ಡಿ.16ಕ್ಕೆ ಕನಕ ಜಯಂತಿ ಕಾರ್ಯಕ್ರಮ

ಚಳ್ಳಕೆರೆ

        ತಾಲ್ಲೂಕಿನಾದ್ಯಂತ ಸುಮಾರು 50 ಸಾವಿರ ಕ್ಕೂ ಹೆಚ್ಚು ಕುರುಬ ಸಮಾಜದ ಬಂಧುಗಳಿದ್ದು, ಈ ಬಾರಿಯ ಶ್ರೀಕನಕ ಜಯಂತಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಬಂಧುಗಳು ಭಾಗವಹಿಸಲು ವಿಶೇಷವಾಗಿ ಮನವಿ ಮಾಡಲಾಗಿದೆ ಎಂದು ಶ್ರೀರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಹಿರಿಯ ಸಹಕಾರಿ ದುರೀಣ ಆರ್.ಮಲ್ಲೇಶಪ್ಪ ತಿಳಿಸಿದ್ಧಾರೆ. ಕಾರ್ಯಕ್ರಮದಲ್ಲಿ ಹೊಸದುರ್ಗ ಶಾಖಾ ಮಠದ ಶ್ರೀಈಶ್ವರಾನಂದಪುರಿಸ್ವಾಮೀಜಿ, ಮಾಜಿ ಶಾಸಕ ಡಿ.ಸುಧಾಕರ ಮುಂತಾದ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದ್ಧಾರೆ.

        ಡಿ.16ರಂದು ಆಚರಿಸಲಿರುವ ಶ್ರೀಕನಕ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಇಲ್ಲಿನ ಕುರುಬರ ಹಾಸ್ಟಲ್ ಆವರಣದಲ್ಲಿ ಸಮುದಾಯದ ಮುಖಂಡರು ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಕಾರ್ಯಕ್ರಮಗಳ ರೂಪರೇಷೆಯ ಬಗ್ಗೆ ಮಾತನಾಡಿದ ಅವರು, ಈಗಾಗಲೇ ತಾಲ್ಲೂಕಿನಾದ್ಯಂತ ವಿವಿಧ ಗ್ರಾಮಗಳಿಗೆ ತೆರಳಿ ಜಯಂತಿಯಲ್ಲಿ ಭಾಗವಹಿಸಲು ಸಮಾಜದ ಮುಖಂಡರಲ್ಲಿ ಮನವಿ ಮಾಡಲಾಗಿದೆ. ಚಳ್ಳಕೆರೆ ತಾಲ್ಲೂಕು ಆಂಧ್ರ ಪ್ರದೇಶದ ಗಡಿಗೆ ಹೊಂದಿಕೊಂಡಿದ್ದು, ಅಲ್ಲಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಮುಖಂಡರು ಭಾಗವಹಿಸುವರು. ತಾಲ್ಲೂಕು ಆಡಳಿತದ ಸಹಕಾರದೊಂದಿಗೆ ಸಮುದಾಯದ ವಿವಿಧ ಸಂಘಟನೆಗಳು ಸಹ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಲಿವೆ ಎಂದರು.

         ತಾಲ್ಲೂಕು ಹಾಲುಮತ ಮಹಾಸಭಾದ ಅಧ್ಯಕ್ಷ, ನಗರಸಭಾ ಸದಸ್ಯ ಎಂ.ಜೆ.ರಾಘವೇಂದ್ರ ಮಾತನಾಡಿ, ಕಳೆದ ಸುಮಾರು 40 ವರ್ಷಗಳ ಹಿಂದೆ ಹಿರಿಯರ ಪರಿಶ್ರಮದಿಂದ ನಗರದ ಮಧ್ಯಭಾಗದಲ್ಲಿ ನಮ್ಮ ಸಮುದಾಯದ ಈ ಜಾಗ ದೊರಕಿದ್ದು, ಸುಮಾರು 3 ಎಕರೆ ಪ್ರದೇಶದ ಕುರುಬ ಸಮಾಜದ ವಶದಲ್ಲಿದ್ದು, ನಿರ್ಮಾಣ ಹಂತದಲ್ಲಿನ ಕನಕ ಭವನ ಕಾಮಗಾರಿಯನ್ನು ಶಾಸಕ ಟಿ.ರಘುಮೂರ್ತಿ ಪೂರ್ಣಗೊಳಿಸಿಕೊಡಬೇಕು ಹಾಗೂ ಚಿತ್ರದುರ್ಗ ರಸ್ತೆಯ ಹಾಸ್ಟಲ್ ಮುಂದೆಯೇ ಕನಕ ವೃತ್ತವನ್ನು ನಾಮಕರಣ ಮಾಡಬೇಕೆಂದು ಸಮುದಾಯದ ಪರವಾಗಿ ಶಾಸಕರನ್ನು ವಿನಂತಿಸುವುದಾಗಿ ತಿಳಿಸಿದರು.

          ಈ ಸಂದರ್ಭದಲ್ಲಿ ಸಮುದಾಯದ ಹಿರಿಯ ಮುಖಂಡ ನಿವೃತ್ತ ಅಧಿಕಾರಿ ಬಿ.ಶಂಕರಪ್ಪ, ವಿ.ಎಸ್.ಬಸವರಾಜಪ್ಪ, ರಾಜಶೇಖರಪ್ಪ, ಕುರುಬ ನೌಕರರ ಸಂಘದ ಗೌರವಾಧ್ಯಕ್ಷ ಎಂ.ಶಿವಲಿಂಗಪ್ಪ, ಅಧ್ಯಕ್ಷ ಎಲ್.ರುದ್ರಮುನಿ, ನಿರ್ದೇಶಕ ರಾಜೇಶ್, ಮಹಿಳಾ ಸಂಘಟನೆಯ ಮೀನಾಕ್ಷಿ, ಆಹಲ್ಯಬಾಯಿ, ಅನ್ನಪೂರ್ಣಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯೆ ಉಮಾಜನಾರ್ಧನ್, ಗೋಪನಹಳ್ಳಿ ಬೀರಲಿಂಗಪ್ಪ, ಎ.ಮಂಜುನಾಥ ಮುಂತಾದವರು ಭಾಗವಹಿಸಿದ್ದರು.

         ಪ್ರತಿಭಾಪುರಸ್ಕಾರ ಕಾರ್ಯಕ್ರಮ :- ಪ್ರಸ್ತುತ 2017ರ ವಾರ್ಷಿಕ ಪರೀಕ್ಷೆಯಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಶೇ.85ರಷ್ಟು ಫಲಿತಾಂಶ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಶೇ. 75ರಷ್ಟು ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ತಾಲ್ಲೂಕು ಕನಕ ನೌಕರರ ಸಂಘದ ವತಿಯಿಂದ ನೀಡಲಿದ್ದು, ಆಸಕ್ತರು ತಮ್ಮ ದಾಖಲಾತಿಗಳೊಂದಿಗೆ ಡಿ.16ರ ಭಾನುವಾರ ಬೆಳಗ್ಗೆ 10 ಗಂಟೆ ಒಳಗೆ ಪ್ರೊ. ಎಂ.ಶಿವಲಿಂಗಪ್ಪ ಅಧ್ಯಕ್ಷರು ಕನಕ ನೌಕರರ ಸಂಘ ಇವರಿಗೆ ನೀಡಲು ಮನವಿ ಮಾಡಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap