ಹರಿಹರ :

ತಾಲ್ಲೂಕಿನ ಬೆಳ್ಳೂಡಿಯ ಕನಕ ಗುರು ಶಾಖಾ ಮಠದಲ್ಲಿ ಜಗದ್ಗುರು ಶ್ರೀ ನಿರಂಜನಾಂದಪುರಿ ಶ್ರೀಗಳ ಜನ್ಮ ದಿನಾಚರಣೆಯ ಪ್ರಯುಕ್ತ ಶಾಖಾ ಮಠದಲ್ಲಿ ವಿವಿಧ ಗಣ್ಯವ್ಯಕ್ತಿಗಳಿಂದ ಶ್ರೀಗಳಿಗೆ ಶುಭಾಶಯ ಕೋರಿ ಆಶೀರ್ವಾದ ಪಡೆದರು.
ಈ ಸಮಯದಲ್ಲಿ ಕಳೆದ ಬಾರಿ ಎಸ್.ರಾಮಪ್ಪ ಅವರನ್ನು ವಿಧಾನಸಭೆಗೆ ಆಯ್ಕೆಯಾಗುವಂತೆ ಆಶೀರ್ವದಿಸಿದ್ದ ಶ್ರೀಗಳು ಈ ಬಾರಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಅವರುನ್ನು ಸಹ ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಹರಸಿ ಆಶೀರ್ವಾದಿಸಿದರು.
ಈ ಸಂದರ್ಭದಲ್ಲಿ ಶಾಸಕ ಎಸ್.ರಾಮಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ವಕೀಲ ನಾಗೇಂದ್ರಪ್ಪ, ನಗರಸಭಾ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ,ಸಿ.ಎನ್.ಹುಲಿ ಗೇಶ್,ಬೀರಪ್ಪ ಮುಂತಾದ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
