ಕಾಮಿಕ್ ಕಾನ್ ಇಂಡಿಯಾ ಸಂಸ್ಥೆಗೆ ನೋಟೀಸ್ ನೀಡಿದ ಪೊಲೀಸರು

ಬೆಂಗಳೂರು
 
         ಅಶ್ಲೀಲ ಚಿತ್ರವಿರುವ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಿರುವ ಕಾಮಿಕ್ ಕಾನ್ ಇಂಡಿಯಾ ಸಂಸ್ಥೆ ವಿರುದ್ಧ ಮಹದೇವಪುರ ಪೊಲೀಸರು ಪ್ರಕರಣ ದಾಖಲಿಸಿ ನೋಟೀಸ್ ಜಾರಿಗೊಳಿಸಿದ್ದಾರೆ.
 
         ವೈಟ್‍ಫೀಲ್ಡ್‍ನ ಸಭಾಂಗಣವೊಂದರಲ್ಲಿ ನಡೆದ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ 6 ರಿಂದ 18 ವರ್ಷದ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಟಿಕೆಟ್ ಪಡೆದು ಭಾಗವಹಿಸಿದ್ದರು. ಭಾಗವಹಿಸಿದ ಮಕ್ಕಳಿಗೆ ಸಂಸ್ಥೆ ವತಿಯಿಂದ ಪುಸ್ತಕ, ಬ್ಯಾಡ್ಜ್,ಟಿ ಶರ್ಟ್ ಹಾಗೂ ಪೋಸ್ಟರ್ ಇರುವ ಕಿಟ್ ವಿತರಣೆ ಮಾಡಿತ್ತು. ಆ ಪುಸ್ತಕದಲ್ಲಿ ಆಕ್ಷೇಪಾರ್ಹ ಚಿತ್ರಗಳು ಸೇರಿದಂತೆ ಕೆಲವು ಬರಹಗಳು ಇದ್ದವು.
 
       ಇದನ್ನು ನೋಡಿ ಬೆರಗಾದ ಪೆಷಕರು ಒಟ್ಟಾಗಿ ಬೈಯಪ್ಪನಹಳ್ಳಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಘಟನೆಯು ಮಹದೇವಪುರ ಪೆಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಮಹದೇವಪುರ ಪೊಲೀಸರಿಗೆ ವರ್ಗಾಯಿಸಲಾಗಿದೆ ಈ ಸಂಬಂಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಬರಲು ಸಂಸ್ಥೆಯ ಸದಸ್ಯರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link