ಹಾವೇರಿ :
ನಗರದ ಗೆಳಯರ ಬಳಗದ ಪ್ರಾಥಮಿಕ ಶಾಲಾ ಆವರಣದಲ್ಲಿ ಈ ನೆಲದ ಪ್ರತಿಭಾವಂತ ಕವಿ ವಿಜಯಕಾಂತ ಪಾಟೀಲರಿಗೆ ನೂತನವಾಗಿ ಜಿಲ್ಲೆಯಲ್ಲಿ ಸ್ಥಾಪಿತವಾದ ಕನಕ ಶರೀಫ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು. ಹಿರಿಯ ಕವಿ ಬಿ ಶ್ರೀನಿವಾಸ ಪ್ರಶಸ್ತಿ ಪ್ರಧಾನ ಮಾಡಿ ವಾಸ್ತವ ಬದುಕಿನ ಹಾವೇರಿ ನೆಲ ಭಾಷೆಯಲ್ಲಿ ಮಿಂದೆಂದ ಕಾವ್ಯ ವಿಜಯಕಾಂತರದು. ಕನಕ ಮತ್ತು ಶರೀಫ ಹೆಸರಿನ ಜೋಡಿಯೇ ಪ್ರತಿಯೊಬ್ಬ ಕವಿಗೆ ಕಾವ್ಯ ರಚನೆ ಮಾಡುವ ಪುಲಕದ ಜೊತೆಗೆ ಬದುಕನ್ನು ಪ್ರೀತಿಸುವ ಹುಮ್ಮಸ ತುಂಬುವಂತಹವು.
ಕಟುತ್ವದ ವಾಸ್ತವದಲ್ಲಿ ಬದುಕುತ್ತಿರುವ ಇಂದಿನ ದಿನ ಮಾನಗಳಲ್ಲಿ ಕನಕ ಶರೀಫರು ಸಾಮರಸ್ಯದ ಚೈತನ್ಯ ತುಂಬುವ ಮಾದರಿಗಳು ಎಂದರು.
ಪ್ರಶಸ್ತಿ ಪ್ರಧಾನದ ಅಧ್ಯಕ್ಷತೆ ವಹಿಸಿದ್ದ ಕಥೆಗಾರ ಪ್ರೋ. ಕೋರಗಲ್ ವಿರೂಪಾಕ್ಷಪ್ಪ ಮಾತನಾಡಿ ಚಂಪಾ ಅವರ ನಂತರ ನಮ್ಮ ನೆಲದ ಭಾಷಾ ಸೊಗಡು ಮತ್ತು ಜೀವ ಜಿಗುಟು ಗಟ್ಟಿತನಗಳನ್ನು ತಮ್ಮ ಬರಹಗಳಲ್ಲಿ ಪ್ರಕಟಿಸಿದ ಕವಿ ವಿಜಯಕಾಂತ ಪಾಟೀಲರು ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಜಯಕಾಂತ ಪಾಟೀಲರು ಬದುಕಿನ ಎಲ್ಲ ಸೌಂದರ್ಯ ಮತ್ತು ಕುರೂಪಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಶಕ್ತಿ ಇರುವುದರಿಂದಲೇ ಅನಿಸಿದ್ದನ್ನು ಆಡಬಲ್ಲೆ, ಆಡಿದ್ದನ್ನು ಬರೆಯಬಲ್ಲೆ ಎಂಬ ಛಲ ನನ್ನದು. ನಾನು ಕವಿಯಾಗಿರುವುದರಿಂದಲೇ ಹೆಚ್ಚು ಲವಲವಿಕೆಯಿಂದ ಬದುಕಿದ್ದೇನೆ. ಕನಕ ಶರೀಫರ ಋಣ ನನ್ನ ಹಿಂದೆ ಇದೆ. ಹೀಗಾಗಿ ಕಾವ್ಯ ನನ್ನ ಉಸಿರಾಗಿದ ಎಂದರು.
ವಿಜಯಕಾಂತ ಪಾಟೀಲರ ಬದುಕು ಬರಹ ಕುರಿತು ಸರ್ವಶ್ರೀ ಚಿದಾನಂದ ಕಮ್ಮಾರ, ನಾಗರಾಜ ದ್ಯಾಮನಕೊಪ್ಪ, ಎಸ್ ವ್ಹಿ ಕುಲಕರ್ಣಿ ಎಸ್ ಎನ್ ಮುಗಳಿ ಮಾತನಾಡಿದರು.
ಡಾ. ಜೆ ಆರ್ ಗುಡಿ, ಸುರೇಶ ಕೋರಿಕೊಪ್ಪ ಹಾಗೂ ರಂಜಾನ್ ಕಿಲ್ಲೇದಾರ.ಪಾಟೀಲರ ಕವಿತೆಗಳ ವಾಚನದಲ್ಲಿ ಸರ್ವಶ್ರೀ ಲಿಂಗರಾಜ ಸೊಟ್ಟಪ್ಪನವರ, ಮಾಲತಿ ಭಟ್ಟ, ಗುರುರಾಜ ಹುಚ್ಚಣ್ಣನವರ, ಶಕುಂತಲಾ ಕೋಣನವರ, ಲತಾ ನಿಡಗುಂದಿ, ರೇಖಾ ಭ್ಯರಕ್ಕನವರ, ಜಮೀರ ರಿತ್ತಿ, ಶ್ವೇತಾ ಹನುಮನಹಳ್ಳಿ, ಪೃಥ್ವಿರಾಜ ಬೆಟಗೇರಿ, ಎಂ ಭಾಗ್ಯ, ನಾಜಿಯಾ ಕಿಲ್ಲೇದಾರ, ಶಶಿಕಲಾ ಅಕ್ಕಿ, ವಸಂತ ಕಡತಿ, ಕೆ ಎನ್ ಜಾನ್ವೇಕರ, ಹಸೀನಾ ಹೆಡಿಯಾಲ, ಮಲ್ಲಿಕಾರ್ಜುನ ಶಾಂತಗಿರಿ, ಮೋಹನ ಆರ್ ಬಿ, ಅಭಿಷೇಕ ಚೋಟಗಲ್ಲ,ಬಸವರಾಜ ಬೋವಿ ಮುಂತಾದ 32 ಕವಿಗಳು ಕಾವ್ಯ ವಾಚನ ಮಾಡಿದರು.
ಭಾರತಿ ಯಾವಗಲ್ ಆರಂಭದಲ್ಲಿ ಪ್ರಾರ್ಥನೆಯನ್ನು ಹಾಡಿದರು . ಉತ್ತರ ವೇದಿಕೆಯ ಸಂಚಾಲಕ ರಂಜಾನ ಕಿಲ್ಲೇದಾರ ಸ್ವಾಗತಿಸಿ ಪ್ರ್ರಾಸ್ತಾವಿಕ ನುಡಿಗಳನ್ನಾಡಿದರು. ಎಂ. ಎಸ್. ಮರಿತಮ್ಮಣ್ಣನವರ ಕಾರ್ಯಕ್ರಮ ನಡೆಸಿದರು. ಕೊನೆಯಲ್ಲಿ ಹಿರಿಯ ಕವಿ ಸತೀಶ ಕುಲಕರ್ಣಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ