ಕಂಪ್ಲಿ ಗಣೇಶ್ ಬಂಧನ ವಿಸ್ತರಣೆ

ಬೆಂಗಳೂರು

      ಅನಾರೋಗ್ಯದ ಹಿನ್ನೆಲೆಯಲ್ಲಿ ಕಂಪ್ಲಿ ಶಾಸಕ ಗಣೇಶ್ ಗೈರು ಹಾಜರಾಗಿದ್ದರಿಂದ ರಾಮನಗರದ ಸಿಜೆಎಂ ನ್ಯಾಯಾಲಯವು ನ್ಯಾಯಾಂಗ ಬಂಧನದ ಅವಧಿಯ ವಿಚಾರಣೆಯನ್ನು ಇದೇ ತಿಂಗಳ 19ಕ್ಕೆ ಮುಂದೂಡಿದೆ.

        ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಸಿಜೆಎಂ ಕೋರ್ಟ್ ಆದೇಶದ ಮೇರೆಗೆ ಶಾಸಕ ಗಣೇಶ್‍ರನ್ನು ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು ಬುಧವಾರ ನ್ಯಾಯಾಂಗ ಬಂಧನದ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಿಜೆಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿತ್ತು.

        ಅನಾರೋಗ್ಯದ ಕಾರಣದಿಂದ ಕಳೆದ 6 ದಿನದಿಂದ ವಿಕ್ಟೋರಿಯಾ ಜೈಲು ವಾರ್ಡ್‍ನಲ್ಲಿ ಗಣೇಶ್ ಚಿಕಿತ್ಸೆ ಪಡೆಯುತ್ತಿರುವುದರಿಂದ ವಿಚಾರಣೆಗೆ ಗೈರಾಗಿದ್ದಾರೆ. ಹೀಗಾಗಿ ವಿಚಾರಣೆಯನ್ನು ಮುಂದೂಡಲಾಗಿದೆ.ಪರಪ್ಪನ ಆಗ್ರಹಾರ ಜೈಲಿನಲ್ಲಿರುವ ಗಣೇಶ್‍ರನ್ನು ಫೆ. 21 ರಂದು ರಾಮನಗರ ಪೊಲೀಸರು ಬಂಧಿಸಿ ಫೆ. 22 ರಂದು ರಾಮನಗರ ಸಿಜೆಎಂ ಕೋರ್ಟ್‍ಗೆ ಹಾಜರು ಪಡಿಸಿದ್ದರು.

         ವಿಚಾರಣೆ ನಡೆಸಿದ ನ್ಯಾಯಾಲಯ, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ನ್ಯಾಯಾಂಗ ಬಂಧನ ಅವಧಿ ಮುಗಿದ ಪ್ರಯುಕ್ತ ಬುಧವಾರ ಸಿಜೆಎಂ ಕೋರ್ಟ್ ಮುಂದೆ ಹಾಜರಾಗಬೇಕಿತ್ತು ಇನ್ನು ಮಾರ್ಚ್ 8ರಂದು ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಗಣೇಶ್‍ರ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap