ರಾಜಾ ಕಾಲುವೆಗೆ ಉರುಳಿಬಿದ್ದ ಕಾರು : ಚಾಲಕ ಸಾವು

ಬೆಂಗಳೂರು

         ವೇಗವಾಗಿ ಹೋಗುತ್ತಿದ್ದ ಕಾರು, ರಾಜಕಾಲುವೆಗೆ ಉರುಳಿಬಿದ್ದು, ಚಾಲಕ ಮೃತಪಟ್ಟು ಅವರ ಇಬ್ಬರು ಸ್ನೇಹಿತರು ಸಣ್ಣಪುಟ್ಟ ಗಾಯಗಳಾಗಿ ಪಾರಾಗಿರುವ ಹೆಚ್‍ಎಸ್‍ಆರ್ ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

         ದೊಡ್ಡಕನ್ನಹಳ್ಳಿಯ ಪವನ್ (26)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ.ಆತನ ಜೊತೆಯಲ್ಲಿದ್ದ ಬಾಬುಜಾನ್ ಹಾಗೂ ಶಾಂತಕುಮಾರ್ ಪಾರಾಗಿದ್ದಾರೆ. ಕಬ್ಬಿಣದ ಅಂಗಡಿ ನಡೆಸುತ್ತಿದ್ದ ಪವನ್, ಸ್ನೇಹಿತರಾದ ಬಾಬುಜಾನ್ ಹಾಗೂ ಶಾಂತಕುಮಾರ್ ಅವರನ್ನು ಕರೆದುಕೊಂಡು ಚಿಕ್ಕನಾಯಕನಹಳ್ಳಿಯ ಅತ್ತೆಮನೆಗೆ ಮಹೀಂದ್ರ ಕೆಯುವಿ 500 ಕಾರಿನಲ್ಲಿ ಹೋಗಿದ್ದರು.

        ಊಟ ಮುಗಿಸಿಕೊಂಡು ರಾತ್ರಿ 11ರ ವೇಳೆ ದೊಡ್ಡಕನ್ನಹಳ್ಳಿಯ ಮನೆಗೆ ವಾಪಾಸ್ ಚಿಕ್ಕನಾಯಕನಹಳ್ಳಿ ಹಾಲನಾಯಕನಹಳ್ಳಿ ರಸ್ತೆಯ ಸರ್ಜಾಪುರದ ಬಳಿ ತಿರುವು ತೆಗೆದುಕೊಳ್ಳುವಾಗ ಆಯತಪ್ಪಿ ರಾಜಕಾಲುವೆಗೆ ಕಾರು ಉರುಳಿಬಿದ್ದಿದೆ.

        ಕಾರು ಚಲಾಯಿಸುತ್ತಿದ್ದ ಪವನ್, ಕಾರಿನಡಿ ಸಿಕ್ಕಿ ಮೃತಪಟ್ಟರೆ, ಉಳಿದಿಬ್ಬರು ಪಾರಾಗಿದ್ದಾರೆ. ಪ್ರಕರಣ ದಾಖಲಿಸಿರುವ ಎಚ್‍ಎಸ್‍ಆರ್ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಜಗದೀಶ್ ತಿಳಿಸಿದ್ದಾರೆ.
ಆಸಿಡ್ ಕುಡಿದು ವೃದ್ದೆ ಸಾವು

           ಅಶೋಕನಗರದ ಸಿ ಸ್ಟ್ರೀಟ್‍ನ ಮನೆಯೊಂದರಲ್ಲಿ ನೀರು ಎಂದು ಭಾವಿಸಿ ವೃದ್ಧೆಯೊಬ್ಬರು ಆಸಿಡ್ ಕುಡಿದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.ಅಶೋಕನಗರದ ಅರ್ಯಮಾಲ (68)ಎಂದು ಮೃತ ದುರ್ದೈವಿಯನ್ನು ಗುರುತಿಸಲಾಗಿದೆ.ಗುರುವಾರ ರಾತ್ರಿ ಅರ್ಯಮಾಲ ನಿದ್ದೆ ಮಂಪರಿನಲ್ಲಿ ಎದ್ದು ನೀರು ಕುಡಿಯುವ ಬದಲು ಗ್ರಾನೈಟ್ ಸ್ವಚ್ಛ ಮಾಡಲು ಬಳಸುವ ಪರ್ಮುಟೇಟೆಡ್ ಆಸಿಡ್ ಕುಡಿದಿದ್ದಾರೆ.

         ಸ್ವಲ್ಪ ಹೊತ್ತಿನಲ್ಲಿಯೇ ಅರ್ಯಮಾಲ ಹೊಟ್ಟೆ ನೋವು ಎಂದು ಒದ್ದಾಡಿ ಅಸ್ವಸ್ಥಗೊಂಡಿದ್ದು ಕೂಡಲೇ ಕುಟುಂಬಸ್ಥರು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಮಧ್ಯರಾತ್ರಿ ಅರ್ಯಮಾಲ ಮೃತಪಟ್ಟಿದ್ದಾರೆ. ಈ ಸಂಬಂಧ ಅಶೋಕನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link