ಚಿತ್ರದುರ್ಗ
ಕನಕ ಸಮುದಾಯ ಭವನ ನಿರ್ಮಾಣದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೇ ಎಲ್ಲರೂ ಸೇರಿ ಸರ್ಕಾರ, ಸಮುದಾಯ ಮತ್ತು ಮಠದೊಂದಿಗೆ ನಿರ್ಮಾಣ ಮಾಡಬೇಕೆಂದು ಹೊಸದುರ್ಗದ ಕನಕ ಗುರುಪೀಠದ ಕೆಲ್ಲೋಡು ಶಾಖಾಮಠದ ಪೀಠಾಧ್ಯಕ್ಷರಾದ ಶ್ರೀ ಈಶ್ವರನಾಂದಪುರಿ ಸ್ವಾಮೀಜಿ ಭಕ್ತರಿಗೆ ಸೂಚನೆ ನೀಡಿದರು.
ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯ ಎಸ್.ಜೆ.ಎಂ. ಕಾಲೇಜು ಹಿಂಭಾಗದ ದವಳಗಿರಿ ಬಡಾವಣೆಯಲ್ಲಿ ಅಂದಾಜು 06 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಿರುವ ಕನಕ ಸಮುದಾಯ ಭವನದ ನಿರ್ಮಾಣ ಕುರಿತಂತೆ ರಂಗಯ್ಯನ ಬಾಗಿಲು ಬಳಿಯ ಜಿಲ್ಲಾ ಕುರುಬರ ವಿದ್ಯಾರ್ಥಿ ನಿಲಯದಲ್ಲಿ ಕರೆಯಲಾಗಿದ್ದ ಪೂರ್ವ ಭಾವಿ ಸಭೆಯ ಸಾನಿಧ್ಯವಹಿಸಿ ಮಾತನಾಡಿದರು.
ರಾಜ್ಯದ ಹಲವಾರು ಜಿಲ್ಲೆ ಸೇರಿದಂತೆ ತಾಲ್ಲೂಕು ಮತ್ತು ಹೋಬಳಿಗಳಲ್ಲಿಯೂ ಸಹಾ ಕನಕ ಭವನಗಳು ನಿರ್ಮಾಣವಾಗಿದೆ ಆದರೆ ರಾಜ್ಯದ ಮಧ್ಯ ಕರ್ನಾಟಕವಾದ ಚಿತ್ರದುರ್ಗದ ಕೇಂದ್ರ ಸ್ಥಾನದಲ್ಲಿ ಇದುವರೆವಿಗೂ ಸಹಾ ಕನಕ ಸಮುದಾಯ ಭವನ ನಿರ್ಮಾಣಕ್ಕೆ ಕಾಲಾವಕಾಶ ಆಗಿರಲ್ಲಿಲ್ಲ ಆದರೆ ಈಗ ಸಂಘದಿಂದ ನಗರದಲ್ಲಿ ನಿವೇಶನವನ್ನು ಖರೀದಿ ಮಾಡಲಾಗಿದೆ ಈಗ ಅದರಲ್ಲಿ ಉತ್ತಮವಾದ ಕನಕ ಸಮುದಾಯ ಭವನವನ್ನು ನಿರ್ಮಾಣ ಮಾಡಬೇಕಿದೆ ಬೇರೆ ಯಾವುದೇ ಜಿಲ್ಲೆಯಲ್ಲಿ ಇರದಂತಹ ಸಮುದಾಯ ಭವನವನ್ನು ಸುಂದರವಾಗಿ ನಿರ್ಮಾಣ ಮಾಡಬೇಕಿದೆ ಇದಕ್ಕೆ ನಿಮ್ಮಗಳ ಸಹಾಯ ಮತ್ತು ಸಹಕಾರ ಅಗತ್ಯ ಇದೆ ಎಂದು ಶ್ರೀಗಳು ಹೇಳಿದರು.
ನಮ್ಮ ಜನಾಂಗದವರಾದ ಸಿದ್ದರಾಮಯ್ಯರವರು ಸರ್ಕಾರ ಇದ್ದಾಗ ಕೆಲವಡೆ ಮಾತ್ರ ಕನಕ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಯಿತು.ಆದರೆ ರಾಜ್ಯದ ಇನ್ನೂ ಹಲವಡೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಾಣ ಮಾಡಿಲ್ಲ ಅದರಲ್ಲಿ ಚಿತ್ರದುರ್ಗ ನಗರವೂ ಒಂದಾಗಿದೆ ಈಗಾಗಲೇ ಜಿಲ್ಲೆಯ ಬಹುತೇಕ ತಾಲ್ಲೂಕುಗಳಲ್ಲಿ ಭವನಗಳನ್ನು ನಿರ್ಮಾಣ ಮಾಡಲಾಗಿದೆ. ಈಗ ದುರ್ಗದಲ್ಲಿ ಭವನ ನಿರ್ಮಾಣ ಮಾಡಲು ಕಾಲ ಕೂಡಿ ಬಂದಿದೆ ಇಲ್ಲಿ ಸ್ವಯಂ ಪ್ರತಿಷ್ಠೆಯನ್ನು ಬಿಡುವುದರ ಮೂಲಕ ಸಮುದಾಯ, ಸಮಾಜ ಮತ್ತು ಮಠವನ್ನು ನೋಡುವುದರ ಮೂಲಕ ಭವನ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದು ಶ್ರೀ ಈಶ್ವರನಾಂದಪುರಿ ಸ್ವಾಮೀಜಿ ತಿಳಿಸಿದರು.
ಸರ್ಕಾರ ಬೇರೆ ಪಕ್ಷದ್ದು ಇದೇ ಅವರೇ ಮಾಡಲಿ ಎಂದು ದರ್ಪವನ್ನು ತೋರದೆ ಆ ಪಕ್ಷದಲ್ಲಿ ಕೆಲಸ ಮಾಡುವವರು ನಮ್ಮ ಮನೆಯ ಕೆಲಸ ಎಂದು ಭಾವಿಸುವುದರ ಮೂಲಕ ಬೇರೆಯವರನ್ನು ಸಹಾ ಜೊತೆಯಲ್ಲಿ ಕರೆದುಕೊಂಡು ಹೋಗುವುದರ ಮೂಲಕ ಭವನವನ್ನು ನಿರ್ಮಾಣ ಮಾಡಬೇಕಿದೆ. ಭವನ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಶ್ರೀ ನಿರಂಜನಾಂದಪುರಿ ಸ್ವಾಮೀಜಿ ಉಸ್ತುವಾರಿಯನ್ನು ವಹಿಸಲಿದ್ದಾರೆ
ಅವರು ಈ ಹಿಂದೆ ನಿಗಧಿ ಮಾಡಿದ ದಿನದೊಳಗೆ ಮಠವನ್ನು ನಿರ್ಮಾಣ ಮಾಡಿದ ಕೀರ್ತಿ ಇದೆ ಈ ಹಿನ್ನಲೆಯಲ್ಲಿ ಭವನ ನಿರ್ಮಾಣದ ಜವಾಬ್ದಾರಿಯನ್ನು ಅವರಿಗೆ ನೀಡುವುದರ ಮೂಲಕ ನಾವುಗಳು ಸಹಾಯಕರಾಗಿ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದ ಶ್ರೀಗಳು, ಈ ಹಿಂದೆ ಚಿತ್ರದುರ್ಗದಲ್ಲಿ ಸಂಘದಲ್ಲಿ ಇದ್ದ ಭೀನ್ನಾಭೀಪ್ರಾಯ ಈಗ ಇಲ್ಲ ಎಲ್ಲವನ್ನು ಸರಿ ಮಾಡಲಾಗಿದೆ ಒಟ್ಟಾಗಿ ಕೆಲಸವನ್ನು ಮಾಡುವುದರ ಮೂಲಕ ಶೀಘ್ರವಾಗಿ ಕನಕ ಭವನವನ್ನು ನಿರ್ಮಾಣ ಮಾಡುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಕುರುಬ ಜನಾಂಗಕ್ಕೆ ನನ್ನ ಅನುದಾನವನ್ನು ನೀಡುವುದಾಗಿ ಬಳಕೆ ಮಾಡಿಕೊಳ್ಳುವಂತೆ ಶ್ರೀಗಳಿಗೆ ಹೇಳಿದ್ದೆ ಆದರೆ ಆಗ ಬಳಕೆ ಮಾಡಿಕೊಂಡಿಲ್ಲ ಈಗ ಕನಕ ಭವನ ನಿರ್ಮಾಣ ಕಾರ್ಯಕ್ಕೆ ನನ್ನ ಅನುದಾನದಿಂದ 10 ಲಕ್ಷ ರೂ.ಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿ ಭವನ ನಿರ್ಮಾಣಕ್ಕೆ ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿ ಮತ್ತು ಸಚಿವರಲ್ಲಿ ಮಾತನಾಡಿ, ಸಾಧ್ಯವಾದಷ್ಟು ಹೆಚ್ಚಿನ ಅನುದಾನ ಬಿಡುಗಡೆ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡುವುದಾಗಿ ತಿಳಿಸಿದರು.
ಈ ಪೂರ್ವ ಬಾವಿ ಸಭೆಯ ದಿವ್ಯ ಸಾನಿಧ್ಯವನ್ನು ಕಾಗಿನೆಲೆ. ಕನಕ ಗುರುಪೀಠ, ಶ್ರೀ ನಿರಂಜನಾಂದಪುರಿ ಸ್ವಾಮೀಜಿ ವಹಿಸಿದ್ದರು .ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಮುಖ್ಯ ಆಡಳಿತಾಧಿಕಾರಿಗಳು ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಎಸ್.ಶ್ರೀರಾಮ್ ಪ್ರಧಾನ ಕಾರ್ಯದರ್ಶಿ ಬಿ.ಹೆಚ್.ಗೌಡ್ರು ಹಾಗೂ ಚಿತ್ರದುರ್ಗ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಜಗನ್ನಾಥ್ ಸೇರಿದಂತೆ ಜನಾಂಗದ ಹಲವಾರು ಮುಖಂಡರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ಕನಕ ಸಮುದಾಯ ಭವನ ನಿರ್ಮಾಣಕ್ಕೆ ವಿವಿಧ ಮುಖಂಡರು ಹಣದ ಸಹಾಯ ಮಾಡುವುದಾಗಿ ವಾಗ್ದಾನ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ