ಕನ್ನಡ ರಾಜ್ಯೋತ್ಸವ ಸಮಾರಂಭ

ತುರುವೇಕೆರೆ:

       ತಾಲ್ಲೋಕಿನ ನಿರುಧ್ಯೋಗಿಗಳ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ತಾಲ್ಲೋಕಿನಲ್ಲಿ ತೆಂಗು ಉದ್ದಿಮೆ ತೆರೆಯುವ ಚಿಂತನೆ ಈಗಾಗಲೇ ಪ್ರಗತಿಯಲ್ಲಿದೆ ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.

         ಪಟ್ಟಣದ ಶ್ರೀ ಶಾರದಾ ಮಹಿಳಾ ಸಂಘದ ಅವರಣದಲ್ಲಿ ಶ್ರೀ ಶಾರದಾ ಮಹಿಳಾ ಸಮಾಜ ಶನಿವಾರ ಸಂಜೆ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಮಹಿಳೆಯರ ಬಗ್ಗೆ ನನಗೆ ಪೂಜ್ಯ ಭಾವನೆಯಿದೆ. ತಾಲ್ಲೂಕಿನ ತಮ್ಮಗಳ ಆಶೀರ್ವಾದದಿಂದ ನನಗಿ ಪದವಿ ದೊರಕಿದ್ದು ತಾಲ್ಲೂಕಿನ ಅಭಿವೃದ್ದಿಯೇ ನನ್ನ ಮೂಲಮಂತ್ರ.

          ಆ ನಿಟ್ಟಿನಲ್ಲಿ ತಾಲ್ಲೂಕಿನ ಕೆರೆಕಟ್ಟೆಗಳನ್ನು ಈಗಾಗಲೇ ಹೇಮಾವತಿ ನೀರಿನಿಂದ ತುಂಬಿಸಲಾಗಿದೆ. ಬರಗಾಲದ ಪಟ್ಟಿಯಿಂದ ಕೈಬಿಟ್ಟಿದ್ದ ತುರುವೇಕೆರೆ ತಾಲ್ಲೂಕನ್ನು ಹೋರಾಟದ ಫಲವಾಗಿ ಬರಗಾಲ ಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸಿದೆ. ತಾಲ್ಲೋಕಿನ ಅಭಿವೃದ್ದಿ ದೃಷ್ಠಿಯಿಂದ ಕಲ್ಪತರು ನಾಡಾದ ನಮ್ಮ ತಾಲ್ಲೂಕಿನಲ್ಲಿ ತೆಂಗು ಉದ್ದಿಮೆ ಪ್ರಾರಂಭಿಸಿ ತಾಲ್ಲೂಕಿನ ಸಾವಿರಾರು ನಿರುದ್ಯೋಗಿಗಳಿಗೆ ಕೆಲಸ ದೊರೆಕಿಸಿಕೊಡುವ ಚಿಂತನೆಯಿದ್ದು ಈಗಾಗಲೆ ತಾಲ್ಲೂಕಿನ ಎರಡು ಕಡೆ ಜಮೀನು ಗುರ್ತಿಸುವ ಕಾರ್ಯ ಪ್ರಗತಿಯಲ್ಲಿದೆ.

        ಅದೇ ರೀತಿ ತುರುವೇಕೆರೆ ಕೆರೆ ಸುತ್ತ ರಸ್ತೆ ನಿರ್ಮಿಸಿ ತಂತಿ ಬೇಲಿ ಮಾಡಿ ವಾಯುವಿಹಾರಿಗಳಿಗೆ ಅನುವು ಮಾಡಿಕೊಡುವುದರೊಂದಿಗೆ ಪ್ರವಾಸಿ ತಾಣವಾಗಿ ಮಾಡಲು ಉದ್ದೇಶಿಸಿದ್ದು ಇದಕ್ಕೆ ತಮ್ಮಗಳ ಸಹಕಾರ ಅತಿ ಮುಖ್ಯವಾಗಿದೆ ಎಂದರಲ್ಲದೆ ನಿಮ್ಮ ಸಂಘದ ಅಭಿವೃದ್ದಿಗೆ ಸಹಕಾರ ನೀಡುವುದಾಗಿ ತಿಳಿಸಿದರು.

         ಅಧ್ಯಕ್ಷತೆ ವಹಿಸಿದ್ದ ಶಾರದಾ ಮಹಿಳಾ ಸಮಜದ ಅಧ್ಯಕ್ಷೆ ಶ್ರೀಮತಿ ವಿಜಯ ವಿಶ್ವೇಶ್ವರಯ್ಯ ಮಾತನಾಡಿ ಶಾರದಾ ಮಹಿಳಾ ಸಮಾಜ ಪ್ರಾರಂಭವಾಗಿ 50 ವರ್ಷಗಳನ್ನು ಪೂರೈಸಿದ್ದು ಅಂದಿನಿಂದ ಇಂದಿನವರೆಗೆ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ. ಅದರಂತೆ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು ಸಮಾಜದ ಅಭಿವೃದ್ದಿಗೆ ಶಾಸಕರ ಸಹಕಾರದ ಅವಶ್ಯಕತೆಯಿದೆ ಎಂದರು.

          ಪ.ಪಂ.ಅಧ್ಯಕ್ಷ ಲಕ್ಷ್ಮೀನರಸಿಂಹ, ಬಿಜೆಪಿ ನಗರ ಘಟಕ ಅಧ್ಯಕ್ಷ ನವೀನ್ ಬಾಬು, ದಲಿತ ಮುಖಂಡ ಚಿದಾನಂದ್ ಮುಖ್ಯ ಅತಿಥಿಗಳಾಗಿ ಪಾಲ್ಗೋಂಡಿದ್ದರು. ಕಾರ್ಯದರ್ಶಿ ವಿಧ್ಯಾಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಇದೇ ಸಂಧರ್ಭದಲ್ಲಿ ಮಹಿಳಾ ಸಮಜದ ವತಿಯಿಂದ ಶಾಸಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.

         ರಾಜ್ಯೋತ್ಸವದ ಅಂಗವಾಗಿ ಮಕ್ಕಳಿಗೆ ವಿವಿಧ ವೇಷಭೂಷಣ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಾದ ಮಕ್ಕಳಿಗೆ ಶಾಸಕರು ಬಹುಮಾನ ವಿತರಿಸಿದರು. ಶ್ರೀಮತಿ ಮಂಗಳಗೌರಿವೆಂಕಟೇಶ್, ತ್ರಿವೇಣಿ ರಾಜು, ಪದ್ಮ ಮೂರ್ತಿ, ಮಮತ ಸತೀಶ್, ಕೋಕಿಲ ಕೆಂಪೇಗೌಡ, ವೀಣಾ ನರೇಂದ್ರ, ಭಾಗೀರಥಿ ಉದಯ್, ಮಂಜುಳ ಪ್ರಕಾಶ್, ವನಿತ ಪ್ರಭು, ಗೀತಾ ಸುರೇಶ್ ಹಾಗು ಸದಸ್ಯರುಗಳು ಉಪಸ್ಥಿತರಿದ್ದರು. ಖಜಾಂಚಿ ಜಮುನಾಶ್ರೀನಾಥ್ ಸ್ವಾಗತಿಸಿ, ಕಾರ್ಯದರ್ಶಿ ವಿದ್ಯಾಕೃಷ್ಣ ನಿರೂಪಿಸಿ ವಂದಿಸಿದರು. ನೂರಾರು ಪುಟಾಣಿ ಮಕ್ಕಳು ತಮ್ಮ ವೇಷಭೂಷಣ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap