ಕನಕದಾಸ ಶ್ರೇಷ್ಠ ಬಹುಮುಖಿ ಸಮಾಜ ಚಿಂತಕ

ಚಿತ್ರದುರ್ಗ;

          ಕನಕದಾಸರು ಬಹುಮುಖಿ ಸಮಾಜದ ಚಿಂತಕರಾಗಿ ಹೊಸ ಹೊಸ ಚಿಂತನೆಗಳನ್ನು ಮಾಡಿ ಅದಕ್ಕೆ ತಕ್ಕಂತಹ ಕೀರ್ತನೆಗಳನ್ನು ರಚಿಸಿ ಹಾಡುವ ಮೂಲಕ ಜನರ ಮನಃ ಪರಿವರ್ತನೆ ಹಾಗೂ ಸಮಾಜ ಸುಧಾರಣೆಗೆ ಕಾರಣರಾಗಿದ್ದಾರೆ ಪ್ರಾದ್ಯಾಪಕ ಡಾ.ಕರಿಯಪ್ಪ ಮಾಳಿಗೆ ಬಣ್ಣಿಸಿದ್ದಾರೆ.

         ಇಲ್ಲಿನ ತ.ರಾ.ಸು.ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ಏರ್ಪಡಿಸಲಾದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಕನಕದಾಸರ ಕುರಿತು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.
ಕದಾಸರು, ಹಳ್ಳಿ ಹಳ್ಳಿ ಸುತ್ತಾಡಿ ಕೀರ್ತನೆಗಳನ್ನು ರಚನೆ ಮಾಡಿ ಸ್ವತಃ ಹಾಡಿದ್ದಾರೆ. ಕನಕದಾಸರು ಒಬ್ಬ ಸಂಚಾರಿ ಸಂತನಾಗಿದ್ದುಇವರನ್ನು ಸುಮಾರು 500 ವರ್ಷಗಳ ಹಿಂದೆ ಭಕ್ತ ಕನಕದಾಸರಾಗಿ ಕರೆಯುತ್ತಿದ್ದರು.ಸಮಾಜ ಸುಧಾರಕರಾದ ಇವರನ್ನು ಸಂತ ಕನಕದಾಸರೆಂದು ಕರೆಯಲಾಗುತ್ತಿದ್ದು ಸಂತಸದ ವಿಚಾರವಾಗಿದೆ ಎಂದರು

           ಕನಕದಾಸರು ವಚನಕಾರರಾಗಿ ಹಾಗೂ ಸಂತರಾಗಿ, ಕೀರ್ತನಾಕಾರರಾಗಿ ಜನಸಾಮಾನ್ಯರ ಬದುಕಿನಲ್ಲಿನ ಕಷ್ಟ ಕಾರ್ಪಣ್ಯಗಳನ್ನು ಅರಿತು ತಮ್ಮ ಹಾಡುಗಳ ಮೂಲಕ ನಿವಾರಣೆಗೆ ಶ್ರಮಿಸಿದ್ದಾರೆ. ಅವರು ಒಂದು ಕಡೆ ಸ್ಥೀಮಿತವಾಗಿರದೆ, ಲೋಕಸಂಚಾರಿಯಾಗಿ ತಿರುಗಾಡಿ ಜನರ ಮನದಲ್ಲಿ ಶ್ರೇಷ್ಟ ಸಂತರಾದರು. ಬುದ್ದನ ಮಾರ್ಗಗಳನ್ನು ಅನುಸರಿಸಿದ ಕನಕದಾಸರು, ಸಮಾಜವನ್ನು ಪರಿವರ್ತನೆ ಮಾಡುವಲ್ಲಿ ಅಂದಿನ ಕಾಲದಲ್ಲಿ ಶ್ರೇಷ್ಟವಾದ ಕೆಲಸ ಮಾಡಿದ್ದಾರೆ. ಅವರ ಕೀರ್ತನೆಗಳು ಅತ್ಯಂತ ಸರಳವಾಗಿದ್ದು ಸಾಮಾನ್ಯ ಜನರಿಗೂ ಸಹ ಅರ್ಥವಾಗುವಂತಿವೆ. ಇವರ ಸಾಹಿತ್ಯ ಅತ್ಯಂತ ಸರಳವಾದ ಕಾರಣ ಕೀರ್ತನೆಗಳು ಇಂದಿಗೂ ಜನ ಮಾನಸದಲ್ಲಿ ಉಳಿದಿವೆ ಎಂದರು.

          ಕಾರ್ಯಕ್ರಮ ಉದ್ಘಾಟಿಸಿದ ಲೋಕಸಬಾ ಸದಸ್ಯ ಬಿ.ಎನ್.ಚಂದ್ರಪ್ಪ ಮಾತನಾಡಿ,ಕಾಲಕ್ಕೆ ತಕ್ಕಂತೆ ಸಂತರು, ಶ್ರೇಷ್ಟ ಕವಿಗಳು ಅವತಾರ ಪುರುಷರಾಗಿ ಜನಿಸಿ ಮಾನವನ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡಿದ್ದು ಅದರಲ್ಲಿ ಕನಕದಾಸರ ಒಬ್ಬರಾಗಿದ್ದಾರೆ ಎಂದುತಿಳಿಸಿದರು.

        ಕನಕದಾಸರು ಹಳ್ಳಿ ಹಳ್ಳಿಗೆ ಹೋಗಿ ಕೀರ್ತನೆಗಳನ್ನು ರಚಿಸಿ ಹಾಡುವ ಮೂಲಕ ತಮ್ಮ ಜ್ಞಾನಾರ್ಜನೆಯನ್ನು ಬಿಟ್ಟು ಹೋಗಿದ್ದಾರೆ. ಈ ನಿಟ್ಟಿನಲ್ಲಿ ಕನಕದಾಸರ ಆದರ್ಶಗಳನ್ನು ತಮ್ಮದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ವಿನೋತ್ ಪ್ರಿಯ ಮಾತನಾಡಿ ಕನಕದಾಸರು ಉತ್ತಮ ಕೀರ್ತನೆಗಳನ್ನು ರಚನೆ ಮಾಡಿದ್ದಾರೆ.ಅವರ ಕೀರ್ತನೆಗಳು ಸರಳವಾಗಿದ್ದು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಹಾಗೂ ಮನಮುಟ್ಟುವಂತೆ ರಚನೆ ಮಾಡಿದ್ದಾರೆಎಂದರು.

          ಹೊಸದುರ್ಗ ಕಾಗಿನೆಲೆ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಸಾನೀಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯೆಜಯಮ್ಮ, ಜಿಲ್ಲಾ ಪಂಚಾಯತ್ ಸದಸ್ಯರಾದಆರ್.ಕೃಷ್ಣಮೂರ್ತಿ, ನರಸಿಂಹರಾಜು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿರವೀಂದ್ರ, ಅಪರಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾಕುರುಬರ ಸಂಘದಅಧ್ಯಕ್ಷ ಎಸ್.ಶೀರಾಮ್, ಪ್ರಧಾನ ಕಾರ್ಯದರ್ಶಿ ಡಿ.ವಿ.ಟಿ ಕರಿಯಪ್ಪ, ನಗರಸಭೆ ಸದಸ್ಯೆ ಮೀನಾಕ್ಷಿ, ಮಲ್ಲಿಕಾರ್ಜುನ್ ಹಾಗೂ ವಿವಿಧಗಣ್ಯರು ಉಪಸ್ಥಿತರಿದ್ದರು.

           ಜಯಂತಿಯ ಅಂಗವಾಗಿ ಕನಕದಾಸರ ಭಾವಚಿತ್ರ ಹಾಗೂ ಕಲಾತಂಡಗಳೊಂದಿಗೆ ಕನಕ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಗಾಂಧಿ ವೃತ್ತದ ಮೂಲಕ, ಪ್ರವಾಸಿಮಂದಿರ ಮುಂಭಾಗದಿಂದ ತ.ರಾ.ಸು.ರಂಗಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap