಥ ಶವವೊಂದು ದೊರೆತರು ಈ ಯಾವುದೇ ಇಲಾಖೆಗಳು ಕ್ರಮಕೈಗೊಳ್ಳದೇ ಇರುವುದು ಜಾಗ ನಮ್ಮದಲ್ಲವೆನ್ನುವ ಉದ್ದೇಶವೋ ಇಲ್ಲ ಇಲ್ಲದ ಉಸಾಬರಿ ನಮಗ್ಯಾಗೆ ಎಂಬ ದೋರಣೆಯು ಸಾರ್ವಜನಿಕರಿಗೆ ಯಕ್ಷ ಪ್ರಶ್ನೆಯಾಗಿದೆ.
    ಯುವಜನ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಹೇಳುವಂತೆ ಮುಂದಿನ ಸಾಲಿನಲ್ಲಿ ಜಿಲ್ಲೆಯಲ್ಲಿ ಯಾವುದೇ ಕ್ರೀಡಾಂಗಣವಿಲ್ಲ ಅದಕ್ಕಾಗಿ ಯಾದರು ತಿಪಟೂರಿನ ಕಲ್ಪತರು ಕ್ರೀಡಾಂಗಣವನ್ನೇ ನಂಬಿಕೊಂಡು ಕುಳಿತುಕೊಳ್ಳುವಂತಾಗಿದ್ದು ಇದನ್ನೇ ಮುಂದಿನ ಬಾರಿ ದಸರಾ ಕ್ರೀಡಾಕೂಟವನ್ನು ಇಲ್ಲಿಯೇ ಮಾಡಬೇಕಾಗಿದ್ದು ಶೀಘ್ರವಾಗಿ ದುರಸ್ಥಿಮಾಡುವುದಾಗಿ ತಿಳಿಸಿ ಹೋದ ಸಹಾಯಕ ನಿದೇರ್ಶಕರು ಇನ್ನು ತಿಪಟೂರಿನ ಕ್ರೀಡಾಂಗಣದ ಕಡೆಗೆ ತಲೆಯನ್ನೇಹಾಕಿಲ್ಲದಿರುವುದೂ ಸಹ ಇಲ್ಲಿನ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿದೆ.
    ಇನ್ನೂ ಕ್ರಿಡಾಂಗಣದ ಮದ್ಯದಲ್ಲಿಯೇ ಪಕ್ಕದ ಹೌಸಿಂಗ್ ಬೋರ್ಡ್ ಕಾಲೋನಿಗೆ ಹೋಗುವ ರಸ್ತೆಯನ್ನು ಮಾಡಿದರು ಸಹ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ, ಇನ್ನು ಇರುವ ಒಂದು ಗೇಟನ್ನು ಮುಚ್ಚಿದರು ಇರುವ ಒಂದು ಕ್ರೀಡಾಂಗಣಕ್ಕೆ ಸುತ್ತುಮುತ್ತಲೂ ರಹದಾರಿಯಿದ್ದು ಎಲ್ಲಾ ವಾಹನಗಳು ಕ್ರೀಡಾಂಗಣದ ಆವರಣದಲ್ಲಿ ದ್ವಿಚಕ್ರವಾಹನಗಳು ಹೆಗ್ಗಿಲ್ಲದೇ ಸಂಚರಿಸಿ ಹಲವಾರು ಅಪಘಾತಗಳು ಸಂಭವಿಸುತ್ತಲಿವೆ.
    ಕ್ರೀಡಾಂಗಣಕ್ಕೆ ಸಂಬಂಧಿಸಿದ ಕಮಿಟಿಗೆ ಉಪವಿಭಾಗಾಧಿಕಾರಿಗಳೇ ಅಧ್ಯಕ್ಷರಾಗಿದ್ದು ಅವರಿಗೆ ತಿಳಿದಿದೆಯೋ ಇಲ್ಲವೋ ಎಂಬಂತೆ ಕಾಣುತ್ತಿದ್ದು ಸ್ವತಹ ಕ್ರೀಡಾಪಟುವಾದ ಅವರು ತಮ್ಮ ಕಛೇರಿಯ ಮುಂದೆಯೇ ಇರುವ ಕ್ರೀಡಾಂಗಣದ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಉತ್ತಮವಾದ ಕ್ರೀಡಾಂಗಣವಾಗುದುವರಲ್ಲಿ ಯಾವುದೇ ಅನುಮಾನವಿಲ್ಲ.ಇಲ್ಲ ಇದು ಹೀಗೆಯೇ ಮುಂದುವರೆದರೆ ಕ್ರೀಡಾಂಗಣಕ್ಕೆ ಬರುವ ಕ್ರೀಡಾಭಿಮಾನಿಗಳು, ವಯೋವೃದ್ದರು ಹೋರಾಟಮಾಡಿ ಕ್ರೀಡಾಂಗಣವನ್ನು ಉಳಿಸಿಬೇಕಾಗುವ ಅನಿಯಾರ್ಯತೆ ಬರುವ ಕಾಲ ದೂರವಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link