ಎಂ ಎನ್ ಕೋಟೆ
250 ದಾಸಕೂಟದ ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ನಮ್ಮ ಕನಕದಾಸರು. ಅವರ ಆದರ್ಶಗಳು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿವೆ ಎಂದು ಕುರುಬರ ಸಂಘದ ಕಾರ್ಯದರ್ಶಿ ಕೆಂಪರಾಜು ತಿಳಿಸಿದರು.
ಗುಬ್ಬಿ ತಾಲ್ಲೂಕಿನ ಹಾಗಲವಾಡಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನಕದಾಸರು ನಮ್ಮ ಜನಾಂಗಕ್ಕೆ ಇತಿಹಾಸ ಸೃಷ್ಟಿ ಮಾಡಿದ್ದಾರೆ. ಅವರು ಮಾಡಿರುವ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು. ಕನಕದಾಸರ ಜಯಂತಿ ಒಂದು ವರ್ಗಕ್ಕೆ ಸೀಮಿತವಾಗಬಾರದು ಎಲ್ಲ ವರ್ಗದವರು ಆಚರಿಸಬೇಕು.
ಎಲ್ಲರಿಗೂ ಸಮಪಾಲು , ಸಮಬಾಳು ಎಂಬ ಸಂದೇಶವನ್ನು ಕೊಟ್ಟಿದ್ದಾರೆ. ಇಂತಹ ಮಹನೀಯರ ಜಯಂತಿಯನ್ನು ಇಡೀ ರಾಜ್ಯದಲ್ಲಿ ಹಾಗೂ ಹಳ್ಳಿಹಳ್ಳಿಗಳಲ್ಲಿ ಆಚರಣೆ ಮಾಡುತ್ತಿದ್ದಾರೆ. ಅಂತಹ ದಾರ್ಶನಿಕರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಹಾಗಲವಾಡಿಯಲ್ಲಿ ಕನಕ ಯುವಕಸಂಘದ ವತಿಯಿಂದ 531ನೇ ದಾಸಶ್ರೇಷ್ಠ ಕನಕ ಜಯಂತೋತ್ಸವ ಅದ್ದೂರಿಯಾಗಿ ಊರಿನ ಪ್ರಮುಖ ಬೀದಿಯಲ್ಲಿ ನಡೆಯಿತು. ಕನಕದಾಸರ ಮೆರವಣಿಗೆಯಲ್ಲಿ ಗೊರವಯ್ಯ ಕುಣಿತ ಮತ್ತು ವಿವಿಧ ಕಲಾತಂಡಗಳ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣಮೂರ್ತಿ , ರಮೇಶ್ ಮುಖಂಡರಾದ ಕೆಂಪಣ್ಣ , ಎಂ ಎನ್ ಕೋಟೆ ಶಿವಕುಮಾರ್, ಶಿವರಾಜು, ತೇಜಯ್ಯ, ಶಿಕ್ಷಕರಾದ ಕರಿಬಸವಯ್ಯ ಹಾಗೂ ಕನಕ ಯುವಕ ಸಂಘದ ಎಲ್ಲಾ ಯುವಕರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








