ಬೆಂಗಳೂರು:
ಕಂಪ್ಲಿ ಶಾಸಕ ಗಣೇಶ್ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.ಗಣೇಶ್ ಪರ ವಕೀಲರು ವಾದಕ್ಕೆ ಹೆಚ್ಚಿನ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಮುಂದೂಡಲಾಯಿತು.ಆನಂದ್ ಸಿಂಗ್ ಪರ ವಕೀಲರು ಸಹ ವಾದ ಮಾಡಲು ಸಮಯಾವಕಾಶ ಬೇಕು. ನಮ್ಮ ಸೀನಿಯರ್ ಗೈರುಹಾಜರಾದ ಕಾರಣ ವಾದ ಮಾಡಲು ಸಮಯಬೇಕು ಎಂದಿದ್ದಕ್ಕೆ ನ್ಯಾಯಾಲಯ ಜಾಮೀನು ಅರ್ಜಿಯನ್ನು ಮಾ.15 ಕ್ಕೆ ಮುಂದೂಡಿದೆ. ಜಾಮೀನು ಸಿಗಬಹುದು ಎನ್ನುವ ನೀರಿಕ್ಷೆಯಲ್ಲಿದ್ದ ಕಂಪ್ಲಿ ಗಣೇಶ್‍ಗೆ ಮತ್ತೆ ನಿರಾಶೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
