ಹಿರಿಯೂರು.

ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕನಕದಾಸರು ಕೀರ್ತನೆ ತತ್ವ ಪದಗಳ ಮೂಲಕ ನಾಡು ನುಡಿ ಭಾಷೆಗೆ ತನ್ನದೇ ಆದ ಶ್ರೇಷ್ಠ ಚಿಂತನೆಗಳನ್ನು ಬಿತ್ತಿದ ಸಂತರು ಜಗತ್ತಿನ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಿದರು.
ಕೆಲವು ಪದಗಳಲ್ಲಿ ಹಾಸ್ಯ ವ್ಯಂಗ್ಯ ಬೆಡಗಿನ ಸಾಹಿತ್ಯ ನೀಡಿದ ಮಹಾ ಮಹಿಮಾ. ಹುಟ್ಟು ಮುಖ್ಯ ಅಲ್ಲ ಸಾಧನೆ ಮುಖ್ಯ ಎಂದು ಸಾಧಿಸಿ ತೋರಿಸಿದ ಶ್ರೇಷ್ಠ ಚಿಂತಕ ಭಕ್ತಿಯಿಂದ ಶ್ರೀ ಕೃಷ್ಣ ನನ್ನೆ ವಲಿಸಿಕೊಂಡುರು ಎಂದು ಹೇಳಿದರು. ಪ್ರಾಂಶುಪಾಲರಾದ ಧರಣೇಂದ್ರಯ್ಯ ಅವರು ಮಾತನಾಡಿ ಕನಕದಾಸರು ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಬಾಡ ಗ್ರಾಮದಲ್ಲಿ ಜನಿಸಿದರು ಇವರ ಮೂಲ ಹೆಸರು ತಿಮ್ಮಪ್ಪ ಶೂದ್ರ ಸಮಾಜದಿಂದ ಬಂದಂತಹ 250ನೇ ದಾಸರು ಇವರು ನಾಡಿನಲ್ಲಿ ವಚನ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ಬೆಳೆಯುವುದಕ್ಕೆ ಸಾಕ್ಷಿಯಾಗಿ ಮೋಹನ ತರಂಗಿಣಿ ರಾಮಧ್ಯಾನಚರಿತೆ ನಳ ಚರಿತ್ರೆ ಹರಿಭಕ್ತಸಾರ ಕೃತಿಗಳನ್ನು ಬರೆದರು ಶ್ರೀಕೃಷ್ಣನ ನೋಡಲು ಅವಕಾಶ ಸಿಗದಿದ್ದಾಗ ತೆರೆಯೋ ರಂಗ ಬಾಗಿಲು ಎಂದು ಹೇಳಿ ಶ್ರೀಕೃಷ್ಣನನ್ನು ತಿರುಗಿಸಿದ ಮಹಾನ್ ಶ್ರೇಷ್ಠ ಭಕ್ತ ಕನಕದಾಸರು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ತಾಲೂಕ್ ಪಂಚಾಯಿತಿ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ಉಪಾಧ್ಯಕ್ಷರಾದ ಜಯಲಕ್ಷ್ಮಮ್ಮ ತಹಶಿಲ್ದಾರ್ ಜಿ.ಹೆಚ್. ಸತ್ಯನಾರಾಯಣ. ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಮಯ್ಯ. ನಗರಸಭಾ. ಪೌರಯುಕ್ತರಾದ ಶಿವಪ್ರಸಾದ್ ಸದಸ್ಯರಾದ ಎಸ್.ಪಿ.ಟಿ. ದಾದಾಪೀರ್. ಅಂಬಿಕಾ.ಶಿವರಂಜಿನಿ. ಬಾಲಕೃಷ್ಣ. ಸಣ್ಣಪ್ಪ. ತಾಲೂಕು ಕುರುಬರ ಸಂಘದ ಅಧ್ಯಕ್ಷರಾದ ಮಹಾಂತೇಶ್. ವೃತ್ತ ನಿರೀಕ್ಷಕರಾದ ಚೆನ್ನೆಗೌಡ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








