ಹೊಸದುರ್ಗ:
ಮಹಿಳೆಯೋರ್ವಳು ಕಾಲು ಜಾರಿ ತಾಲ್ಲೂಕಿನ ಶ್ರೀರಾಂಪುರ ಹೋಬಳಿಯ ಕಡವಿಗೆರೆ ವಜ್ರ ಚೆಕ್ ಡ್ಯಾಂನಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ ಸಂಭವಿಸಿದೆ.
ಮೃತ ಮಹಿಳೆಯನ್ನು ಮೂಲತಹ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ದೊಡ್ಡೆಣ್ಣೆಗೆರೆ ಗ್ರಾಮದ ವಾಸಿ ಲಕ್ಕಮ್ಮ (40) ಎಂದು ತಿಳಿದು ಬಂದಿದ್ದು ಇವರು ಬುಧವಾರ ಬೆಳಗಿನ ಜಾವ 5.45 ಗಂಟೆ ಸಮಯದಲ್ಲಿ ತಾಲ್ಲೂಕಿನ ಶ್ರೀರಾಂಪುರ ಹತ್ತಿರವಿರುವ ಕಡವಿಗೆರೆ ವಜ್ರದ ಚೆಕ್ ಡ್ಯಾಂ ನೀರಿನ ದಡದಲ್ಲಿ ಕುಳಿತು ಸ್ನಾನ ಮಾಡುವಾಗ ಆಕಸ್ಮಾತ್ ಕಾಲು ಜಾರಿ ನೀರಿನಲ್ಲಿ ಬಿದ್ದು ನೀರು ಕುಡಿದು ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಈ ಬಗ್ಗೆ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.