ಕೊರಟಗೆರೆ
ದಾಸ ಪರಂಪರೆಯು ಶ್ರೇಷ್ಠ ಎಂದು ಸಾರಿದ ದಾಸರಲ್ಲಿ ಒಬ್ಬರಾದ ಭಕ್ತಿಯೊಂದಿಗೆ ದೇವರು ನಾವಿದ್ದಲ್ಲಿಗೆ ಬರುತ್ತಾನೆ ಎಂದು ಜಗತ್ತಿಗೆ ತೋರಿಸಿಕೊಟ್ಟ ಹರಿ ಭಕ್ತ ವಿಶ್ವ ಚೇತನ ಕನಕದಾಸರು ಒಂದು ಸಮಾಜಕ್ಕೆ ಸೀಮಿತವಾಗಬಾರದ ಎಂದು ಲೋಕೋಪಯೋಗಿ ಇಲಾಖೆ ಎಇಇ ಗಂಗಾಧರ ಕೊಡ್ಲಿಯವರ ತಿಳಿಸಿದರು.
ಪಟ್ಟಣದ ತಾಲೂಕು ಸಭಾಂಗಣದಲ್ಲಿ ತಾಲೂಕು ಆಡಳಿತವತಿಯಿಂದ ಏರ್ಪಡಿಸಿದ್ದ ಕನಕದಾಸರ 532ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಮಾಜದ ನಿರ್ಮಾಣಕ್ಕೆ ಕೀರ್ತನೆಗಳ ಮೂಲಕವೇ ಅರಿವು ಮೂಡಿಸಿದ ದಾಸಶ್ರೇಷ್ಠರು, ಕನಕದಾಸರು ಜಾತಿ ಮತಗಳ ಕಟ್ಟು ಪಾಡಿಲ್ಲದೆ ತಮ್ಮ ಅನುಭಾವದಿಂದ ಹೊರ ಹೊಮ್ಮುವ ಭಕ್ತಿ ಭಾವಗಳನ್ನು ತಾಯ್ನುಡಿನಲ್ಲಿ ಹಾಡಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಅತ್ಯಮೂಲ್ಯವಾದ ಕೊಡುಗೆ ನೀಡಿದ ದಾಸಶ್ರೇಷ್ಠರು ಕನಕದಾಸರು ಎಂದು ತಿಳಿಸಿದರು.
ಸಮಾಜದ ಏಳಿಗೆಗಾಗಿ ಶ್ರಮಿಸಿದ ಗಣ್ಯ ಮಹನೀಯರ ಅದ್ದೂರಿ ಜಯಂತೋತ್ಸವಗಳಿಗೆ ಸೀಮಿತವಾಗದೆ ಅವರ ಆಶಯಗಳು ಪರಂಪರೆ, ತತ್ವ ಸಿದ್ದಾಂತಗಳ ಕೊಡಿಗೆಗಳ ನೆನೆದು ಜೀವನದಲ್ಲಿ ಆಳವಡಿಸಿಕೊಳ್ಳುವಂತಾಗ ಬೇಕು ಎಂದರು. ಪ್ರಭಾರ ತಹಶೀಲ್ದಾರ್ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನಕದಾಸರ ಕೀರ್ತನೆಗಳು ಮನುಜ ಕುಲವನ್ನು ಸನ್ಮಾರ್ಗದತ್ತ ಕೊಂಡೊಯ್ಯುವಂತಾಗಿವೆ. ಜಾತಿಯತೆಯ ವಿರುದ್ದ ಹೋರಾಟ ನಡೆಸಿ ಗೆದ್ದ ಮಹನೀಯ ಕನಕಸಾದರಾಗಿದ್ದು ಇಂತ ಮಹನೀಯರ ಜಯಂತಿ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ಸರ್ವಧರ್ಮ ಜಯಂತಿಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿ ಗಂಗಾಧರ್, ಬಿ.ಆರ್.ಸಿ, ಸುರೇಂದ್ರನಾಥ್, ಇಎಎ ರಂಗಪ್ಪ, ರೇಷ್ಮೆಇಲಾಖೆ ನರಸಿಂಹಮೂರ್ತಿ, ಆಹಾರ ಇಲಾಖೆಯ ಕೃಷ್ನಮೂರ್ತಿ, ತೋಟಗಾರಿಕಾ ಇಲಾಖೆಯ ಪುಪ್ಪಲತಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಘು, ಮುಖಂಡರಾದ ಮಯೂರ ಗೋವಿಂದರಾಜು, ಚಿಕ್ಕರಂಗಯ್ಯ, ಮೈಲಾರಪ್ಪ, ಕಂದಾಯ ಇಲಾಖೆಯ ನರಸಿಂಹಮೂರ್ತಿ, ಚನ್ನವೀರಯ್ಯ, ನಕುಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕನಕವೃತ್ತದಲ್ಲಿ ವಿಶೇಷ ಪೂಜೆ:
ಪಟ್ಟಣದ ಕನಕವೃತ್ತದಲ್ಲಿ ಕಾಳಿದಾಸ ವಿದ್ಯಾವರ್ಧಕ ಪ್ರೌಢ ಶಾಲೆಯವತಿಯಿಂದ ನಿರ್ದೇಶಕ ನಾಗಭೂಷಣ್ ನೇತೃತ್ವದಲ್ಲಿ ಕನಕದಾಸ ವಿಗ್ರಹಕ್ಕೆ ವಿಶೇಷ ಹೂವಿನ ಅಲಂಕಾರದೊಂದಿಗೆ ಕನಕನಿಗೆ ಉಡುಪಿಯ ಕೃಷ್ಣ ದರ್ಶನ ಸ್ಥಬ್ದ ಚಿತ್ರ ಹಾಗೂ ಕನಕ ದಾಸರ ಕೀರ್ತನೆಯೊಂದಿಗೆ ಪಟ್ಟಣದ ಪ್ರಧಾನ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕ ವೈ.ಸಿ.ವಿ.ಸ್ವಾಮಿ, ಕನಕ ಯುವ ಸೇವೆನೆ ಗುರುಸಿದ್ದಪ್ಪ, ಕನಕ ನೌಕರಸಂಘದ ಅಧ್ಯಕ್ಷ ರಂಗಶ್ಯಾ ಮಯ್ಯ, ರಂಗರಾಜು, ಕುಮಾರ್, ತಿಮ್ಮಣ್ಣ, ಆನಂದ್. ಸಿದ್ದಪ್ಪ, ವೇಣು, ಶಿಕ್ಷಕರುಗಳಾದ ಯೋಗಣ್ಣ, ಪ್ರಭಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ