ಪಾವಗಡ
ತಾಲ್ಲೂಕಿನ ಗಡಿಭಾಗವಾದ ಲಿಂಗದಹಳ್ಳಿ ಗ್ರಾಮದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಅಂಗವಾಗಿ, ಯುವಸೇನೆ ವತಿಯಿಂದ ಲಿಂಗದಹಳ್ಳಿ- ಬೆಂಗಳೂರಿಗೆ ಪ್ರಯಾಣ ಬೆಳೆಸುವ ರಾಜ್ಯ ರಸ್ತೆ ಸಾರಿಗೆ ಬಸ್ಸನ್ನು ಕನ್ನಡ ಬಾವುಟ ಮತ್ತು ಹೂವುಗಳಿಂದ ಅಲಂಕರಿಸಿ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಯುವಸೇನೆ ಅಧ್ಯಕ್ಷ ಎಲ್. ಹನುಮೇಶ್, ಮುಖಂಡರಾದ. ಎಚ್. ಅಂಜನರೆಡ್ಡಿ, ವೆಂಕಟೇಶ್ ಹಾಗೂ ಯುವಸೇನೆಯ ಪದಾಧಿಕಾರಿಗಳು ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ